ಮಂಡ್ಯ (ಜು.04): ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಹತ್ಯೆಗೈದಿದ್ದ ಪತ್ನಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.
ಉಸಿರುಗಟ್ಟಿಸಿ ಕೊಂದು ಹೃದಯಾಘಾತದ ಕಥೆ ಕಟ್ಟಿದ್ದ ಚಾಲಾಕಿ ಹೆಂಡತಿಯನ್ನಿಂದು ಮಂಡ್ಯ ಪೂರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜು.29ರಂದು ಮಂಡ್ಯದ ಗುತ್ತಲು ಬಡಾವಣೆಯಲ್ಲಿ ರಾತ್ರಿ ಮಲಗಿದ್ದಲ್ಲೇ 56 ವರ್ಷದ ಅಲ್ತಾಫ್ ಮೆಹದಿ ಸಾವಿಗೀಡಾಗಿದ್ದರು. ತಗ್ಗಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪ ಪ್ರಾಂಶುಪಾಲರಾಗಿದ್ದ ಅಲ್ತಾಫ್ ಹೃದಯಾಘಾತದಿಂದ ಸಾವನ್ನಪ್ಪಿರೋದಾಗಿ ಕುಟುಂಬಸ್ಥರಿಗೆ ಪತ್ನಿ ರಿಜ್ವಾನ ಬಾನು ಹೇಳಿದ್ದಳು.
ಚಿಕ್ಕಬಳ್ಳಾಪುರ: ಹೆತ್ತ ತಂದೆಯನ್ನೇ ಹತ್ಯೆ ಮಾಡಿದ್ದ ಪಾಪಿ ಪುತ್ರ
ಆದರೆ ಮೃತದೇಹದ ಮೇಲಿದ್ದ ರಕ್ತದ ಕಲೆ ನೋಡಿ ಅನುಮಾನಗೊಂಡ ಸಂಬಂಧಿಕರಿಂದ ಮಂಡ್ಯದ ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ತನಿಖೆ ನಡೆಸಿದ ವೇಳೆ ಪತ್ನಿಗೆ ಅಕ್ರಮ ಸಂಬಂಧಕ್ಕಾಗಿ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ ರಹಸ್ಯ ಬಯಲಾಗಿತ್ತು. ಪ್ರಿಯಕರನೊಂದಿಗೆ ಸೇರಿ ಪತ್ನಿ ರಿಜ್ವಾನ ಗಂಡನನ್ನೇ ಕೊಲೆ ಮಾಡಿದ್ದಳು.
2ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ರಿಜ್ವಾನಾಗೆ ರಹಮತ್‌ಉಲ್ಲಾ ಎಂಬಾತನ ಪರಿಚಯವಾಗಿದ್ದು, 27ವರ್ಷದ ರಹಮತ್‌ಉಲ್ಲಾ ಜೊತೆ ಪರಿಚಯ ಬೆಳೆಸಿದ್ದ 40ರ ರಿಜ್ವಾನ ಬಾನು ವಯಸ್ಸಿಗೆ ಬಂದ ಮೂವರು ಮಕ್ಕಳಿದ್ದರೂ ಮಗನ ವಯಸ್ಸಿನವನ ಜೊತೆ ಅಕ್ರಮಸಂಬಂಧ ಹೊಂದಿದ್ದಳು.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನಲ್ಲಿ ವಾಸವಾಗಿದ್ದ ರಹಮತ್ಉಲ್ಲಾಗೆ ಮಂಡ್ಯದಲ್ಲಿ ಟೈಲ್ಸ್ ಅಂಗಡಿ ಇಟ್ಟುಕೊಟ್ಟಿದ್ದಳು. ಟೈಲ್ಸ್ ಅಂಗಡಿ ಕೆಲಸಕ್ಕೆ ಹೋಗುವ ನೆಪದಲ್ಲಿ ರಹಮತ್ ಜೊತೆ ಕಾಮದಾಟ ನಡೆಸುತ್ತಿದ್ದಳು.
ವಿಷಯ ತಿಳಿದು ಹಲವು ಬಾರಿ ರಾಜಿ- ಪಂಚಾಯ್ತಿ ಮಾಡಿ ಠಾಣೆ ಮೆಟ್ಟಿಲೇರಿದ್ದರೂ ಆಕೆ ಯಾವುದನ್ನೂ ಲೆಕ್ಕಿಸದೇ ಪ್ರಿಯಕರನ ಜೊತೆ ಸಂಬಂಧ ಮುಂದುವರೆಸಿದ್ದಳು. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನೇ ಮುಗಿಸುವ ಪ್ಲಾನ್ ಮಾಡಿದ್ದಳು.
ಜು.29ರಂದು ಮಧ್ಯರಾತ್ರಿ ಅಲ್ತಾಫ್ ಮನೆಗೆ ಬಂದಿದ್ದ ಪ್ರಿಯಕರ ರಹಮತ್‌ಉಲ್ಲಾ ಜೊತೆ ಸೇರಿ ಅಲ್ತಾಫ್ ಮಲಗಿದ್ದ ವೇಳೆ ದಿಂಬು ರಗ್ಗಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು. ಇದೀಗ ಪ್ರಕರಣ ಬಯಲಾಗಿತ್ತು ರಿಜ್ವಾನ ಬಂಧಿಸಲಾಗಿದೆ.