ಮೈದುನನ್ನು ಕತ್ತಿಯಿಂದ ಕಡಿದು ಕೊಲೆಗೈದ ತಾಯಿ, ಮಗ

Kannadaprabha News   | Asianet News
Published : May 10, 2020, 07:15 AM IST
ಮೈದುನನ್ನು ಕತ್ತಿಯಿಂದ ಕಡಿದು ಕೊಲೆಗೈದ ತಾಯಿ, ಮಗ

ಸಾರಾಂಶ

ಆಸ್ತಿ ತಕರಾರಿನ ಹಿನ್ನಲೆಯಲ್ಲಿ ತನ್ನ ಮನೆಯ ಬಳಿಗೆ ಪಾನಮತ್ತನಾಗಿ ಬಂದ ಮೈದುನನ್ನು ಅತ್ತಿಗೆ ಹಾಗೂ ಆಕೆಯ ಮಗ ಸೇರಿ ಕತ್ತಿಯಿಂದ ಕಡಿದು, ಕೊಚ್ಚಿ ಕೊಲೆಗೈದ ಹಾಗೂ ಮೈದುನ ಸ್ಥಳದಲ್ಲೇ ಮೃತಪಟ್ಟಘಟನೆಯೊಂದು ಪೆರಾಜೆಯಲ್ಲಿ ನಡೆದಿದೆ.  

ಮಂಗಳೂರು(ಮೇ 10): ಆಸ್ತಿ ತಕರಾರಿನ ಹಿನ್ನಲೆಯಲ್ಲಿ ತನ್ನ ಮನೆಯ ಬಳಿಗೆ ಪಾನಮತ್ತನಾಗಿ ಬಂದ ಮೈದುನನ್ನು ಅತ್ತಿಗೆ ಹಾಗೂ ಆಕೆಯ ಮಗ ಸೇರಿ ಕತ್ತಿಯಿಂದ ಕಡಿದು, ಕೊಚ್ಚಿ ಕೊಲೆಗೈದ ಹಾಗೂ ಮೈದುನ ಸ್ಥಳದಲ್ಲೇ ಮೃತಪಟ್ಟಘಟನೆಯೊಂದು ಪೆರಾಜೆಯಲ್ಲಿ ನಡೆದಿದೆ.

ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದ್ದು, ಕತ್ತಿಯಿಂದ ಕಡಿದ ಅತ್ತಿಗೆ ಮತ್ತು ಆಕೆಯ ಪುತ್ರನನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ. ಉತ್ತರ ಕುಮಾರ (31) ಮೃತ ವ್ಯಕ್ತಿ. ಪೆರಾಜೆ ಗ್ರಾಮದ ಪೀಚೆ ಎಂಬಲ್ಲಿ ಶುಕ್ರವಾರ ಮಧ್ಯರಾತ್ರಿ ಈ ಘಟನೆ ಸಂಭವಿಸಿದೆ. ಪೀಚೆ ಮನೆಯ ತಾರಿಣಿ ಹಾಗೂ ಉತ್ತರಕುಮಾರ ಎಂಬವರ ಜಾಗ ಅಕ್ಕಪಕ್ಕದಲ್ಲಿದ್ದು, ಸಂಬಂಧದಲ್ಲಿ ಇವರು ಅತ್ತಿಗೆ ಮತ್ತು ಮೈದುನ. ಇವರೊಳಗೆ ಆಸ್ತಿ ತಕರಾರು ಇತ್ತು. ಶುಕ್ರವಾರ ರಾತ್ರಿ ವೇಳೆ ಉತ್ತರಕುಮಾರ ಪಾನಮತ್ತನಾಗಿ ತಾರಿಣಿಯವರ ಮನೆ ಬಳಿ ಬಂದು ಬೈಯ್ಯತೊಡಗಿದ್ದ.

ಪತ್ನಿ ಮಕ್ಕಳ ನೋಡಲು ಟ್ರಕ್‌ನಲ್ಲಿ ಬಂದ ಬಾಗಲಕೋಟೆ ಕಾರ್ಮಿಕ!

ಆ ವೇಳೆ ಮಾತಿನ ಚಕಮಕಿ ನಡೆದು ಆತ ಮನೆ ಹೊಕ್ಕಲು ಪ್ರಯತ್ನಪಟ್ಟಾಗ ತಾರಿಣಿ ಮತ್ತು ಆಕೆಯ ಪುತ್ರ ಧರಣೀಧರ ಉತ್ತರಕುಮಾರಗೆ ಕತ್ತಿಯಿಂದ ಕೈಗೆ ಕಡಿದರು. ಬಳಿಕ ಆತ ಕತ್ತಿ ಏಟಿನಿಂದ ತಪ್ಪಿಸಿಕೊಂಡು ಬರೆಯೊಂದನ್ನು ಹತ್ತಲು ಯತ್ನಿಸಿದಾಗ ಮತ್ತೆ ಕತ್ತಿಯಿಂದ 34 ಭಾರಿ ಕೊಚ್ಚಲಾಗಿದೆ.

ಉತ್ತರಕುಮಾರ ಬರೆಯಿಂದ ತೋಟಕ್ಕೆ ಉರುಳಿ ಅಲ್ಲೆ ಮೃತಪಟ್ಟಿದ್ದಾನೆ. ಶನಿವಾರ ಬೆಳಗ್ಗೆ ಮಡಿಕೇರಿಯಿಂದ ಪೊಲೀಸ್‌ ಅಧಿಕಾರಿಗಳು ಆಗಮಿಸಿ ತನಿಖೆ ಆರಂಭಿಸಿದ್ದಾರೆ. ತಾರಿಣಿ (39) ಮತ್ತು ಆಕೆಯ ಮಗ ಧರಣೀಧರ(19) ನನ್ನು ಪೊಲೀಸರು ಬಂಧಿಸಿದ್ದಾರೆ.

ಪಾಸ್ ಇಲ್ಲ, ಮಾಸ್ಕ್ ಇಲ್ಲ, ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಬಿಜೆಪಿ ನಾಯಕ ಮೇಲೆ ಕೇಸ್!

ಮಡಿಕೇರಿ ಪೊಲೀಸರ ನೇತೃತ್ವದಲ್ಲಿ ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಪೋಸ್ಟ್‌ಮಾರ್ಟ್‌ಂ ಮಾಡಲಾಯಿತು. ಉತ್ತರಕುಮಾರನಿಗೆ ಪತ್ನಿ, ಮೂವರು ಮಕ್ಕಳಿದ್ದು, ಮಕ್ಕಳು ಚಿಕ್ಕ ಮಕ್ಕಳಾಗಿದ್ದು ಇಡೀ ಮನೆಗೆ ಆಧಾರ ಸ್ತಂಭವಾಗಿದ್ದ. ಇದೀಗ ಕುಟುಂಬ ಕಂಗಾಲಾಗಿದೆ.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!