ಬಿಜೆಪಿಗೆ ಆಹಾರವೇ ಅಲ್ಪಸಂಖ್ಯಾತರು, ಅವರಿಲ್ಲದಿದ್ರೆ ಬಿಜೆಪಿ ಪಕ್ಷವೇ ಇಲ್ಲ ಎಂದು ಮಾಜಿ ಸಚಿವ ರಮನಾಥ್ ರೈ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರು(ಜ.18): ಬಿಜೆಪಿಗೆ ಆಹಾರವೇ ಅಲ್ಪಸಂಖ್ಯಾತರು, ಅವರಿಲ್ಲದಿದ್ರೆ ಬಿಜೆಪಿ ಪಕ್ಷವೇ ಇಲ್ಲ ಎಂದು ಮಾಜಿ ಸಚಿವ ರಮನಾಥ್ ರೈ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕನಕಪುರದಲ್ಲಿ ಏಸು ಪ್ರತಿಮೆ ವಿರೋಧಿಸಿ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಬಿಜೆಪಿ ಅಂಗಪಕ್ಷಗಳು ವರ್ತಿಸುತ್ತಿವೆ. ಕನಕಪುರದಲ್ಲಿ ಯೇಸುವಿನ ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ಪ್ರತಿಭಟನೆ ನಡೆಯಿತು. ದ.ಕ ಜಿಲ್ಲೆಯನ್ನು ಮತೀಯ ಪ್ರಯೋಗಾಲಯ ಮಾಡಲು ಹೊರಟ ಸಂಘಟನೆ ಮುಖಂಡ ಪ್ರಚೋದನಕಾರಿ ಮಾತು ಆಡಿದ್ದಾರೆ ಎಂದು ಆರೋಪಿಸಿದ್ದಾರೆ.
undefined
'ಜೈಶ್ರೀರಾಮ್ ಎಂದರೆ ಮಕ್ಕಳು ಹೆದರ್ತಾರೆ'..!
ಕ್ರೈಸ್ತ ಸಮುದಾಯ ದಕ್ಷಿಣ ಕನ್ನಡ ಜಿಲ್ಲೆಯ ಸಾಮರಸ್ಯ ಬಯಸುತ್ತಾರೆ. ಕ್ರೈಸ್ತರು ಪ್ರಚೋದನೆಯಾಗಲು ಭಾಷಣ ಮಾಡಿದ್ದಾರೆ. ಕ್ರೈಸ್ತರು ಬೀದಿಗಿಳಿದ್ರೆ ರಾಜಕೀಯ ಲಾಭ ಗಳಿಸುವ ಹುನ್ನಾರ ಮಾಡಲಾಗುತ್ತಿದೆ. ಅಮೆರಿಕಾದಲ್ಲಿ ಕೆಲ ಚರ್ಚ್ಗಳನ್ನು ದೇವಸ್ಥಾನಗಳಾಗಿ ಕಾನೂನು ಪ್ರಕಾರ ಪರಿವರ್ತಿಸಿದ್ದಾರೆ. ನಾನು ಸ್ವತಃ ಹೋಗಿ ನೋಡಿದಂತೆ ಕಾನೂನಿನ ಪ್ರಕಾರವೇ ಅದು ನಡೆಯುತ್ತೆ ಎಂದಿದ್ದಾರೆ.
ರಾಜ್ಯ ಸರ್ಕಾರ ಶ್ರೀರಾಮ ಶಾಲೆಯ ಅಕ್ಕಿ ನಿಲ್ಲಿಸಿದ್ದಾರೆ ಅಂತಾರೆ. ಆದರೆ ಒಂದು ಕೆ.ಜಿ ಅಕ್ಕಿಯೂ ಕೊಲ್ಲೂರು ದೇವಸ್ಥಾನದಿಂದ ಶಾಲೆಗೆ ಹೋಗಿಲ್ಲ. ಹೋಗಿದ್ದು ಪ್ರತೀ ತಿಂಗಳು ನಾಲ್ಕು ಲಕ್ಷದ ಚೆಕ್ ಮಾತ್ರ. ಅದನ್ನ ಸ್ವಾರ್ಥಕ್ಕೆ ಬಳಸಿದ್ದಾರಾ? ಅಥವಾ ಶಾಲೆಗೆ ಬಳಸಿದ್ದಾರಾ? ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
'20 ವರ್ಷ ಬೇಕಾದ್ರೆ ಆಳ್ವಿಕೆ ಮಾಡಿ, ಜನರಿಗೆ ವಿಷ ಹಾಕ್ಬೇಡಿ'
ಇವತ್ತು ಬಿಜೆಪಿ ಪಕ್ಷ ಸಮಾಜ ಒಡೆಯೋ ಕೆಲಸವನ್ನು ಮಾಡ್ತಿದೆ. ದ.ಕ ಜಿಲ್ಲೆಯ ಯಾವುದೇ ಹತ್ಯೆಯಲ್ಲಿ ಕಾಂಗ್ರೆಸ್‌ನ ಮುಸ್ಲಿಂ ಅಥವಾ ಹಿಂದೂ ಇಲ್ಲ. ಇದನ್ನು ನಾನು ಎಲ್ಲಿ ಬೇಕಾದರೂ ಪ್ರಮಾಣ ಮಾಡಲು ಸಿದ್ದ ಎಂದಿದ್ದಾರೆ.
ರಾಜ್ಯದಲ್ಲಿ ಎಸ್ ಡಿಪಿಐ ಸಂಘಟನೆ ನಿಷೇಧ ವಿಚಾರವಾಗಿ ಪ್ರತಿಕ್ರಿಯಿಸಿ, ಯಾವುದೇ ಮತೀಯವಾದವನ್ನ ನಾವು ಒಪ್ಪೋದಿಲ್ಲ. ನಿಷೇಧ ಸಂಬಂಧ ಲಾಭ ನಷ್ಟದ ಲೆಕ್ಕಾಚಾರ ಇರಬಹುದು. ಯಾರಿಗೆ ಲಾಭ ಇದೆ ಅನ್ನೋದನ್ನ ನೀವೇ ಗ್ರಹಿಸಿಕೊಳ್ಳಿ. ಅವರಿಗೆ ಲಾಭ ಆಗುತ್ತೆ ಅನ್ನೋದಾದ್ರೆ ಮಾಡ್ತಾರೆ..? ನಷ್ಟ ಆಗುತ್ತೆ ಅನ್ನೋದಾದ್ರೆ ಮಾಡದೆಯೂ ಇರಬಹುದು. ಆದ್ರೆ ಈ ವಿಚಾರದಲ್ಲಿ ನಮ್ಮ ಪಕ್ಷದ ನಿಲುವಿಗೆ ನಾನು ಬದ್ಧ ಎಂದು ಹೇಳಿದ್ದಾರೆ.
ಕೋಮು ಸೌಹಾರ್ದತೆಗೆ ಬೆಂಕಿ ಹಚ್ಚುತ್ತಿರುವ ಪ್ರಭಾಕರ್ ಭಟ್: ಡಿಕೆಸು
ಮತೀಯವಾದಿಗಳೆಲ್ಲರಿಗೂ ಸುಳ್ಳು ಹೇಳುವುದೇ ಬಂಡವಾಳವಾಗಿಸಿಕೊಂಡಿದ್ದಾರೆ. ಬಿಜೆಪಿಗೆ ಆಹಾರವೇ ಅಲ್ಪಸಂಖ್ಯಾತರು, ಅವರಿಲ್ಲದಿದ್ರೆ ಬಿಜೆಪಿ ಪಕ್ಷವೇ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.