'ಕಾಂಗ್ರೆಸ್‌ ಯಾಕೆ ಪೌರತ್ವ ಕಾಯ್ದೆ ವಿರೋಧ ಮಾಡುತ್ತಿದೆ ಅನ್ನೋದೇ ಹೇಳುತ್ತಿಲ್ಲ'

Suvarna News   | Asianet News
Published : Jan 18, 2020, 12:14 PM IST
'ಕಾಂಗ್ರೆಸ್‌ ಯಾಕೆ ಪೌರತ್ವ ಕಾಯ್ದೆ ವಿರೋಧ ಮಾಡುತ್ತಿದೆ ಅನ್ನೋದೇ ಹೇಳುತ್ತಿಲ್ಲ'

ಸಾರಾಂಶ

ಕಾಂಗ್ರೆಸ್‌ನವರ ನಡವಳಿಕೆಯಿಂದ ಆಶ್ಚರ್ಯ| ಹಿಂದಿನ ಪ್ರಧಾನಿ ಜವಾಹರಲಾಲ್ ನೆಹರು, ಮನಮೋಹನ್ ಸಿಂಗ್ ಕಾಲದಲ್ಲಿ ಪೌರತ್ವದ ಬಗ್ಗೆ ಚರ್ಚೆಯಾಗಿದೆ| ಪ್ರಧಾನಿ ಮೋದಿ ಅವರು ಪೌರತ್ವ ಕಾಯ್ದೆ ಜಾರಿಗೆ ತಂದಿದ್ದಕ್ಕೆ ಕಾಂಗ್ರೆಸ್‌ನವರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ| 

ಧಾರವಾಡ(ಜ.18): ಎಸ್‌.ಎಸ್‌ಟಿ ದೌರ್ಜನ್ಯ ಕಾಯ್ದೆಗೆ 65 ವರ್ಷ ಆಗಿದೆ. ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆ ಆಗಿರುವ ಪ್ರಮಾಣ ಕಡಿಮೆ ಇದೆ. ಕಾನೂನಿನಲ್ಲಿ ಲೂ ಪೋಲ್ಸ್‌ಗಳನ್ನ ದುರುಪಯೋಗ ಮಾಡಿಕೊಳ್ಳಲಾಗಿದೆ. ಈ ಕಾನೂನನ್ನ ಬಲಿಷ್ಠ ಗೊಳಿಸುವುದಕ್ಕೆ ಸಿಆರ್‌ಇ ಅನ್ನ ನೇಮಕ ಮಾಡಿದ್ದೇವೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. 

ಶನಿವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು,  ಸಿಆರ್ ಸೆಲ್ ಜೊತೆ ನಾನು ಈಗಾಗಲೇ ಸಭೆ ಮಾಡಿದ್ದೇನೆ. ಅವರ ಜೊತೆ ಚರ್ಚೆಗಳನ್ನ ಮಾಡಲಾಗಿದೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕೇಂದ್ರ ಗೃಹ ಸಚಿವ ಅಮಿತ್ ಶಾ ಗೋ ಬ್ಯಾಕ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ನವರ ನಡವಳಿಕೆಯಿಂದ ಆಶ್ಚರ್ಯವಾಗಿದೆ. ಹಿಂದಿನ ಪ್ರಧಾನಿ ಜವಾಹರಲಾಲ್ ನೆಹರು, ಮನಮೋಹನ್ ಸಿಂಗ್ ಕಾಲದಲ್ಲಿ ಪೌರತ್ವದ ಬಗ್ಗೆ ಚರ್ಚೆಯಾಗಿದೆ. ಮನಮೋಹನ್‌ ಸಿಂಗ್‌ ಪ್ರಧಾನಿ ಇದ್ದಾಗ ಕೂಡ ಚರ್ಚೆಯಾಗಿದೆ. ಆದರೆ, ಇವತ್ತು ಪ್ರಧಾನಿ ಮೋದಿ ಅವರು ಪೌರತ್ವ ಕಾಯ್ದೆ ಜಾರಿಗೆ ತಂದಿದ್ದಕ್ಕೆ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ. 

ಜನರ ಸಮೂಹವೇ ಒಂದು ದೇಶ, ಈ ಹಿಂದೆ ಕೂಡ ಬಾಂಗ್ಲಾದೇಶದಿಂದ ಬಂದವರಿಗೆ ಅವಕಾಶ ಮಾಡಿಕೊಟ್ಟಿದೆ. ವಲಸಿಗರು ಪಾಕಿಸ್ತಾನ, ಬಾಂಗ್ಲಾದೇಶದಿಂದ ವಲಸೆ ಬಂದಿದ್ದಾರೆ. ಕಾಂಗ್ರೆಸ್‌ನವರು ಯಾಕೆ ಪೌರತ್ವ ಕಾಯ್ದೆಯನ್ನ ವಿರೋಧ ಮಾಡುತ್ತಿದ್ದಾರೆ ಅನ್ನೋದೇ ಹೇಳುತ್ತಿಲ್ಲ ಎಂದು ತಿಳಿಸಿದ್ದಾರೆ. 

ನಾವು ಹೇಳುತ್ತೇವೆ ಜನರ ಹಿತ ರಕ್ಷಣೆ ಕಾಯುವುದೇ ನಮ್ಮ‌ ಕಾಯಕವಾಗಿದೆ. ಡಾ. ಬಿ. ಆರ್. ಅಂಬೇಡ್ಕರ್‌ ಅವರ ಮೊಮ್ಮಗ ಪ್ರಕಾಶ ಅಂಬೇಡ್ಕರ್‌ ಸಂವಿದಾನ ತಜ್ಞ ಅಲ್ಲ, ಪ್ರಕಾಶ ಅಂಬೇಡ್ಕರ್‌ ಅವರು ಅಂಬೇಡ್ಕರ ಮೊಮ್ಮಗ ಇರಬಹುದು ಅಷ್ಟೇ ಎಂದು ಹೇಳಿದ್ದಾರೆ.

ಸಚಿವ ಸಂಪುಟ ವಿಸ್ತರಣೆಯ ವಿಚಾರದ ಬಗ್ಗೆ ಮಾತನಾಡಿದ ಅವರು, ನೋಡೋಣ ಸಭೆ ಇದೆ ಅದರಲ್ಲಿ ಏನು ಚರ್ಚೆ ಆಗುತ್ತದೆ ಎಂಬುದನ್ನ ಕಾಯ್ದು ನೋಡೋಣ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ. 
 

PREV
click me!

Recommended Stories

ರಾಜ್ಯದಲ್ಲಿ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು, ಆದ್ರೆ ಒಂದರಿಂದ 2 ಮಕ್ಕಳನ್ನ ಮಾಡಿಕೊಳ್ಳಿ; ಸಿಎಂ ಸಿದ್ದರಾಮಯ್ಯ
ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸುವುದು ಕಾಂಗ್ರೆಸ್‌ನವರಿಗೆ ಇಷ್ಟವಿಲ್ಲ: ಎಚ್.ಡಿ.ಕುಮಾರಸ್ವಾಮಿ