ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಭಾನುವಾರ(ಜೂ.7)ದಂದು ಹೊಸದಾಗಿ 12 ಕೊರೋನಾ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 65ಕ್ಕೆ ಏರಿಕೆಯಾಗಿದೆ. ಹೊಸದಾಗಿ ಪತ್ತೆಯಾದ ಕೇಸ್‌ಗಳು ಯಾವ ತಾಲೂಕಿನವರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಶಿವಮೊಗ್ಗ(ಜೂ.08): ಜಿಲ್ಲೆಯಲ್ಲಿ ಕೊರೋನಾ ಅರ್ಭಟ ಮುಂದುವರಿದಿದ್ದು, ಮಹಾರಾಷ್ಟ್ರದಿಂದ ಆಗಮಿಸಿದ್ದ 12 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ಭಾನುವಾರ ದೃಢಪಟ್ಟಿದೆ.
ಸೋಂಕು ಪತ್ತೆ ಆಗಿರುವ 12 ಜನರು ಟ್ರಾವೆಲ್ ಹಿಸ್ಟರಿ ಹೊಂದಿದ್ದಾರೆ. ಮಹಾರಾಷ್ಟ್ರ ರಾಜ್ಯದಿಂದ ಶಿವಮೊಗ್ಗ ಜಿಲ್ಲೆಗೆ ಹಿಂದಿರುಗಿದ್ದ ಇವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ಸದ್ಯ ಇವರೆಲ್ಲರಿಗೂ ಮೆಗ್ಗಾನ್ ಕೋವಿಡ್ - 19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಪಿ-5344 ( 7 ವರ್ಷದ ಬಾಲಕ), ಪಿ-5345 (17 ವರ್ಷದ ಯುವತಿ), ಪಿ-5346 (45 ವರ್ಷದ ಮಹಿಳೆ), ಪಿ-5347 (16 ವರ್ಷದ ಯುವತಿ), ಪಿ-5348 (28 ವರ್ಷದ ಮಹಿಳೆ), ಪಿ-5349 (38 ವರ್ಷದ ಮಹಿಳೆ), ಪಿ-5350 (15 ವರ್ಷದ ಬಾಲಕ), ಪಿ-5351 (54 ವರ್ಷದ ಪುರುಷ), ಪಿ-5352 (48 ವರ್ಷದ ಪುರುಷ), ಪಿ-5353 (13 ವರ್ಷದ ಬಾಲಕ), ಪಿ-5354 (42 ವರ್ಷದ ಮಹಿಳೆ) ಹಾಗೂ ಪಿ-5355 (16 ವರ್ಷದ ಯುವತಿ) ಇವರುಗಳಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಇವರಲ್ಲಿ ಶಿಕಾರಿಪುರ ತಾಲೂಕಿನ 5 ಮಂದಿ, ಹೊಸನಗರ ತಾಲೂಕಿನ 4 ಮಂದಿ ಹಾಗೂ ಮೂವರು ಸೊರಬ ತಾಲೂಕಿನವರು ಎಂದು ಮೂಲಗಳು ತಿಳಿಸಿವೆ
ಸೋಂಕಿತರ ಸಂಖ್ಯೆ 65ಕ್ಕೆ ಏರಿಕೆ:
ಜಿಲ್ಲೆಯಲ್ಲಿ ಭಾನುವಾರ ಒಂದೇ ದಿನ 12 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ ಆಗಿದ್ದು, ಶಿವಮೊಗ್ಗದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 65 ಕ್ಕೆ ಏರಿಕೆಯಾಗಿದೆ. ಈಗಾಗಲೇ 28 ಜನರು ಗುಣಮುಖರಾಗಿದ್ದಾರೆ. ಭಾನುವಾರ ಪತ್ತೆಯಾದ 12 ಪ್ರಕರಣ ಒಳಗೊಂಡಂತೆ 37 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಕಳೆದ ಎಂಟು ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 30 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದಂತಾಗಿದೆ.