ಹಗರಿಬೊಮ್ಮನಹಳ್ಳಿ: ತೆಪ್ಪ ಮಗುಚಿ ಮದು​ಮಗ ಸೇರಿ ಇಬ್ಬರ ದುರ್ಮರಣ

Published : Jun 08, 2020, 08:23 AM IST
ಹಗರಿಬೊಮ್ಮನಹಳ್ಳಿ: ತೆಪ್ಪ ಮಗುಚಿ ಮದು​ಮಗ ಸೇರಿ ಇಬ್ಬರ ದುರ್ಮರಣ

ಸಾರಾಂಶ

ತೆಪ್ಪ ಮಗುಚಿ ನೀರುಪಾಲಾದ ಇಬ್ಬರು ಯುವಕರು|ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತುಂಗಭದ್ರಾ ಹಿನ್ನೀರಿನಲ್ಲಿ ನಡೆದ ಘಟನೆ| ತೆಪ್ಪದಲ್ಲಿ ಬೈಕ್‌ ಹಾಕಿಕೊಂಡು ನದಿ ದಾಟುತ್ತಿದ್ದಾಗ ಆಯತಪ್ಪಿ ತೆಪ್ಪ ಮಗುಚಿ ಬಿದ್ದು ನಡೆದ ದುರ್ಘಟನೆ| 

ಹಗರಿಬೊಮ್ಮನಹಳ್ಳಿ(ಜೂ.08): ಸ್ನೇಹಿತನ ಜೊತೆ ತನ್ನ ಮದುವೆಯ ಆಮಂತ್ರಣ ಪತ್ರಿಕೆ ನೀಡಲು ತೆರಳುತ್ತಿದ್ದಾಗ ತೆಪ್ಪ ಮಗುಚಿ ಇಬ್ಬರೂ ನೀರುಪಾಲಾದ ಘಟನೆ ಭಾನುವಾರ ಬಳ್ಳಾರಿಯ ಹಗರಿಬೊಮ್ಮನಹಳ್ಳಿ ತಾಲೂಕಿನ ತುಂಗಭದ್ರಾ ಹಿನ್ನೀರಿನಲ್ಲಿ ನಡೆದಿದೆ. 

ಮೃತರನ್ನ ಫಕ್ರುದ್ಧೀನ್‌(28) ಹಾಗೂ ಹೊನ್ನೂರ್‌ಸಾಬ್‌(18) ಎಂದು ಗುರುತಿಸಲಾಗಿದೆ. 

ಕಂಪ್ಲಿ: ಹೆಂಡ್ತಿ ಕೊಲೆಗೈದ ಆರೋಪ, ನೇಣಿಗೆ ಶರಣಾದ ಗಂಡ

ತಾಲೂಕಿನ ಸೀಗೇನಹಳ್ಳಿ 1ನೇ ಕಾಲೋನಿಯ ಯುವಕ ಫಕ್ರುದ್ಧೀನ್‌(28) ವಿವಾಹ ಜೂ.14ರಂದು ನಿಗ​ದಿ​ಯಾ​ಗಿ​ತ್ತು. ಈ ಹಿನ್ನೆಲೆಯಲ್ಲಿ ಆಹ್ವಾನ ಪತ್ರಿಕೆಗಳನ್ನು ಸಂಬಂಧಿಗಳಿಗೆ ಕೊಡಲು ಸ್ನೇಹಿತ ಹೊನ್ನೂರ್‌ಸಾಬ್‌(18)ನ ಜತೆಗೆ ಕರೆದುಕೊಂಡು ತೆಪ್ಪದಲ್ಲಿ ಬೈಕ್‌ ಹಾಕಿಕೊಂಡು ನದಿ ದಾಟುತ್ತಿದ್ದಾಗ ಆಯತಪ್ಪಿ ತೆಪ್ಪ ಮಗುಚಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
 

PREV
click me!

Recommended Stories

Bengaluru; ತಿಂಗಳಿಗೆ 2 ಲಕ್ಷ ಸಂಪಾದನೆ, ಆದರೂ ಸಿಗದ 2BHK ಮನೆ; ಬೆಂಗಳೂರಿನಲ್ಲಿ ಹಳೆಯ ಮನೆಗಳತ್ತ ಜನರ ಒಲವು!
ಪ್ರದೂಷ್ ಮಾಫಿ ಸಾಕ್ಷಿ ತಡೆಯುವ ದರ್ಶನ್ ಪ್ರಯತ್ನಕ್ಕೆ ಹಿನ್ನಡೆ, ಅರ್ಜಿ ವಜಾಗೊಳಿಸಿದ ಕೋರ್ಟ್