Bengaluru: ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದ 134ಕ್ಕೂ ಹೆಚ್ಚು ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನ!

By Govindaraj S  |  First Published Jun 2, 2022, 1:33 AM IST

ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು ಎಂಬ ಗಾದೆ ಮಾತು ಗೊತ್ತೇ ಇದೆ. ಈ ಮಾತಿಗೆ ಅಮೋಘವರ್ಷನ ಸಾಧನೆ ಸೂಕ್ತವಾಗಿದೆ ಅನ್ಸುತ್ತೆ. ಝೂಗೆ ಹೋಗಿ ಪ್ರಾಣಿಗಳನ್ನು ನೋಡೋ  ವಯಸ್ಸಲ್ಲಿ ಅಮೋಘವರ್ಷ ಕಾಡಿಗೆ ತೆರಳಿ ಪ್ರಾಣಿಗಳನ್ನು ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. 


ವರದಿ: ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣ ನ್ಯೂಸ್ 

ಬೆಂಗಳೂರು (ಜೂ.02): ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು ಎಂಬ ಗಾದೆ ಮಾತು ಗೊತ್ತೇ ಇದೆ. ಈ ಮಾತಿಗೆ ಅಮೋಘವರ್ಷನ ಸಾಧನೆ ಸೂಕ್ತವಾಗಿದೆ ಅನ್ಸುತ್ತೆ. ಝೂಗೆ ಹೋಗಿ ಪ್ರಾಣಿಗಳನ್ನು ನೋಡೋ  ವಯಸ್ಸಲ್ಲಿ ಅಮೋಘವರ್ಷ ಕಾಡಿಗೆ ತೆರಳಿ ಪ್ರಾಣಿಗಳನ್ನು ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. ಅಂದ ಹಾಗೆ ಈತನ ಹೆಸರು ಅಮೋಘವರ್ಷ. ವಯಸ್ಸು ಕೇವಲ 14.  ರಾಜಾಜಿನಗರದ ಎನ್ ಪಿಎಸ್ ಸ್ಕೂಲಲ್ಲಿ ಒಂಭತ್ತನೇ ತರಗತಿ ಓದುತ್ತಿದ್ದಾನೆ. ಐಪಿಎಸ್ ಡಾ ಹರ್ಷ ಹಾಗೂ ಡಾ ಚೈತ್ರಾ ದಂಪತಿ ಪುತ್ರನಾಗಿರುವ ಅಮೋಘವರ್ಷನಿಗೆ ಬಾಲ್ಯದಿಂದಲೆ ಕಾಡು, ವನ್ಯಜೀವಿಗಳು ಅಂದ್ರೆ ಅಚ್ಚುಮೆಚ್ಚು.

Tap to resize

Latest Videos

 

ತನ್ನ 6ನೇ ವಯಸ್ಸಿನಿಂದಲೆ ತಂದೆ ಜೊತೆ ನಾಗರಹೊಳೆ, ಬಂಡೀಪುರ ಸೇರಿದಂತೆ ಹಲವೆಡೆ ಹಲವಾರು ಬಾರಿ ಕಾಡಲ್ಲಿ ಸಫಾರಿ ಹೋಗ್ತಿದ್ದ. ಹೀಗಾಗಿ ಅರಣ್ಯ, ವನ್ಯ ಜೀವಿಗಳ ಮೇಲೆ ಈತನಿಗೆ ಎಲ್ಲಿಲ್ಲದ ಪ್ರೀತಿ. ಮಗನ ಆಸಕ್ತಿಯನ್ನು ಕಂಡು ಸಿಕ್ಕಲ್ಲಿ ಇಷ್ಟಬಂದಂತೆ ಪೋಟೋ ತೆಗೆಯುವಂತೆ ತಂದೆ ಕ್ಯಾಮೆರಾ ಕೊಡ್ಸಿದ್ರು. ಹೀಗಾಗಿಯೇ ಅಮೋಘವರ್ಷ ನಶಿಸಿ ಹೋಗ್ತಿರುವ ಕಾಡು, ವನ್ಯ ಜೀವಿಗಳನ್ನು ಉಳಿಸಲು ಮುಂದಾದ. ಅದಕ್ಕಾಗಿ ತನ್ನ ಕ್ಯಾಮರಾ ಕಣ್ಣಲ್ಲಿ ಅದ್ಭುತವಾದ ಫೋಟೋಗಳನ್ನು ಕ್ಲಿಕ್ಕಿಸತೊಡಗಿದ. ಸುಮಾರು 6 ಸಾವಿರಕ್ಕೂ ಹೆಚ್ಚು ಫೋಟೋ ತೆಗೆದಿರುವ ಅಮೋಘವರ್ಷ ಆಯ್ದ 134ವನ್ಯ ಜೀವಿಗಳ ಛಾಯಾಚಿತ್ರವನ್ನು ಪ್ರದರ್ಶನಕ್ಕಿಟ್ಟಿದ್ದಾನೆ. 

PSI ನೇಮಕಾತಿ ಅಕ್ರಮದ ಕಿಂಗ್‌ಪಿನ್ ಆರ್.ಡಿ ಪಾಟೀಲನ ಮತ್ತಿಬ್ಬರು ಆಪ್ತರ ಬಂಧನ!

ಓದಿನ ಮಧ್ಯೆಯೂ ವೀಕೆಂಡಲ್ಲಿ ಬಿಡುವು ಮಾಡ್ಕೊಂಡು ಕಾಡಿಗೆ ಹೋಗಿ ವನ್ಯ ಜೀವಿ ಸಂರಕ್ಷಣೆಗೆ ಸಮಯ ಕೊಡ್ತಾನೆ. ಅಮೋಘವರ್ಷನಿಗೆ ಪ್ರತಿ ಪ್ರಾಣಿಗಳ ಚಲನವಲನ ನೋಡುವ ಆಸಕ್ತಿ ಇತ್ತು. ಇದಕ್ಕಾಗಿ ಆತ ಗಂಟೆಗಟ್ಟಲ್ಲೆ ಕಾಡಲ್ಲಿ ಸಮಯ ಕಳೆಯುತ್ತಿದ್ದ. ಅಲ್ಲದೆ ಪ್ರತಿ ವನ್ಯ ಜೀವಿಗಳ ಜೀವನ ಕ್ರಮಗಳು ಹೇಗಿರುತ್ತೆ ಎಂಬ ಬಗ್ಗೆಯೂ ಮೊಗೀಸ್ ಟೇಲ್ ಎಂಬ ಫಿಲಂ ಸಿರೀಸ್ ಕೂಡ ಮಾಡಿದ್ದಾನೆ. ಇಂದು ನಗರದ ಚಿತ್ರಕಲಾ ಪರಿಷತ್‌ನಲ್ಲಿ ವನ್ಯ ಜೀವಿ ಸಂರಕ್ಷಣೆ ಎಂಬ ಛಾಯಾಚಿತ್ರ ಪ್ರದರ್ಶನ ಹಾಗೂ ಸಿರೀಸ್ ಗೆ ಚಾಲನೆ ಸಿಕ್ಕಿದೆ. ಇಂದಿನಿಂದ ಐದು ದಿನಗಳ ಕಾಲ ಪ್ರದರ್ಶನ ನಡೆಯಲಿದೆ.

Belagavi: ಶಾಸಕ ಅಭಯ್ ಪಾಟೀಲ್ ವಿರುದ್ಧ ಮುಗಿಬಿದ್ದ ಮುಸ್ಲಿಂ ಮುಖಂಡರು!

ಈ ವೇಳೆ ಮಾತನಾಡಿದ ವನ್ಯ ಜೀವಿ ತಜ್ಞ ಸಂಜಯ್ ಗುಬ್ಬಿ ಚಿಕ್ಕಿ ವಯಸ್ಸಿನಿಂದಲೆ ನನ್ನ ಜೊತೆ ಕಾಡಿಗೆ ಬರ್ತಿದ್ದ. ಆತನಿಗೆ ಪ್ರಾಣಿಗಳ ಬಗ್ಗೆ ಅತೀವ ಆಸಕ್ತಿ‌ಇತ್ತು. ಪ್ರದರ್ಶನಕ್ಕಿಟ್ಟಿರುವ ಪ್ರತಿಯೊಂದು ಚಿತ್ರದಲ್ಲು ಒಂದೊಂದು ಕಥೆ ತುಂಬಿದೆ ಎಂದು ಅಮೋಘವರ್ಷನನ್ನು ಕೊಂಡಾಡಿದ್ರು. ಅಲ್ಲದೆ ಮಗನ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವ ತಂದೆ ಹರ್ಷ ಅವರು ಅಮೋಘನನ್ನು ಹಾಡಿ ಹೊಗಳಿದ್ರು. ಮಿತಭಾಷಿ ಅಮೋಘವರ್ಷ ಬಂಡೀಪುರ, ನಾಗರಹೊಳೆ, ದಮ್ಮನಕಟ್ಟೆ ಸೇರಿದಂತೆ ಮಹಾರಾಷ್ಟ್ರ, ರಾಜಸ್ಥಾನ ಮುಂತಾದೆಡೆ ಸಫಾರಿ ಮಾಡಿ ಉತ್ತಮ ಪ್ರಾಣಿಗಳನ್ನು ಕ್ಲಿಕ್ಕಿಸಿದ್ದಾನೆ. ಒಬ್ಬ ಅದ್ಭುತವಾದ ಫೊಟೋಗ್ರಾಫರ್‌ಗೆ ಒಳಗಣ್ಣು ಇದೆ ಅಂತಾರೆ. ಅದರ ಜೊತೆ ನಿಸರ್ಗದ ಪ್ರೀತಿ ಇರುವ ಅಮೋಘವರ್ಷ ಚಿಕ್ಕ ವಯಸ್ಸಲ್ಲೆ ಜಾಗೃತಿ ಮೂಡಿಸುತ್ತಿದ್ದಾನೆ.

click me!