ಮಡಿಕೇರಿಯಲ್ಲಿ ಅಪರೂಪದ ಚುಕ್ಕೆ ಕಾಡು ಗೂಬೆ ರಕ್ಷಣೆ

By Kannadaprabha NewsFirst Published Apr 8, 2020, 9:58 AM IST
Highlights

ಅಪರೂಪದಲ್ಲಿ ಅಪರೂಪವೆನಿಸಿರುವ ಚುಕ್ಕೆ ಕಾಡು ಗೂಬೆ (ಬೊಟ್ಟಕಾಡ್‌ ಗುಮ್ಮ) ಮರಿಯೊಂದೊನ್ನು ಮರಗೋಡಿನಲ್ಲಿ ರಕ್ಷಿಸಲಾಗಿದೆ.

ಮಡಿಕೇರಿ(ಏ.08): ಅಪರೂಪದಲ್ಲಿ ಅಪರೂಪವೆನಿಸಿರುವ ಚುಕ್ಕೆ ಕಾಡು ಗೂಬೆ (ಬೊಟ್ಟಕಾಡ್‌ ಗುಮ್ಮ) ಮರಿಯೊಂದೊನ್ನು ಮರಗೋಡಿನಲ್ಲಿ ರಕ್ಷಿಸಲಾಗಿದೆ. ತಾಯಿಯಿಂದ ಬೇರ್ಪಟ್ಟಿದ್ದ ಈ ಗೂಬೆ ಮರಿ ತೋಟದ ರಸ್ತೆಬದಿಯಲ್ಲಿ ಕುಳಿತಿತ್ತು.

ಇದನ್ನು ಗಮನಿಸಿದ ಚಿತ್ರಕಲಾವಿದ ಐಮಂಡ ರೂಪೇಶ್‌ ನಾಣಯ್ಯ ತಕ್ಷಣವೇ ಮಡಿಕೇರಿ ಡಿಎಫ್‌ಒ ಪ್ರಭಾಕರನ್‌ ಅವರಿಗೆ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ರೇಂಜರ್‌ ಟೈಗರ್‌ ದೇವಯ್ಯ ಮತ್ತು ಸಿಬ್ಬಂದಿ ಗೂಬೆ ಮರಿಯನ್ನು ವಶಕ್ಕೆ ಪಡೆದರು.

ಕೊರೋನಾ ಸಂಪೂರ್ಣ ಹತೋಟಿಗೆ ಬರುವವರೆಗೂ ಲಾಕ್‌ಡೌನ್‌, ಬಿಗಿ ಬಂದೋಬಸ್ತ್

ಬಿಳಿ ಬಣ್ಣದ ಈ ಗೂಬೆ ನೋಡಲು ಅತ್ಯಾಕರ್ಷಕವಾಗಿದ್ದು ಕಾಳಸಂತೆಯಲ್ಲಿ ಲಕ್ಷಾಂತರ ರುಪಾಯಿ ಬೆಲೆ ಬಾಳುತ್ತದೆ ಎನ್ನಲಾಗಿದೆ. ಗೂಬೆ ಮರಿಯು ಆರೋಗ್ಯವಂತವಾಗಿದ್ದು ಕೆಲ ದಿನಗಳ ಕಾಲ ನಿಗಾವಹಿಸಿ ಬಳಿಕ ಅರಣ್ಯಕ್ಕೆ ಬಿಡಲಾಗುವುದು ಎಂದು ಅರಣ್ಯಾಧಿಕಾರಿ ದೇವಯ್ಯ ತಿಳಿಸಿದ್ದಾರೆ. 

click me!