ವಾಟ್ಸಾಪ್ ಗ್ರೂಪ್‌ಗಳ ಮೇಲೆ ಹೆಚ್ಚಿನ ನಿಗಾ ಇರಿಸಲಾಗಿದ್ದು, ಪ್ರಚೋದನಾಕಾರಿ ವಿಡಿಯೋಗಳನ್ನು ಹಾಕಿ ಕೆಲವು ಸದಸ್ಯರು ಚರ್ಚೆ ನಡೆಸಿ ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ಉಂಟಾಗುವಂತೆ ಮಾಡಿರುವ ಹಿನ್ನೆಲೆಯಲ್ಲಿ ಅಡ್ಮಿನ್‌ಗೆ ನೋಟಿಸ್ ಕಳುಹಿಸಲಾಗಿದೆ.
ಕುಶಾಲನಗರ(ಏ.08): ವಾಟ್ಸ್‌ಆ್ಯಪ್ ಗ್ರೂಪ್‌ವೊಂದರಲ್ಲಿ ಕೆಲವು ಪ್ರಚೋದನಾಕಾರಿ ವಿಡಿಯೋಗಳನ್ನು ಹಾಕಿ ಕೆಲವು ಸದಸ್ಯರು ಚರ್ಚೆ ನಡೆಸಿ ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ಉಂಟಾಗುವಂತೆ ಮಾಡಿರುವ ಹಿನ್ನೆಲೆಯಲ್ಲಿ ವಾಟ್ಸ್‌ಆ್ಯಪ್ ಗ್ರೂಪ್ ಅನ್ನು ತಕ್ಷಣ ಡಿಲೀಟ್ ಮಾಡುವಂತೆ ಕುಶಾಲನಗರ ಪೊಲೀಸರು ಗ್ರೂಪ್ ಅಡ್ಮಿನ್‌ಗೆ ನೋಟಿಸ್ ನೀಡಿದ ಘಟನೆ ಮಂಗಳವಾರ ನಡೆದಿದೆ.
ಕುಶಾಲನಗರ ಹಿತರಕ್ಷಣಾ ವೇದಿಕೆ ಎಂಬ ಹೆಸರಿನ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ಉಂಟಾಗುವ ಸಂದೇಶಗಳನ್ನು ಹಾಕಿ ಕಾನೂನು ವ್ಯವಸ್ಥೆಗೆ ಧಕ್ಕೆ ಉಂಟಾಗಿದೆ.
ಸುಟ್ಟಗಾಯಗಳೊಂದಿಗೆ ಬಂದ ಬಾಲಕನಿದ್ದ ಕೇರಳದ ಆ್ಯಂಬುಲೆಸ್ಸ್ ವಾಪಸ್
ಈ ಹಿನ್ನಲೆಯಲ್ಲಿ ಗ್ರೂಪ್ ಅಡ್ಮಿನ್ ಎಂ. ನಂಜುಂಡಸ್ವಾಮಿ ಅವರಿಗೆ ಕುಶಾಲನಗರ ಪೊಲೀಸ್ ಠಾಣಾಧಿಕಾರಿ ನೋಟಿಸ್ ನೀಡಿದ್ದಾರೆ. ಗ್ರೂಪ್‌ನ್ನು ತಕ್ಷಣ ಡಿಲೀಟ್ ಮಾಡಲು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಗ್ರೂಪ್ ಡಿಲೀಟ್ ಮಾಡುವುದಾಗಿ ಅಡ್ಮಿನ್ ನಂಜುಂಡಸ್ವಾಮಿ ಹೇಳಿಕೆ ನೀಡಿದ್ದಾರೆ.