ತೀರ್ಥಹಳ್ಳಿ ತಾಲೂಕಿನ ಹೊದಲ ಗ್ರಾಮದಲ್ಲಿ ಗುರುವಾರ ಅಪರೂಪದ ಕೆನ್ನಾಯಿಯ ಗುಂಪು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಅಚ್ಚರಿ ಉಂಟುಮಾಡಿದೆ.
ತೀರ್ಥಹಳ್ಳಿ (ಸೆ.2): ತೀರ್ಥಹಳ್ಳಿ ತಾಲೂಕಿನ ಹೊದಲ ಗ್ರಾಮದಲ್ಲಿ ಗುರುವಾರ ಅಪರೂಪದ ಕೆನ್ನಾಯಿಯ ಗುಂಪು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಅಚ್ಚರಿ ಉಂಟುಮಾಡಿದೆ. ಫಾರೆಸ್ವ್ ಗಾರ್ಡ್ ಪ್ರಜ್ವಲ… ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅವರಿಗೆ ಈ ಕೆನ್ನಾಯಿ ಗುಂಪು ಗೋಚರವಾಗಿದೆ. ಈ ಕೆನ್ನಾಯಿ ತಮ್ಮ ಗುಂಪಿನೊಂದಿಗೆ ಮಾರಿಕೆರೆ ದಡದಿಂದ ನೆಲ್ಲಿಸರ ಕಾಡಿನತ್ತ ಹಾದುಹೋಗುತ್ತಿರುವುದನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದ್ದಾರೆ. ಹೆಚ್ಚಾಗಿ ನಾಗರಹೊಳೆ ಅಭಯಾರಣ್ಯದಲ್ಲಿ ಮಾತ್ರ ಕಂಡುಬರುವ ಇವುಗಳು ಇಂದು ತೀರ್ಥಹಳ್ಳಿಯ ಹೊದಲ ಗ್ರಾಮದಲ್ಲಿ ಕಾಣಿಸಿಕೊಂಡು ಆಚ್ಚರಿಗೆ ಕಾರಣವಾಗಿದೆ.
ಮಾಂಸಕ್ಕಾಗಿ ಭಾರತದಲ್ಲಿ ಹೆಚ್ಚಾಗಿ ಕೊಲ್ಲಲ್ಪಡುವ ಪ್ರಾಣಿಗಳಿವು..! ಇದರಲ್ಲಿ ನೀವು ತಿನ್ನೋದು ಯಾವ್ದು?
ಕಾಡಿನಲ್ಲಿ ಬದುಕುವ, ಮನುಷ್ಯರಿಂದ ತುಸು ಹೆಚ್ಚೇ ದೂರ ಇರಲು ಬಯಸುವ ಅತಿ ಸೂಕ್ಷ್ಮ ಹಾಗೂ ತೋಳ ಜಾತಿಯ ಪ್ರಾಣಿಯೇ ಕೆನ್ನಾಯಿ. ಇದನ್ನು ಕಾಡುನಾಯಿ, ಸೀಳುನಾಯಿ, ಕೆಂಪುನಾಯಿ ಎಂದು ಕೂಡ ಕರೆಯುತ್ತಾರೆ. ಇದು ಶಿಳ್ಳೆ ಹೊಡೆಯುವ ಕಾರಣದಿಂದ 'ಸೀಳುನಾಯಿ' ಎಂಬ ಹೆಸರು ಬಂದಿದೆ. ಇವು ಗುಂಪು ಕಟ್ಟಿಕೊಂಡೇ ಅಲೆದಾಡುತ್ತವೆ ಕೆನ್ನಾಯಿಗಳಿಗೆ ಇಂಗ್ಲಿಷಿನಲ್ಲಿ ಏಷಿಯಾಟಿಕ್ ವೈಲ್ಡ್ ಡಾಗ್ ಎಂದು ಹೇಳುತ್ತಾರೆ.
ಬ್ಯಾಂಕಾಕ್‌ನಿಂದ ಬಂದವನ ಬ್ಯಾಗಲ್ಲಿತ್ತು ಹೆಬ್ಬಾವು, ಮೊಸಳೆ: ಏರ್ಪೋರ್ಟಲ್ಲಿ ಜಪ್ತಿ
ವನ್ಯಜೀವಿ ಛಾಯಾಚಿತ್ರಕಾರರಾದ ಕರ್ನಾಟಕದ ಕೃಪಾಕರ-ಸೇನಾನಿಯವರು ಕೆನ್ನಾಯಿಗಳ ಮೇಲೆ ನಿರ್ಮಿಸಿದ ' ದಿ ಪ್ಯಾಕ್ ' ಎಂಬ ಚಿತ್ರಕ್ಕೆ ವೈಲ್ಡ್‌ಸ್ಕ್ರೀನ್ ವಿಶ್ವ ಚಲನಚಿತ್ರೋತ್ಸವ 2010ರಲ್ಲಿ ಅನಿಮಲ್ ಬಿಹೇವಿಯರ್ ವಿಭಾಗದಲ್ಲಿ ಅತ್ಯುತ್ತಮ ಪ್ರಶಸ್ತಿ ಲಭಿಸಿದೆ.