
ಚಾಮರಾಜನಗರ(ಸೆ.02): ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ಮಹದೇಶ್ವರನ ಹುಂಡಿಯಲ್ಲಿ 2.38 ಕೋಟಿ ರೂ. ಸಂಗ್ರಹವಾಗಿದೆ.
ನಿನ್ನೆ(ಶುಕ್ರವಾರ) ತಡರಾತ್ರಿವರೆಗೂ ಹುಂಡಿ ಎಣಿಕಾ ಕಾರ್ಯ ನಡೆದಿದೆ. ಕಳೆದ 36 ದಿನಗಳ ಅವಧಿಯಲ್ಲಿ ಭಕ್ತರು ಸಲ್ಲಿಸಿರುವ ಕಾಣಿಕೆ ಹಣದ ಎಣಿಕೆ ಕಾರ್ಯ ನಡೆದಿದೆ.
ಹಿರಿಯ ನಾಗರಿಕರಿಗೆ ಸಿಗ್ತಿಲ್ಲ ನೇರ ದರ್ಶನ: ರಾಜ್ಯ ಸರ್ಕಾರದ ಸೂಚನೆಗೂ ಯಾವುದೇ ಕಿಮ್ಮತ್ತಿಲ್ಲ..!
ಒಟ್ಟು 2,38,43,177 ರೂಪಾಯಿ ನಗದು ಹಣ ಸಂಗ್ರಹವಾಗಿದ್ದು, ನಗದು ಜೊತೆಗೆ 63 ಗ್ರಾಂ ಚಿನ್ನ, 3 ಕೆಜಿ 173 ಗ್ರಾಂ ಬೆಳ್ಳಿಯನ್ನ ಭಕ್ತರು ಸಮರ್ಪಿಸಿದ್ದಾರೆ.