ವಿದ್ಯುತ್ ತಗುಲಿ ಕಾಡುಕೋಣ ಸಾವು : ಓರ್ವ ಅರೆಸ್ಟ್

By Kannadaprabha NewsFirst Published Oct 17, 2021, 1:42 PM IST
Highlights
  • ಬೇಲಿಗೆ ಹರಿದಿದ್ದ ವಿದ್ಯುತ್ ಗೆ ಕಾಡುಕೋಣ  ಬಲಿ
  •  ಕಾಡುಕೋಣ ಹೂತು ಹಾಕಿದ್ದ ಆರೋಪಿಗಳ ಪೈಕಿ ಒರ್ವನ ಬಂಧನ

ಶಿವಮೊಗ್ಗ (ಅ.17):  ಬೇಲಿಗೆ ಹರಿದಿದ್ದ ವಿದ್ಯುತ್ ಗೆ (Electricity) ಕಾಡುಕೋಣ (Wild Buffalo)  ಬಲಿಯಾಗಿದ್ದು, ಕಾಡುಕೋಣ ಹೂತು ಹಾಕಿದ್ದ ಆರೋಪಿಗಳ ಪೈಕಿ ಒರ್ವನ ಬಂಧಿಸಲಾಗಿದೆ (Arrest).  ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. 

ಸೊರಬ(Soraba) ತಾಲೂಕಿನ ಅಬಸೆ ಗ್ರಾಮದಲ್ಲಿ ಘಟನೆ ನಡೆದಿದ್ದು,  ಕಾಡು ಪ್ರಾಣಿಗಳಿಂದ (Wild Animals) ಬೆಳೆ ರಕ್ಷಣೆಗಾಗಿ ಬೇಲಿಗೆ  ವಿದ್ಯುತ್‌ ಹರಿಸಿದ್ದು ಅದಕ್ಕೆ ಕಾಡು ಕೋಣ  ಬಲಿಯಾಗಿದೆ. 

ಘಟನೆಯನ್ನು ಮುಚ್ಚಿ ಹಾಕಲು ಕೋಣ ಹೂತು ಹಾಕಿದ್ದು, ಪ್ರಕರಣದಲ್ಲಿ ಪೊಲೀಸರು (Police) ಓರ್ವ ಆರೋಪಿ ಬಂಧಿ ಸಿದ್ದು , ಇಬ್ಬರು ಪರಾರಿಯಾಗಿದ್ದಾರೆ.   ಯೋಗಪ್ಪ ಎಂಬುವರನ್ನು ಬಂಧಿಸಲಾಗಿದ್ದು , ಪ್ರಭಾಕರ್ ಹಾಗೂ ಚಂದ್ರಪ್ಪ ಎಂಬುವರು ಪರಾರಿಯಾಗಿದ್ದಾರೆ.

ಅಥಣಿ: ಹುಲಿ ಮರಿ, ಕಾಡುಕೋಣ ಪ್ರತ್ಯಕ್ಷ, ಆತಂಕದಲ್ಲಿ ಜನತೆ

ಅಬಸೆ ಗ್ರಾಮದ ಯೋಗಪ್ಪ , ಆತನ ಮಗ ಪ್ರಭಾಕರ್ ಹಾಗೂ ಚಂದ್ರಪ್ಪ ಅವರು ಬೆಳೆ ರಕ್ಷಣೆಗೆ ಬೇಲಿಗೆ (fence) ಅಕ್ರಮವಾಗಿ ವಿದ್ಯುತ್ ಹರಿಸಿದ್ದರು ಎನ್ನಲಾಗಿದೆ.

ಆರೋಪಿಗಳು ವಿದ್ಯುತ್ ತಗುಲಿ ಮೃತಪಟ್ಟ ಕಾಡುಕೋಣವನ್ನು ಸಮೀಪದಲ್ಲಿಯೇ ಹೂತು ಹಾಕಿದ್ದರು.  ಸುಳಿವು ಪಡೆದ ಅರಣ್ಯ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದು, ಹೂತಿದ್ದ ಕಾಡುಕೋಣವನ್ನು ಹೊರತೆಗೆದು ಪರಿಶೀಲನೆ ನಡೆಸಿದರು.

 ಅಲ್ಲದೇ ಈ ಸಂಬಂಧ ಮೂವರು ಆರೋಪಿಗಳ ವಿರುದ್ಧ ಪ್ರಕರಣವನ್ನು (Case) ದಾಖಲು ಮಾಡಿದ್ದಾರೆ.

ಕಾಡುಕೋಣ ಮಾಂಸ ಪತ್ತೆ

 

ಕಾಡು ಕೋಣದ ಮಾಂಸವನ್ನು ಸಾಗಿಸುತ್ತಿದ್ದ ಕಾರೊಂದನ್ನು ಅರಣ್ಯ ಅಧಿಕಾರಿಗಳು, ಸಿಬ್ಬಂದಿ ಬೆನ್ನಟ್ಟಿಹಿಡಿದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಕಾರು ಚಾಲಕ ಪರಾರಿಯಾಗಿದ್ದು, ಅನುಮಾನದ ಮೇಲೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಹೊನ್ನಾವರದಿಂದ ಕಪ್ಪು ಬಣ್ಣದ ಶವಾರ್ಲೆ ಕಾರಿನಲ್ಲಿ ಕಾಡುಕೋಣದ ಮಾಂಸವನ್ನು ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿಯ ಮೇರೆಗೆ ಭಟ್ಕಳ ವಲಯ ಅರಣ್ಯಾಧಿಕಾರಿ ಸವಿತಾ ದೇವಡಿಗ ಹಾಗೂ ಸಿಬ್ಬಂದಿ ಶಿರಾಲಿ ಚೆಕ್‌ ಪೋಸ್ಟ್‌ನಲ್ಲಿ ಬ್ಯಾರಿಕೇಡ್‌ ಹಾಕಿ ಕಾಯುತ್ತಿದ್ದರು.

ನಾನ್‌ವೆಜ್‌ ಹೊಟೇಲ್‌ನಲ್ಲಿ ಲಿಕ್ಕರ್; ಬಾಡೂಟದ ಜೊತೆ ಭರ್ಜರಿ ಮದ್ಯ.! .

ಸುಳಿವು ಅರಿತ ಚಾಲಕ ಕಾರನ್ನು ಬ್ಯಾರಿಕೇಡ್‌ ಮೇಲೆ ಹಾರಿಸಿಕೊಂಡು ಪರಾರಿಯಾದ. ಈ ವೇಳೆ ಅರಣ್ಯ ಸಿಬ್ಬಂದಿಯೊಬ್ಬರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅರಣ್ಯ ಅಧಿಕಾರಿಗಳು ತಕ್ಷಣ ಕಾರನ್ನು ತಮ್ಮ ವಾಹನದಲ್ಲಿ ಬೆನ್ನಟ್ಟಿದ್ದಾರೆ. ಬಳಿಕ ಕಾರು ಚಾಲಕ ಒಳರಸ್ತೆಯಲ್ಲಿ ತಿರುಗಿ ಬದ್ರಿಯಾ ಕಾಲೋನಿ ಕಡೆಗೆ ಹೋಗಿದ್ದಾನೆ. ಕಾರನ್ನು ಮನೆಯೊಂದರ ಮುಂದೆ ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ.

ಅರಣ್ಯ ಅಧಿಕಾರಿಗಳು ಕಾರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಸುಮಾರು 100 ಕೆ.ಜಿ. ಕಾಡುಕೋಣದ ಮಾಂಸ ಕಾರಲ್ಲಿ ಪತ್ತೆಯಾಗಿದೆ. ಕಾಡು ಕೋಣ ಐದು ವರ್ಷದ್ದು ಎಂದು ಅಂದಾಜಿಸಲಾಗಿದೆ. ಈ ಕಾರು ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿದ್ದು ಅನಾಹುತ ಸಂಭವಿಸಿಲ್ಲ.

click me!