ಹೆಣ್ಣು ಸಿಗುತ್ತಿಲ್ಲ- ನಮಗೆ ಮದುವೆ ಮಾಡಿಸಿ : ಡಿಸಿಗೆ ಪತ್ರ ಬರೆದ 7 ಯುವಕರು

By Kannadaprabha News  |  First Published Oct 17, 2021, 12:28 PM IST
  • ನಮ್ಮನ್ನು ಮದುವೆ ಮಾಡಿಕೊಳ್ಳಲು ಯಾರು ಮುಂದೆ ಬರುತ್ತಿಲ್ಲ
  • ಮದುವೆ ಮಾಡಿಸಿ ಎಂದು 7 ಮಂದಿ ಯುವ ರೈತರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

 ತುಮಕೂರು (ಅ.17): ನಮ್ಮನ್ನು ಮದುವೆ ಮಾಡಿಕೊಳ್ಳಲು ಯಾರು ಮುಂದೆ ಬರುತ್ತಿಲ್ಲ. ಹಾಗಾಗಿ ನಮಗೆ ಮದುವೆ ಮಾಡಿಸಿ ಎಂದು 7 ಮಂದಿ ಯುವ ರೈತರು (Farmers) ಜಿಲ್ಲಾಧಿಕಾರಿಗೆ ಪತ್ರ (Letter) ಬರೆದಿದ್ದಾರೆ. 

ತುಮಕೂರು (Tumakuru) ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಲಕ್ಮಗೊಂಡನಹಳ್ಳಿ, ತಿಪಟೂರು ತಾಲೂಕಿನ ತಿಮ್ಲಾಪುರ ಗ್ರಾಮದ ರೈತ ಯುವಕರು ಪತ್ರ ಬರೆದು ನಾವು ರೈತರಾಗಿರುವುದರಿಂದ ನಮಗೆ ಎಲ್ಲೂ ವಧು (Bride) ಸಿಗುತ್ತಿಲ್ಲ. ಆದ್ದರಿಂದ ನಮ್ಮ ಮದುವೆ (Marriage) ಮಾಡಿಸಬೇಕು ಎಂದು ಪತ್ರದ ಮೂಲಕ ತಿಳಿಸಿದ್ದಾರೆ. 

Latest Videos

undefined

ಬಾಗಲಕೋಟೆ: ಹೆಣ್ಣು ಸಿಗುತ್ತಿಲ್ಲವೆಂದು ನದಿಗೆ ಹಾರಿದ್ದ ಯುವಕನ ಶವ ಪತ್ತೆ

ರೈತ ಯುವಕರನ್ನು ಮದುವೆಯಾಗಲು ಯಾವುದೇ ಯುವತಿಯರು ಮುಂದೆ ಬರುತ್ತಿಲ್ಲ.  ನಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ. 

7 ಮಂದಿ ಯುವ ರೈತರ ಮದುವೆ ವಿಚಾರ ಇದೀಗ ಸಾಕಷ್ಟು ವೈರಲ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಹೆಚ್ಚು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಅನೇಕ ರೈತರು ತಮಗೆ ವಿವಾಹವಾಗಲು ಹೆಣ್ಣು ಸಿಗುತ್ತಿಲ್ಲವೆಂದು ಹೇಳುತ್ತಿದ್ದಾರೆ.   

ರೈತರ ಮದುವೆಯಾಗುವ ಯುವತಿಗೆ ಪ್ರೋತ್ಸಾಹಧನ ಯೋಜನೆ?

 ಅಂತರ್ಜಾತಿ ವಿವಾಹವಾದರೆ (Inter Cast Marriage) ಸರ್ಕಾರ ಪ್ರೋತ್ಸಾಹಧನ ನೀಡುತ್ತಿದ್ದು ದೇಶಕ್ಕೆ ಅನ್ನ ನೀಡುವ ಕೃಷಿ ಕಾಯಕದಲ್ಲಿ ತೊಡಗಿಕೊಂಡಿರುವ ಯುವ ರೈತರನ್ನು ಮದುವೆಯಾಗುವ ಯುವತಿಯರಿಗೆ ಪ್ರೋತ್ಸಾಹಧನ ನೀಡುವ ಯೋಜನೆಯನ್ನು ಜಾರಿಗೆ ತರಬೇಕೆಂದು ರಾಜ್ಯ ಕೃಷಿ ಸಚಿವರಾದ ಬಿ.ಸಿ.ಪಾಟೀಲರಿಗೆ (BC Patil) ಹಾಗೂ ಮುಖ್ಯ ಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಿಗೆ (BS Yediyurappa) ತಾಲೂಕು ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಕೆ.ಎಸ್‌.ಸದಾಶಿವಯ್ಯ (KS sadashivaiah) ಆಗ್ರಹಿಸಿದ್ದರು.

 ರೈತರು ದೇಶದ ಬೆನ್ನೆಲುಬು, ಅನ್ನ ನೀಡುವ ಅನ್ನದಾತರು. ಆದರೆ ಹೊಲದಲ್ಲಿ ಹಾಗೂ ತೋಟದಲ್ಲಿ ದುಡಿಯುವವರು ಎಂಬ ಕಾರಣಕ್ಕೆ ಹುಡುಗಿಯರು ಯುವ ರೈತರನ್ನು ಮದುವೆಯಾಗಲು ಮುಂದೆ ಬರುತ್ತಿಲ್ಲ. 

ಹಾಗಾಗಿ ಸಾಕಷ್ಟುಗ್ರಾಮಗಳಲ್ಲಿ ಮದುವೆ ವಯಸ್ಸು ಮೀರಿದ ಯುವಕರು ಪಶ್ಚಾತಾಪಕ್ಕೀಡಾಗಿದ್ದು, ಇದು ಬಹಳಷ್ಟುಯುವ ರೈತರ ವ್ಯಥೆಯ ಕಥೆಯಾಗಿದೆ ಎಂದಿದ್ದರು.

ಕೃಷಿ ಯೋಜನೆಯಡಿ ಈ ರೈತರಿಗೆ ಸಿಗಲಿದೆ ಸಹಾಯಧನ : ಅರ್ಜಿ ಸಲ್ಲಿಸಿ .

ಕೃಷಿ ಕಾಯಕದಲ್ಲಿ ದುಡಿಯುವ ಯುವ ರೈತರಾದರೆ ಹೆಣ್ಣು ಕೊಡಲು ಹಿಂಜರಿಯುತ್ತಾರೆ. ಆದ್ದರಿಂದ ಯುವ ಗ್ರಾಮೀಣ ಯುವ ರೈತರುಗಳು ವಿವಾಹವಾಗಿ ನೆಮ್ಮದಿ ಜೀವನ ಸಾಗಿಸಲು ಕಷ್ಟಕರವಾಗುತ್ತಿದೆ. ಆದ್ದರಿಂದ ಸರ್ಕಾರ ಕೂಡಲೆ ಗ್ರಾಮೀಣ ಯುವರೈತರನ್ನು ಮದುವೆಯಾಗುವ ಯುವತಿಯರಿಗೆ ಪೋತ್ಸಾಹಿಸಲು ಸರ್ಕಾರ ಪ್ರೋತ್ಸಾಹಧನ ಯೋಜನೆಗಳನ್ನು ಜಾರಿ ಮಾಡಬೇಕು ಎಂದು ಕೆ.ಎಸ್‌. ಸದಾಶಿವಯ್ಯ ಕೋರಿದ್ದರು.

click me!