ಬೆಳಗಾವಿಯ ಜನನಿಬಿಡ ಪ್ರದೇಶಗಳಲ್ಲಿ ಕಾಡುಪ್ರಾಣಿಗಳು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಖಾನಾಪುರದಲ್ಲಿ ಕಾಡುಕೋಣ ಹಾಗೂ ಜಾಂಬೋಟಿಯಲ್ಲಿ ಹುಲಿ ಪ್ರತ್ಯಕ್ಷವಾಗಿದ್ದು, ಸ್ಥಳೀಯರು ಮೊಬೈಲ್‌ನಲ್ಲಿ ಈ ದೃಶ್ಯ ಸೆರೆಹಿಡಿದಿದ್ದಾರೆ.
ಬೆಳಗಾವಿ (ಜ.9): ಮಾನವ ಹಾಗೂ ಕಾಡುಪ್ರಾಣಿಗಳ ನಡುವಿನ ತಿಕ್ಕಾಟ ಸುದ್ದಿಯಾಗುತ್ತಿರುವ ನಡುವೆ ಬೆಳಗಾವಿಯ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಕಾಡುಪ್ರಾಣಿಗಳು ಕಾಣಿಸಿಕೊಂಡಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಸ್ಥಳೀಯ ಮೊಬೈಲ್‌ನಲ್ಲಿ ಈ ದೃಶ್ಯ ಸೆರೆಯಾಗಿದ್ದು, ಒಂದೇ ದಿನದಲ್ಲಿ ಎರಡು ಕಾಡುಪ್ರಾಣಿಗಳು ಜನರ ಮೊಬೈಲ್‌ನಲ್ಲಿ ಸೆರೆಸಿಕ್ಕಿವೆ. ಖಾನಾಪುರ ತಾಲೂಕಿನ ನಂದಗಡ ಗ್ರಾಮದ ಯುವಕ ವಾಹೀದ್ ಸಕಲಿ ತಮ್ಮ ಮೊಬೈಲ್‌ನಲ್ಲಿ ಕಾಡುಪ್ರಾಣಿಗಳ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಅವರು ನೀಡಿರುವ ಮಾಹಿತಿಯ ಪ್ರಕಾರ ಖಾನಾಪುರ ತಾಲೂಕಿನ ಲೋಂಡಾ-ಕಾಪೋಲಿ ರಸ್ತೆಯಲ್ಲಿ ಬೃಹತ್ ಗಾತ್ರದ ಕಾಡುಕೋಣ ಪ್ರತ್ಯಕ್ಷವಾಗಿದ್ದು, ಕಾಡು ಕೋಣದ ಚಲನವಲನಗಳು ಇದರಲ್ಲಿ ಸರೆಯಾಗಿದೆ. ಇದನ್ನು ಕಂಡು ಜನರು ಆತಂಕ ವ್ಯಕ್ತಪಡಿಸಿದ್ದಾರೆ.
ದೈತ್ಯ ಗಾತ್ರದ ಕಾಡುಕೋಣ ಯಾರ ಪರಿವೆಯೂ ಇಲ್ಲದೆ ರಸ್ತೆ ದಾಟಿ ಮತ್ತೆ ಕಾಡಿನತ್ತ ಪ್ರಯಾಣ ಮಾಡಿದೆ. ಇನ್ನೊಂದೆಡೆ, ಜಾಂಬೋಟಿಯ ಕಣಕುಂಬಿ ಸಮೀಪದ ಹುಳಂದ-ಕಣಕುಂಬಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಹುಲಿ ಪ್ರತ್ಯಕ್ಷವಾಗಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದ್ದಾರೆ.
ಮದುವೆಯಾಗದ ಪುರುಷರೇ ಹುಷಾರ್; ಮದುವೆ ಹೆಸರಿನಲ್ಲಿ ಈ ವಂಚಕರ ಗ್ಯಾಂಗ್ ಬಲೆಗೆ ಬೀಳದಿರಿ!
ಜಾಂಬೋಟಿಯ ಕಣಕುಂಬಿ ಹುಳಂದ- ಕಣಕುಂಬಿ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷವಾಗಿರುವುದನ್ನು ಕಂಡು ಜನರು ಗಾಬರಿಯಾಗಿದ್ದಾರೆ. ಇದು ತಾಲೂಕಿನ ಅತ್ಯಂತ ದಟ್ಟ ಅರಣ್ಯ ಪ್ರದೇಶ ಎಂದೇ ಹೇಳಲಾಗುತ್ತದೆ. ಒಂದೇ ದಿನ ಎರಡು ದೈತ್ಯ ಕಾಡುಪ್ರಾಣಿಗಳನ್ನು ಕಂಡು ಆತಂಕದಲ್ಲಿರುವ ಸ್ಥಳೀಯ ಜನತೆ, ಆದಷ್ಟು ಬೇಗ ಅರಣ್ಯ ಇಲಾಖೆ ಗಮನವಹಿಸಿ, ನಾಗರೀಕರನ್ನು ರಕ್ಷಣೆ ಮಾಡಲು ಮುಂದಾಗಬೇಕು ಎಂದು ತಿಳಿಸಿದ್ದಾರೆ.
ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿಲ್ಲ ಪಶು ವೈದ್ಯರು?: ಪ್ರಾಣಿಗಳು ಸತ್ತರೆ ಮರಣೋತ್ತರ ಪರೀಕ್ಷೆ ಹೇಗೆ?