ಸಫಾರಿಯಲ್ಲಿ ತೆರಳುವ ಬಹುತೇಕ ಮಂದಿ ಹುಲಿ ಕಣ್ಣಿಗೆ ಬೀಳಲಿ ಎಂದು ಆಶಿಸುತ್ತಾರೆ. ಆದರೆ, ಕೆಲವರಿಗೆ ಮಾತ್ರ ಅಂದರೆ ಅದೃಷ್ಟವಂತರಿಗೆ ಮಾತ್ರ ಆ ಭಾಗ್ಯ ದೊರೆಯುತ್ತದೆ. ಉಳಿದವರಿಗೆ ಹುಲಿರಾಯ ದರ್ಶನ ಆಗದಿದ್ದರೂ ಅಲ್ಲಲ್ಲಿ ಆನೆಗಳ ಹಿಂಡು, ಜಿಂಕೆಗಳ ದಂಡು ಕಾಣ ಸಿಗುತ್ತವೆ. ಜೊತೆಗೆ ಅಲ್ಲಲ್ಲಿ ಸಣ್ಣಪುಟ್ಟ ಕಾಡು ಪ್ರಾಣಿಪಕ್ಷಿಗಳ ದರ್ಶನವೂ ಆಗುತ್ತದೆ.
ಬಿ. ಶೇಖರ್ ಗೋಪಿನಾಥಂ
ಮೈಸೂರು(ಡಿ.16): ಇದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಂಡು ಬರುತ್ತಿರುವ ದೃಶ್ಯಗಳು. ಡಿಸೆಂಬರ್ ಚಳಿ, ಮಂಜು ಮುಸುಕಿದ ವಾತಾವರಣದಲ್ಲಿ ಕಾಡುಪ್ರಾಣಿಗಳ ದರ್ಶನ ಜೊತೆಗೆ ಪಕ್ಷಿಗಳ ಕಲರವ ಮೈಮನವನ್ನು ರೋಮಾಂಚನಗೊಳಿಸುತ್ತದೆ. ಹಾಗೆಯೇ, ಬಂಡೀಪುರದ ಹಸಿರು ಮೈಮಾಟವು ಪ್ರವಾಸಿಗರನ್ನು ಆಕರ್ಷಿಸುತ್ತಿರುವುದು ಸುಳ್ಳಲ್ಲ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ಪ್ರವಾಸಿಗರ ಪ್ರಮುಖ ಆಕರ್ಷಣೆ ಆಗಲು ಈ ಕಾಡಿನಲ್ಲಿರುವ ಹೆಚ್ಚಿನ ಹುಲಿಗಳ ಸಂತತಿ ಕಾರಣವಾಗಿದೆ.
undefined
ಹುಲಿರಾಯನನ್ನು ಕಣ್ಣಾರೆ ಒಮ್ಮೆ ನೋಡಬೇಕೆಂಬ ಆಸೆಯಿಂದ ನೂರಾರು ಪ್ರವಾಸಿಗರು ಸಫಾರಿಗಾಗಿ ಬಂಡೀಪುರಕ್ಕೆ ಬರುವುದು ಸರ್ವೆ ಸಾಮಾನ್ಯವಾಗಿದೆ. ಸಫಾರಿಯಲ್ಲಿ ತೆರಳುವ ಬಹುತೇಕ ಮಂದಿ ಹುಲಿ ಕಣ್ಣಿಗೆ ಬೀಳಲಿ ಎಂದು ಆಶಿಸುತ್ತಾರೆ. ಆದರೆ, ಕೆಲವರಿಗೆ ಮಾತ್ರ ಅಂದರೆ ಅದೃಷ್ಟವಂತರಿಗೆ ಮಾತ್ರ ಆ ಭಾಗ್ಯ ದೊರೆಯುತ್ತದೆ. ಉಳಿದವರಿಗೆ ಹುಲಿರಾಯ ದರ್ಶನ ಆಗದಿದ್ದರೂ ಅಲ್ಲಲ್ಲಿ ಆನೆಗಳ ಹಿಂಡು, ಜಿಂಕೆಗಳ ದಂಡು ಕಾಣ ಸಿಗುತ್ತವೆ. ಜೊತೆಗೆ ಅಲ್ಲಲ್ಲಿ ಸಣ್ಣಪುಟ್ಟ ಕಾಡು ಪ್ರಾಣಿಪಕ್ಷಿಗಳ ದರ್ಶನವೂ ಆಗುತ್ತದೆ.
ಬಂಡೀಪುರ ಕಾಡಂಚಿನಲ್ಲಿ ಕುರಿಗಾಹಿಯನ್ನು ಎಳೆದೊಯ್ದು ತಿಂದು ಹಾಕಿದ ಹುಲಿ!
ಜಿಂಕೆ, ಆನೆಗಳ ಕಾರುಬಾರು
ಬಂಡೀಪುರ ಕಾಡಿನಲ್ಲಿ 191 ಹುಲಿಗಳಿವೆ. ಆದರೆ, ಚುಕ್ಕೆ ಜಿಂಕೆ, ಆನೆಗಳು ಹೆಚ್ಚಾಗಿ ಪ್ರವಾಸಿಗರ ಕಣ್ಣಿಗೆ ಕಾಣ ಸಿಗುತ್ತವೆ. ಆನೆಗಳು ತಮ್ಮ ಮರಿಯನ್ನು ರಕ್ಷಿಸಿಕೊಳ್ಳಲು ಸುತ್ತುವರೆದು ನಿಂತುಕೊಳ್ಳುವುದನ್ನು ನೋಡುವುದೇ ರೋಮಾಂಚನಕಾರಿ. ಒಂದು ರೀತಿಯಲ್ಲಿ ಜಡ್ ಪ್ಲಸ್ ಭದ್ರತೆ ರೀತಿಯಲ್ಲಿ ಮರಿ ಆನೆಯನ್ನು ತಾಯಿ ಸೇರಿದಂತೆ ಉಳಿದ ಆನೆಗಳು ರಕ್ಷಿಸುತ್ತವೆ. ಕೆಲವು ಆನೆಗಳಂತೂ ಸಫಾರಿ ವಾಹನಗಳತ್ತವೇ ನುಗ್ಗಿ ಬರುವ ಸನ್ನಿವೇಶಗಳು ಸಹ ನಡೆಯುತ್ತಿರುತ್ತವೆ.
ಸಫಾರಿ ಮಾರ್ಗದಲ್ಲಿ ಚುಕ್ಕೆ ಜಿಂಕೆಗಳು, ಲಂಗೂರ್ ಕಂಡು ಬಂದರೇ, ಕೆಲವೊಮ್ಮೆ ಕರಡಿಗಳು, ಕಡವೆ, ಕಾಡೆಮ್ಮೆ ಸೇರಿದಂತೆ ಇನ್ನಿತರ ಕಾಡುಪ್ರಾಣಿಗಳು ಕಾಣ ಸಿಗುತ್ತದೆ. ಹುಲಿಯಂತೆ ಚಿರತೆ ಸಹ ಕಣ್ಣಿಗೆ ಬೀಳುವುದು ಅಪರೂಪ. ಒಂದು ದಿನದ ಸಫಾರಿಯಲ್ಲಿ ಒಮ್ಮೆ ಯಾವುದಾದರೊಂದು ಸಫಾರಿ ವಾಹನದಲ್ಲಿ ಹೋದವರು ಹುಲಿ ಅಥವಾ ಚಿರತೆ ಕಣ್ಣಿಗೆ ಬೀಳುತ್ತವೆ.
ಕರ್ನಾಟಕದಲ್ಲಿ ನೋಡಲೇಬೇಕಾದ ಸ್ಥಳಗಳಿವು, 2023ರಲ್ಲಿ ಹೆಚ್ಚು ಜನರು ಭೇಟಿ ನೀಡಿದ್ದೂ ಇಲ್ಲಿಗೇ!
ಒಟ್ಟಿನಲ್ಲಿ ಡಿಸೆಂಬರ್ ಚಳಿ, ಮಂಜು ಮುಸುಕಿನ ವಾತಾವರಣದೊಂದಿಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 191 ಹುಲಿಗಳಿವೆ. ದೇಶದಲ್ಲಿ ಅತಿ ಹೆಚ್ಚು ಹುಲಿ ಇರುವ ಪ್ರದೇಶಗಳಲ್ಲಿ ಬಂಡೀಪುರವು 2ನೇ ಸ್ಥಾನ ಪಡೆದಿದೆ. ಬಂಡೀಪುರ ಸಫಾರಿಗೆ ಬರುವ ಪ್ರವಾಸಿಗರಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದ್ದು, ಸಫಾರಿಗೆ ಎಲ್ಲಾ ದಿನಗಳಲ್ಲೂ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ನಿರ್ದೇಶಕ ಡಾ.ಪಿ. ರಮೇಶ್ ಕುಮಾರ್ ತಿಳಿಸಿದ್ದಾರೆ.