ಪ್ರಾಣಿಹಿಂಸೆ ರಾಜ್ಯದಲ್ಲೆಲ್ಲಾ ನಿಷೇಧವಾದ್ರೂ ಮೈಸೂರಿನಲ್ಲಿ ಮಾತ್ರ ರಾಜಾರೋಷವಾಗಿ ನಡೆಯುತ್ತಿದೆ. ಅರಣ್ಯಭೂಮಿ ಹೆಚ್ಚು ಹೊಂದಿರೋ ಜಿಲ್ಲೆಯಲ್ಲಿಯೇ ಅರಣ್ಯ ಕಾನೂನೂಗಳಿಗೆ ಯಾವುದೇ ಬೆಲೆ ನೀಡುತ್ತಿಲ್ಲ.
ಮೈಸೂರು(ಜ.30): ಪ್ರಾಣಿಹಿಂಸೆ ರಾಜ್ಯದಲ್ಲೆಲ್ಲಾ ನಿಷೇಧವಾದ್ರೂ ಮೈಸೂರಿನಲ್ಲಿ ಮಾತ್ರ ರಾಜಾರೋಷವಾಗಿ ನಡೆಯುತ್ತಿದೆ. ಅರಣ್ಯಭೂಮಿ ಹೆಚ್ಚು ಹೊಂದಿರೋ ಜಿಲ್ಲೆಯಲ್ಲಿಯೇ ಅರಣ್ಯ ಕಾನೂನೂಗಳಿಗೆ ಯಾವುದೇ ಬೆಲೆ ನೀಡುತ್ತಿಲ್ಲ.
ಕಾಡು ಪ್ರಾಣಿಯನ್ನು ಕಟ್ಟಿ, ನಾಯಿಗಳಿಂದ ಕಚ್ಚಿಸಿ ಹಿಂಸೆ ನೀಡುವ ಪದ್ಧತಿ ಮೈಸೂರಿನಲ್ಲಿ ಇನ್ನೂ ಜೀವಂತವಾಗಿದೆ. ದೇವರ ಹೆಸರಿನಲ್ಲಿ ಮೂಕ ಪ್ರಾಣಿಗೆ ಚಿತ್ರಹಿಂಸೆ ನೀಡಲಾಗುತ್ತಿದ್ದು, ಮೈಸೂರು ಜಿಲ್ಲೆ ಹೆಚ್‌ಡಿ.ಕೋಟೆ ತಾಲೂಕಿನ ಹೆಬ್ಬಲಗುಪ್ಪೆ ಗ್ರಾಮದಲ್ಲಿ ಘಟನೆ ನಡೆದಿದೆ.
'ಹು ಈಸ್ ಹೀ, ಸುಧಾಕರ್ ಏನು ಚೀಫ್ ಮಿನಿಸ್ಟ್ರಾ..'? ವಿಶ್ವನಾಥ್ ಸಿಡಿಮಿಡಿ
ಹುಲಿಕುರೆ ವೇಣುಗೋಪಾಲ ಸ್ವಾಮಿ ಜಾತ್ರಾ ಮಹೋತ್ಸದಲ್ಲಿ ನರಿಗೆ ಚಿತ್ರಹಿಂಸೆ ನೀಡಲಾಗುತ್ತಿದ್ದು, ಜನವರಿ 16ರಂದು ನಡೆದಿರುವ ಜಾತ್ರಾ ಮಹೋತ್ಸದಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಚಿಕಿತ್ಸೆಗೆ ಬಂದವಳ ಗುಪ್ತಾಂಗ ಮುಟ್ಟಿ ಕಿರುಕುಳ ಕೊಟ್ಟ ಕಾಮುಕ ದಂತವೈದ್ಯ
ಕಾಡಿನಿಂದ ನರಿ ಹಿಡಿದು ತಂದು ಮೋಜಿನಾಟ ನಡೆಸುತ್ತಿರುವ ಗ್ರಾಮಸ್ಥರು ಸಂಪ್ರದಾಯದ ಹೆಸರಿನಲ್ಲಿ ಕಾಡು ಪ್ರಾಣಿಗೆ ಚಿತ್ರಹಿಂಸೆ ನೀಡಿದ್ದಾರೆ. ಜಾತ್ರೆಯಲ್ಲಿ ನರಿ- ನಾಯಿ ನಡುವೆ ಕಾಳಗ ನಡೆಸಿದ್ದು, ನರಿ ಬಾಯಿ ಕಟ್ಟಿ ನಾಯಿಗಳಿಂದ ದಾಳಿ ಮಾಡಿಸಲಾಗುತ್ತಿದೆ.
ಸ್ಪೆಷಲ್ ಕ್ಲಾಸ್ ನೆಪದಲ್ಲಿ ಮೈ, ಕೈ ಮುಟ್ಟೋ ಮುಖ್ಯ ಶಿಕ್ಷಕ, ಸೆಲ್ಫೀ ತೆಗೆದು ಅಪ್ಲೋಡ್
ಹುಲಿಕುರೆ ಹಾಗೂ ಹೆಬ್ಬಲಗುಪ್ಪೆ ಗ್ರಾಮದ ಅಕ್ಕಪಕ್ಕದ ಗ್ರಾಮಗಳಲ್ಲಿ ಇದು ಸಾಮಾನ್ಯವಾಗಿದ್ದು, ತಲ ತಲಾಂತರಗಳಿಂದ ಈ ಮೌಢ್ಯಾಚರಣೆ ಜಾರಿಯಲ್ಲಿದೆ. ನರಿ-ನಾಯಿಗಳ ಕಾಳಗದಿಂದ ಗ್ರಾಮಕ್ಕೆ ಒಳಿತಾಗುತ್ತದೆ ಎನ್ನುವ ಮೂಢನಂಬಿಕೆ ಇಲ್ಲಿನ ಜನರಿಗಿದೆ. ಅಧಿಕಾರಿ ವರ್ಗ ಇದನ್ನು ಕಂಡೂ ಕಾಣದಂತೆ ವರ್ತಿಸುತ್ತಿರುವುದು ವಿಪರ್ಯಾಸ.