ಕಾರಜೋಳ, ಯತ್ನಾಳ್, ಮಾಧುಸ್ವಾಮಿ ಇವರ‌್ಯಾರು ನಾಯಕರೇ ಅಲ್ಲ: ಬಿಜೆಪಿ ಸಂಸದ

By Suvarna NewsFirst Published Jan 30, 2020, 12:42 PM IST
Highlights

ಅಗತ್ಯ ಬಿದ್ದರೆ ಸರ್ಕಾರ ಸುಸ್ಥಿರತೆಗಾಗಿ ಹಾಲಿ ಸಚಿವರು ತ್ಯಾಗ‌ ಮಾಡಬೇಕು| ಬಿಜೆಪಿಯಿಂದ ಸಿಎಎ ಪರ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ ಸಂಸದ ರಮೇಶ ಜಿಗಜಿಣಗಿ| ಬಿಜೆಪಿ ಅಧಿಕಾರದಲ್ಲಿರುವಾಗ ದಲಿತ ಮುಖ್ಯಮಂತ್ರಿ ಅಗುವುದು‌ ನಿಶ್ವಿತ|

ವಿಜಯಪುರ(ಜ.30): ಅಗತ್ಯ ಬಿದ್ದರೆ ಸರ್ಕಾರ ಸುಸ್ಥಿರತೆಗಾಗಿ ಹಾಲಿ ಸಚಿವರು ತ್ಯಾಗ‌ ಮಾಡಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಅವರು ಹೇಳಿದ್ದಾರೆ.

ಗುರುವಾರ ನಗರದ ಗಾಂಧಿಚೌಕ್‌ನಲ್ಲಿ ಬಿಜೆಪಿಯಿಂದ ಸಿಎಎ ಪರ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಚಿವ ಮಾಧುಸ್ವಾಮಿ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತ್ಯಾಗ ಮಾಡುವ ಹೇಳಿಕೆ‌ ವಿಚಾರದ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಜಿಗಜಿಣಗಿ, ತ್ಯಾಗ ಮಾಡುವ ಹೇಳಿಕೆ ನೀಡಿದ ಕಾರಜೊಳ, ಯತ್ನಾಳ್, ಮಾಧುಸ್ವಾಮಿ ನಾಯಕರಲ್ಲ, ಅದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ನಮ್ಮ‌ ಕೇಂದ್ರ ನಾಯಕರು ಸಮರ್ಥರಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ಅಧಿಕಾರದಲ್ಲಿರುವಾಗ ದಲಿತ ಮುಖ್ಯಮಂತ್ರಿ ಅಗುವುದು‌ ನಿಶ್ವಿತವಾಗಿದೆ. ನಾನು ಇರುವಾಗ ಆಗುತ್ತದೆಯೋ ಅಥವಾ ನಾನು ಮೃತಪಟ್ಟ ನಂತರ ಆಗುತ್ತಾರೋ ಗೊತ್ತಿಲ್ಲ ಒಟ್ಟಿನಲ್ಲಿ ದಲಿತ ಸಿಎಂ ಆಗುವುದು ಖಚಿತ ಎಂದು ತಿಳಿಸಿದ್ದಾರೆ.

ಇನ್ನು ಶ್ರೀಮುಲು ಹಾಗೂ ರಮೇಶ ಜಾರಕಿಹೊಳಿಗೆ ಡಿಸಿಎಂ ಸ್ಥಾನ ನೀಡುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮನ್ನ ಮುಂದಿಟ್ಟುಕೊಂಡು‌ ಚುನಾವಣೆ ಮಾಡೀರಿ ಎಂದು ರಾಮುಲು ಹೇಳುತ್ತಾರೆ. ನಾನು ಕಾಂಗ್ರೆಸ್ ಬಿಟ್ಟು ಬಂದಿದ್ದಕ್ಕೆ ಬಿಜೆಪಿ  ಸರ್ಕಾರ ರಚನೆಯಾಗಿದೆ ಎಂದು ರಮೇಶ ಜಾರಕಿಹೋಳಿ ಹೇಳುತ್ತಾರೆ. ಇಂತಹ ಹೇಳಿಕೆಗಳು ಬರೋದು ಸಹಜ, ಇವೆಲ್ಲಾ ಹೊಸದೇನಲ್ಲಾ, ಈ ಹಿಂದೆಯೂ ಬೇರೆ ಬೇರೆ ಪಕ್ಷಗಳಲ್ಲಿ ಸಿಎಂಗಳ ಒತ್ತಡ ತರುವ ಕೆಲಸವಾಗಿವೆ. ನಮ್ಮ‌ ರಾಜ್ಯ ಹಾಗೂ ಕೇಂದ್ರದ  ವರಿಷ್ಠರು  ಸಮರ್ಥರಿದ್ದಾರೆ. ಈ ಸಮಸ್ಯೆ ಬಗೆ ಪರಿಹರಿಸುತ್ತಾರೆ ಎಂದು ಹೇಳಿದ್ದಾರೆ.
 

click me!