ಪತಿಯನ್ನೇ ಕಿಡ್ನಾಪ್ ಮಾಡ್ಸಿದ್ಲು ಆ ಸುಂದರಿ : ಅಸಲಿಯತ್ತು ಏನಿತ್ತು..?

Published : Nov 29, 2019, 02:40 PM IST
ಪತಿಯನ್ನೇ ಕಿಡ್ನಾಪ್ ಮಾಡ್ಸಿದ್ಲು ಆ ಸುಂದರಿ : ಅಸಲಿಯತ್ತು ಏನಿತ್ತು..?

ಸಾರಾಂಶ

ಸುಂದರಿ ಪತ್ನಿ ತನ್ನ ಪತಿಯನ್ನೇ ಕಿಡ್ನಾಪ್ ಮಾಡ್ಸಿದ್ಲು. 6 ಜನರ ಜೊತೆ ಸೇರಿಕೊಂಡು ಪತಿ ಅಪಹರಿಸಿದ್ದ ಆ ಸುಂದರಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ

ದಾವಣಗೆರೆ (ನ.29): ಪತಿಯನ್ನೇ ಕಿಡ್ನಾಪ್ ಮಾಡಿಸಿದ ಪತ್ನಿ ಈಗ ಪೊಲೀಸರ ಅತಿಥಿಯಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ. 

ದಾವಣಗೆರೆ ಜಿಲ್ಲೆಯ ಲೋಕಿಕೆರೆಯಲ್ಲಿ ಸಂಗೀತಾ ಎಂಬಾಕೆ ಹಲವರ ಜೊತೆಗೆ ಸೇರಿ ತನ್ನ ಪತಿ ಶ್ರೀನಿವಾಸ್ ಎಂಬಾತನನ್ನು ಕಿಡ್ನಾಪ್ ಮಾಡಿಸಿದ್ದಳು. 

ಇದೀಗ ಕಿಡ್ನಾಪ್ ಪ್ರಕರಣ ಭೇದಿಸಿದ ಪೊಲೀಸರು ಪತ್ನಿ ಸಂಗೀತಾ ಜೊತೆಗೆ ಮತ್ತಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ತಲೆಮರೆಸಿಕೊಂಡಿದ್ದಾರೆ. 

ಪತ್ನಿಯ ನಡವಳಿಕೆ ಸರಿ ಇಲ್ಲವೆಂದು ಕಳೆದ ಎರಡು ವರ್ಷಗಳಿಂದ ಪತಿ ಹಾಗೂ ಪತ್ನಿ ದೂರವೇ ಇದ್ದರು. ಪತಿ ಪತ್ನಿ ನಡುವೆ ವೈಮನಸ್ಸು ಮುಂದುವರಿದಿತ್ತು.

ಬಿಪಿಎಲ್‌ ಕಾರ್ಡ್‌ ಹೊಂದಿರುವವರು ಗಮನಿಸಿ : ಶೀಘ್ರ ನಿಮ್ಮ ಕಾರ್ಡ್ ಮರಳಿಸಿ...

ಇದೇ ಕಾರಣದಿಂದ ಕಳೆದ ಎರಡು ದಿನಗಳ ಹಿಂದೆ ಪತ್ನಿ ಸಂಗೀತಾ ತನ್ನ 6 ಜನ ಸಹಚರರೊಂದಿಗೆ ಸೇರಿ ಪೆಟ್ರೋಲ್ ಬಂಕ್ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಶ್ರೀನಿವಾಸ್ ಅವರನ್ನು ಕಿಡ್ನಾಪ್ ಮಾಡಿಸಿದ್ದಳು. 

ಶಾಲೆಯ ಮೈದಾನದಲ್ಲೇ ಹೈಸ್ಕೂಲ್ ವಿದ್ಯಾರ್ಥಿಗಳ ಲಿಪ್ ಲಾಕ್...

ಇದೀಗ ಅಪಹರಣ ಪ್ರಕರಣ ಭೇದಿಸಿದ ಹದಡಿ ಪೊಲೀಸರು ಪತ್ನಿ ಸಂಗೀತಾ ಹಾಗೂ ಉಳಿದಿಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಉಳಿದ ನಾಲ್ವರ ಬಂಧನಕ್ಕೆ ಬಲೆ ಬೀಸಿದ್ದಾರೆ. 

PREV
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!