ನೇಕಾರರು, ರೈತರು ನನ್ನ ಎರಡು ಕಣ್ಣು ಇದ್ದಂತೆ| ಅಧಿಕಾರಕ್ಕೆ ಬಂದನಂತರ ನೇಕಾರರ ನೂರು ಕೋಟಿ ಸಾಲ ಮನ್ನಾ ಮಾಡಿದ್ದೇನೆ| ನನ್ನ ಅಧಿಕಾರವಧಿಯಲ್ಲಿ ಅನೇಕ ಯೋಜನೆಗಳು ತಂದಿದ್ದೇನೆ ಎಂದ ಸಿಎಂ|ನೇಕಾರ ಸಮುದಾಯಕ್ಕೆ ಭರವಸೆ ನೀಡುತ್ತೇನೆ| ನಿಮ್ಮೆಲ್ಲಾ ಸಮಸ್ಯೆ ಬಗೆಹರಿಸುತ್ತೇನೆ|
ಹಾವೇರಿ[ನ.29]: ಇಲ್ಲಿ ಬಿಸಿಲು ಜಾಸ್ತಿ ಇದ್ದರೂ ಮಹಿಳೆಯರು ಬಂದು ಕುಳಿತಿದ್ದೀರಾ.ಶಾಮಿಯಾನ ಹಾಕಿಸಬೇಕಾಗಿತ್ತು ನಮ್ಮಿಂದ ತಪ್ಪಾಗಿದೆ ಕ್ಷಮಿಸಿ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ.
ಶುಕ್ರವಾರ ರಾಣಿಬೆನ್ನೂರು ಕ್ಷೇತ್ರದ ತುಮ್ಮಿನಕಟ್ಟೆಯಲ್ಲಿ ನಡೆಯುತ್ತಿರುವ ಬಿಜೆಪಿ ಸಮಾವೇಶದಲ್ಲಿ ಭಾಷಣ ಮಾಡಿದ ಅವರು, ನೇಕಾರರು, ರೈತರು ನನ್ನ ಎರಡು ಕಣ್ಣು ಇದ್ದಂತೆ. ಅಧಿಕಾರಕ್ಕೆ ಬಂದನಂತರ ನೇಕಾರರ ನೂರು ಕೋಟಿ ಸಾಲ ಮನ್ನಾ ಮಾಡಿದ್ದೇನೆ. ನನ್ನ ಅಧಿಕಾರವಧಿಯಲ್ಲಿ ಅನೇಕ ಯೋಜನೆಗಳು ತಂದಿದ್ದೇನೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅನರ್ಹ ಶಾಸಕ ಆರ್. ಶಂಕರ್ ಗೆ ದ್ರೋಹವಾಗಿದೆ. ಪ್ರತೀಕಾರ ತೀರಿಸಬೇಕಾಗಿದೆ. ನೇಕಾರ ಸಮುದಾಯಕ್ಕೆ ಭರವಸೆ ನೀಡುತ್ತೇನೆ. ನಿಮ್ಮೆಲ್ಲಾ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿದ್ದಾರೆ. ಕಾಂಗ್ರೆಸ್- ಜೆಡಿಎಸ್ ಹೇಳ್ತಾರೆ ಮೂರು ತಿಂಗಳಲ್ಲಿ ಮತ್ತೆ ಚುನಾವಣೆ ಬರುತ್ತೆ ಅಂತಾ. ಅದೇಗೆ ಚುನಾವಣೆ ಬರುತ್ತೆ, ಸುಮ್ಮನೆ ಹೇಳ್ತಾರೆ, ಖಜಾನೆಯಲ್ಲಿ ಸಾಕಷ್ಟು ಹಣವಿದೆ, ಅತೀವೃಷ್ಟಿ ಸಮಯದಲ್ಲಿ ಸ್ವಲ್ಪ ತೊಂದರೆಯಾಯಿತು.
ಯಡಿಯೂರಪ್ಪ ಮೂರುವರೇ ವರ್ಷ ಆಡಳಿತ ನಡೆಸಿದ್ರೆ ನಾವು ತಬ್ಬಲಿಗಳಾಗುತ್ತೆವೆ ಎಂಬ ಭಯ ಅವರಿಗಿದೆ. ಎಲ್ಲಿ ಯಡಿಯೂರಪ್ಪ ಉಳಿದ ಅವಧಿ ಪೂರ್ಣ ಸರ್ಕಾರ ನಡೆಸುತ್ತಾರೆ ಅಂತ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಭಯವಿದೆ ಎಂದು ಹೇಳಿದ್ದಾರೆ.