ಮೈಸೂರು (ಜು.28): ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ರಾಜೀನಾಮೆಯಿಂದಾಗಿ ಹಳೆಯ ಮಂತ್ರಿ ಮಂಡಲ ಹೋಗಿ, ಹೊಸ ಮಂತ್ರಿ ಮಂಡಲ ಬರುವುದರಿಂದ ಅವಿಭಜಿತ ಮೈಸೂರು ಜಿಲ್ಲೆಯಿಂದ ಯಾರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಚರ್ಚೆ ಆರಂಭವಾಗಿದೆ.
ಮೈಸೂರು-ಚಾಮರಾಜನಗರ ಜಿಲ್ಲೆಗಳಲ್ಲೇ ಬಿಜೆಪಿ ನಾಲ್ವರು ಶಾಸಕರಿದ್ದಾರೆ. ಅವರೆಂದರೆ ಎಸ್.ಎ. ರಾಮದಾಸ್ - ಕೃಷ್ಣರಾಜ, ಎಲ್. ನಾಗೇಂದ್ರ- ಚಾಮರಾಜ, ಬಿ. ಹರ್ಷವರ್ಧನ್- ನಂಜನಗೂಡು ಹಾಗೂ ಸಿ.ಎನ್. ನಿರಂಜನಕುಮಾರ್- ಗುಂಡ್ಲುಪೇಟೆ.
undefined
ಈ ಪೈಕಿ ರಾಮದಾಸ್ ನಾಲ್ಕನೇ ಬಾರಿಗೆ ಶಾಸಕರು ಹಾಗೂ ಈ ಹಿಂದೆಯೂ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು. ಉಳಿದ ಮೂವರು ಪ್ರಥಮ ಬಾರಿ ವಿಧಾನಸಭೆಗೆ ಆಯ್ಕೆಯಾದವರು.
ಬೊಮ್ಮಾಯಿ ಆಯ್ಕೆಗೆ ಮಿತ್ರಮಂಡಳಿ ಸಂತಸ, ಮಾತು ಉಳಿಸಿಕೊಳ್ಳುವ ವಿಶ್ವಾಸವಿದೆ
ನಾಗೇಂದ್ರ ಅವರು ಮೂರು ಬಾರಿ ನಗಪಾಲಿಕೆ ಸದಸ್ಯರಾಗಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವವಿದೆ. ಇವರು 2013ರ ಚುನಾವಣೆಯಲ್ಲಿ ಸೋತಿದ್ದರು.
ನಿರಂಜನಕುಮಾರ್ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದರು. ಅವರ ತಂದೆ ಶಿವಮಲ್ಲಪ್ಪ ಎರಡು ಬಾರಿ, ನಿರಂಜನ ಮೂರು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು.
ಬೊಮ್ಮಾಯಿಗೆ ಸಿಎಂ ಪಟ್ಟ; ಕರ್ನಾಟಕ ಸೇರಿ 5 ರಾಜ್ಯದಲ್ಲಿ ಸಿಎಂ ಮಕ್ಕಳೇ ಸಿಎಂ!
ಹರ್ಷವರ್ಧನ್ ಮೊದಲು ಬಾರಿ ಶಾಸಕರು, ಚಾಮರಾಜನಗರ ಸಂಸದರಾದ ವಿ. ಶ್ರೀನಿವಾಸಪ್ರಸಾದ್ ಅವರ ಅಳಿಯ.
ಕಳೆದ ಎರಡು ವರ್ಷಗಳಲ್ಲಿ ಯಡಿಯೂರಪ್ಪ ಸರ್ಕಾರದಲ್ಲಿ ಮೈಸೂರು, ಚಾಮರಾಜನಗರದವರಿಗೆ ಸಚಿವ ಸ್ಥಾನ ಸಿಗಲಿಲ್ಲ. ಮೊದಲು ವಿ. ಸೋಮಣ್ಣ, ನಂತರ ಎಸ್.ಟಿ. ಸೋಮಶೇಖರ್ ಉಸ್ತುವಾರಿ ಸಚಿವರಾಗಿದ್ದರು.
ಎಚ್. ವಿಶ್ವನಾಥ್‌ಗೆ ಕಾನೂನು ತೊಡಕು
ಈ ನಾಲ್ವರು ವಿಧಾನಸಭಾ ಸದಸ್ಯರಲ್ಲದೇ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ಕೂಡ ಬಿಜೆಪಿಯಲ್ಲಿದ್ದಾರೆ. ಆದರೆ ಅವರ ವಿಧಾನಸಭಾ ಸದಸ್ಯತ್ವ ರದ್ದತಿ ಪ್ರಕರಣದಲ್ಲಿ ಯಾವುದಾದರೂ ಚುನಾವಣೆಯಲ್ಲಿ ಗೆದ್ದು ಬರಬೇಕು ಎಂದು ಸುಪ್ರೀಂಕೋರ್ಟು ತೀರ್ಪು ನೀಡಿದೆ. ಆದರೆ ವಿಶ್ವನಾಥ್ ವಿಧಾನ ಪರಿಷತ್ತಿನ ನಾಮಕರಣ ಸದಸ್ಯರು. ಆದ್ದರಿಂದ ಅವರಿಗೆ ಸಚಿವ ಸ್ಥಾನ ನೀಡಲು ಕಾನೂನು ತೊಡಕು ಇದೆ.