ಕೊರೋನಾ ಜಾಗೃತಿ ಗೊಂಬೆಯಾಟಕ್ಕೆ ಡಬ್ಲ್ಯುಎಚ್‌ಒ ಮೆಚ್ಚುಗೆ

By Kannadaprabha NewsFirst Published Sep 16, 2020, 7:09 AM IST
Highlights

ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿದ ಗೊಂಬೆಯಾಟವನ್ನು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿ ಈ ಬಗ್ಗೆ ಭಾರತದ ಕಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. 

ಮಂಗಳೂರು (ಸೆ.16): ಗಡಿನಾಡು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕೊರೋನಾ ವೈರಸ್‌ ಸೋಂಕಿನ ಕುರಿತು ಜಾಗೃತಿ ಮೂಡಿಸಲು ನಡೆಸಿದ ಯಕ್ಷಗಾನ ಗೊಂಬೆಯಾಟ ಇದೀಗ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂ ಎಚ್‌ಒ) ಮೆಚ್ಚುಗೆಗೆ ಪಾತ್ರವಾಗಿದೆ. 

ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಾಂಕ್ರಾಮಿಕ ಪಿಡುಗು ಉಲ್ಬಣ ಮತ್ತು ಪ್ರತಿಸ್ಪಂದನಾ ಜಾಲ ಎಂಬ ಕೊರೋನಾ ಜಾಗೃತಿಗೆ ಸ್ಥಳೀಯ ಮಟ್ಟದಲ್ಲಿ ನಡೆದ ಪ್ರಯತ್ನಗಳ ಪರಿವೀಕ್ಷಣೆ ನಡೆಸುತ್ತದೆ.

ಕೊರೋನಾಕ್ಕೆ ಮತ್ತೊಬ್ಬ ಯುವ ವೈದ್ಯ ಬಲಿ; ಮಹಾಮಾರಿ ಅಟ್ಟಹಾಸಕ್ಕೆ ಕೊನೆ ಎಂದು? ...

ಸಿಂಗಾಪುರ ನ್ಯಾಷನಲ್‌ ಯುನಿವರ್ಸಿಟಿ ಹೆಲ್ತ್‌ ಸಿಸ್ಟಮ್‌ನಲ್ಲಿ ಪ್ರಾಧ್ಯಾಪಕರಾಗಿರುವ ಡೇಲ್‌ ಫಿಷರ್‌ ನೇತೃತ್ವದ ಈ ತಂಡಕ್ಕೆ ಸಿಂಗಾಪುರದ ಪ್ರೊ.ಪ್ರಕಾಶ್‌ ಹಂದೆ ಅವರು ಸಿಗಿಬಾಗಿಲು ಪ್ರತಿಷ್ಠಾನ ಮತ್ತು ಗೋಪಾಲಕೃಷ್ಣ ಗೊಂಬೆಯಾಟ ಯಕ್ಷಗಾನ ಸಂಘ ಕಾಸರಗೋಡು ಇದರ ಸಹಯೋಗದೊಂದಿಗೆ ಮತ್ತು ಗೊಂಬೆಯಾಟ ಮೂಲಕ ಕೊರೋನಾ ವೈರಸ್‌ ಬಗ್ಗೆ ಜಾಗೃತಿ ಮೂಡಿಸುತ್ತಿರುವ ವಿಚಾರವನ್ನು ತಿಳಿಸಿದ್ದರು. 

ಡೇಲ್‌ ಫಿಶರ್‌ ಈ ಯಕ್ಷಗಾನ ಜಾಗೃತಿಯ ವಿಡಿಯೋ ವೀಕ್ಷಿಸಿ ಸ್ಥಳೀಯ ಮಟ್ಟದಲ್ಲಿ ನಡೆದ ಈ ಪ್ರಯತ್ನವನ್ನು ವೆಬಿನಾರ್‌ನಲ್ಲಿ ಶ್ಲಾಘಿಸಿದ್ದರು.

click me!