ಹೋರಿ ಬೆದರಿಸುವ ಸ್ಪರ್ಧಗೆ ಯಾರ ಅನುಮತಿ ಕಡ್ಡಾಯ? ಸಾವು-ನೋವು ಸಂಭವಿಸಿದರೆ ಯಾರು ಹೊಣೆ?

Kannadaprabha News   | Kannada Prabha
Published : Nov 10, 2026, 10:15 AM IST
Byadagi police guidelines hori habba

ಸಾರಾಂಶ

Byadagi police guidelines hori habba ಹೋರಿ ಬೆದರಿಸುವ ಸ್ಪರ್ಧೆ ಆಯೋಜನೆಗೂ ಮುನ್ನ ದಂಡಾಧಿಕಾರಿಗಳ ಪೂರ್ವಾನುಮತಿ ಕಡ್ಡಾಯ ಎಂದು ಪಿಎಸ್‌ಐ ಸೂಚಿಸಿದ್ದಾರೆ. ಪ್ರಾಣಿ ಹಿಂಸೆ, ಸಾರ್ವಜನಿಕರ ಸುರಕ್ಷತೆಗೆ ಧಕ್ಕೆ ತರುವಂತಿಲ್ಲ, ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.

ಬ್ಯಾಡಗಿ (ನ.10): ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸುವ ಮುನ್ನ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಸೇರಿದಂತೆ ಸ್ಥಳೀಯ ತಾಲೂಕು ದಂಡಾಧಿಕಾರಿಗಳಿಂದ ಪೂರ್ವಾನುಮತಿ ಕಡ್ಡಾಯ ಎಂದು ಪಿಎಸ್‌ಐ ಭಾರತಿ ಕುರಿ ಸೂಚನೆ ನೀಡಿದರು.

ಗ್ರಾಮೀಣ ಪ್ರದೇಶದಲ್ಲಿ ಹೋರಿ ಬೆದರಿಸುವ ಸ್ಪರ್ಧೆ

ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಗ್ರಾಮದ ಮುಖಂಡರನ್ನು ಭೇಟಿಯಾಗಿ ಈ ಕುರಿತು ಮಾಹಿತಿ ನೀಡಿದ ಅವರು, ದೀಪಾವಳಿ ಬಳಿಕ ಸಾಂಪ್ರದಾಯಿಕವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ, ಆದರೆ ಇತ್ತೀಚೆಗೆ ಸದರಿ ಹಬ್ಬದ ಸಂದರ್ಭಗಳಲ್ಲಿ ಆಗುತ್ತಿರುವ ಸಾವುನೋವುಗಳು ಸೇರಿದಂತೆ ನಡೆಯುವ ದುರ್ಘಟನೆಗಳ ಕುರಿತು ಹೊಣೆಗಾರಿಕೆ ಪ್ರಮುಖವಾಗಿದ್ದು, ಆ ಕಾರಣಕ್ಕಾಗಿ ಕೋರ್ಟ್‌ ಕೆಲವೊಂದು ನಿರ್ದೇಶನ ಹಾಗೂ ಶರತ್ತು ವಿಧಿಸಿದ್ದು, ಅವುಗಳಿಗೆ ಒಪ್ಪಿದಲ್ಲಿ ಹೋರಿ ಹಬ್ಬದಾಚರಣೆಗೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದರು.

ಹಬ್ಬದ ಸಂದರ್ಭದಲ್ಲಿ ಹೋರಿಗಳಿಗೆ ಪ್ರಚೋದಿಸುವುದು, ಅನಗತ್ಯವಾಗಿ ಹಿಂಸೆ ನೀಡುವುದು, ನೋವುಂಟು ಮಾಡುವ ರೀತಿಯಲ್ಲಿ ವರ್ತಿಸುವುದು ಹಾಗೂ ಸಾರ್ವಜನಿಕರು ಮತ್ತು ಪ್ರಾಣಿಗಳ ಸುರಕ್ಷತೆಗೆ ಧಕ್ಕೆ ಉಂಟುಮಾಡುವ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ತಿಳಿಸಿದರು.

ಹೋರಿ ಬೆದರಿಸುವ ಸ್ಪರ್ಧೆ ಸುರಕ್ಷತಾ ಕ್ರಮಗಳೇನು?

ಸ್ಪರ್ಧೆಯ ವೇಳೆ ಸಾರ್ವಜನಿಕರ ಸುರಕ್ಷತೆ ಕಾಪಾಡಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು, ನ್ಯಾಯಾಲಯದ ನಿರ್ದೇಶನಗಳನ್ನು ಉಲ್ಲಂಘಿಸದಂತೆ ಆಯೋಜಕರು ವಿಶೇಷ ಕಾಳಜಿ ವಹಿಸಬೇಕು ಎಂದು ಸೂಚಿಸಿದರು.

ಸಂಪ್ರದಾಯ ಮತ್ತು ಸಂಭ್ರಮದ ಜೊತೆಗೆ ಪ್ರಾಣಿಗಳ ಹಿತಾಸಕ್ತಿ ಹಾಗೂ ಸಾರ್ವಜನಿಕರ ಸುರಕ್ಷತೆಯನ್ನೂ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ, ಹಬ್ಬದ ಸಂಭ್ರಮದ ಹೆಸರಿನಲ್ಲಿ ಕಾನೂನು ಉಲ್ಲಂಘನೆಗೆ ಅವಕಾಶವಿಲ್ಲ. ಅನುಮತಿ ಪಡೆಯದೇ ಹೋರಿ ಹಬ್ಬ ಅಥವಾ ಸ್ಪರ್ಧೆ ಆಯೋಜಿಸುವುದು ಹಾಗೂ ನ್ಯಾಯಾಲಯದ ನಿಯಮಗಳನ್ನು ಉಲ್ಲಂಘಿಸುವುದು ಕಂಡುಬಂದಲ್ಲಿ ಸಂಬಂಧಪಟ್ಟ ಆಯೋಜಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಪಿಎಸ್‌ಐ ಎನ್.ಕೆ. ನಿಂಗೇನಹಳ್ಳಿ, ಎಎಸ್‌ಐ ಸಿ.ಎಂ.ಹುಡೇದ ಪೊಲೀಸ್ ಪೇದೆಗಳಾದ ಹನುಮಂತ ಬೆಳಕೇರಿ, ವಿಜಯ ದೇಸಾಯಿ, ಎಂ.ಜೆ.ಬಚ್ಚೆಗೌಡ್ರ, ಬಸವರಾಜ ಕೆಂಚನಗೌಡ್ರ ಸೇರಿದಂತೆ ಹಲವರು ಉಪಸ್ಥಿತದ್ದರು.

PREV
Read more Articles on
click me!

Recommended Stories

₹2500 ಬದಲು ₹1500 ಬರ ಪರಿಹಾರ: ಯಾದಗಿರಿ ರೈತರಿಗೆ ಶಾಕ್‌!
ಮೋದಿ ಭೇಟಿಯ ಸಮಯದಲ್ಲೇ ಮೈಸೂರಿಗೆ ಮತ್ತೊಂದು ಗರಿಮೆ, ಕೌಟಿಲ್ಯನ ಅರ್ಥಶಾಸ್ತ್ರ ತಾಳೆಗರಿ ಹಸ್ತಪ್ರತಿ UNESCO ಮಡಿಲಿಗೆ