ಬಿಜೆಪಿ ಸರ್ಕಾರ ಸರ್ವಜನಾಂಗದ ಅಭಿವೃದ್ದಿಗೆ ಬದ್ಧ: ಸಚಿವ ನಿರಾಣಿ

By Kannadaprabha News  |  First Published Dec 13, 2022, 12:30 PM IST

ಅತಿವೃಷ್ಥಿಯಿಂದ ಮನೆಗಳು ಸೋರಿದಾಗ ಬಿದ್ದಾಗ ಅನೇಕ ಕುಟುಂಬಗಳಿಗೆ ಗುಡಿ ಗುಂಡಾರಗಳು ಆಶ್ರಯ ತಾಣವಾಗಿದ್ದನ್ನು ನಾವು ನೀವೆಲ್ಲ ಕಂಡಿದ್ದೇವೆ ಕಾರಣ ಗುಡಿ ಗುಂಡಾರಗಳ ಅಭಿವೃದ್ಧಿ ಕೂಡಾ ನನ್ನ ಧ್ಯೇಯವಾಗಿದೆ: ಸಚಿವ ಮುರುಗೇಶ ನಿರಾಣಿ 


ಕೆರೂರ(ಡಿ.13):  ಗ್ರಾಮಗಳ ಅಭಿವೃದ್ದಿಗೆ ಸಮೂಹದ ಚರ್ಚೆ ನಿರ್ಧಾರದ ಅವಶ್ಯಕತೆಯಿದ್ದು ಗ್ರಾಮಸ್ತರೆಲ್ಲರೂ ಒಂದೆಡೆ ಸೇರಿ ತಮ್ಮ ಅಗತ್ಯಗಳ ಪಟ್ಟಿಮಾಡಿ ನನ್ನ ಗಮನಕ್ಕೆ ತಂದರೆ ಅವುಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಕೈಗಾರಿಕಾ ಸಚಿವ ಡಾ,ಮುರುಗೇಶ ನಿರಾಣಿ ಹೇಳಿದರು. ಭಾನುವಾರ ಸಂಜೆ ಕೆರೂರ ಸಮೀಪದ ಸರಕಾರಿ ಹಣಮನೇರಿ ಗ್ರಾಮದ ಶ್ರೀ ಮಾರುತಿ ದೇವಸ್ಥಾನದ 10 ಲಕ್ಷ ರೂ ವೆಚ್ಚದ ಸಮುದಾಯ ಭವನದ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡುತ್ತಾ, ಅತಿವೃಷ್ಥಿಯಿಂದ ಮನೆಗಳು ಸೋರಿದಾಗ ಬಿದ್ದಾಗ ಅನೇಕ ಕುಟುಂಬಗಳಿಗೆ ಗುಡಿ ಗುಂಡಾರಗಳು ಆಶ್ರಯ ತಾಣವಾಗಿದ್ದನ್ನು ನಾವು ನೀವೆಲ್ಲ ಕಂಡಿದ್ದೇವೆ ಕಾರಣ ಗುಡಿ ಗುಂಡಾರಗಳ ಅಭಿವೃದ್ಧಿ ಕೂಡಾ ನನ್ನ ಧ್ಯೇಯವಾಗಿದೆ ಅಂತ ತಿಳಿಸಿದ್ದಾರೆ. 

ಬಾದಾಮಿ ತಾಲೂಕಿನ ಜನ ಉಡುಪಿ ಮಂಗಳೂರ ಕಡೆ ದುಡಿಯಲು ಹೋಗುತ್ತಿರುವದನ್ನು ನಾವೆಲ್ಲ ಕಣ್ಣಾರೆ ಕಂಡಿದ್ದೇವೆ. ಅದನ್ನು ತಪ್ಪಿಸಬೇಕೆನ್ನುವ ಉದ್ದೇಶದಿಂದ ಹಲಕುರ್ಕಿ ಪ್ರದೇಶದ ಭೂ ಸ್ವಾಧಿನಪಡಿಸಿಕೊಂಡು ವಿವಿಧ ಕೈಗಾರಿಕೆಗಳನ್ನು ಪ್ರಾರಂಭಿಸಿ ದುಡಿಯುವ ಕೈಗಳಿಗೆ ಕೆಲಸ ಕೊಡಿಸಬೇಕೆಂಬ ನನ್ನ ಉದ್ದೇಶಕ್ಕೆ ಕ್ಷೇತ್ರದ ಜನರ ಸಹಕಾರ ಬೇಕು. ಇದರಿಂದ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಲಾಗುತ್ತದೆ. ಇಲ್ಲಿಯ ರೈತರು ತಾವು ಬೆಳೆದ ಕಬ್ಬನ್ನು ದೂರದ ಪ್ಯಾಕ್ಟರಿಗೆ ಕಳಸಬೇಕಾದರೆ ಹರ ಸಾಹಸ ಪಡುವಂತಾಗಿತ್ತು. ಇದರಿಂದ ವೇಳೆಯ ಹಾಗೂ ಹಣದ ಅಪವ್ಯಯವಾಗುತ್ತಿತ್ತು ಇದನ್ನು ತಪ್ಪಿಸಲು ಬಾದಾಮಿಯಲ್ಲಿಯೆ 3 ಪ್ಯಾಕ್ಟರಿಗಳನ್ನು ಪ್ರಾರಂಭಿಸಿದ್ದು, ರೈತರು ನಿರಾತಂಕವಾಗಿ ಕಬ್ಬು ಬೆಳೆದು ತಮ್ಮಲ್ಲಿಯೇ ಇರುವ ಫ್ಯಾಕ್ಟರಿಗೆ ಕಬ್ಬು ತಂದು ಯೋಗ್ಯದರಪಡೆದು ವೇಳೆ ಹಾಗೂ ಹಣದ ಅಪವ್ಯಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.

Tap to resize

Latest Videos

undefined

KARNATAKA ELECTION : ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಶತಸಿದ್ಧ

ಕ್ಷೇತ್ರದ ಜನ ಸಧೃಡ ಆರೋಗ್ಯವಂತರಾಗಿ ಆರ್ಥಿಕವಾಗಿ ಸುಭದ್ರರಾಗಿ ನೆಮ್ಮದಿಯ ಜೀವನ ನಡೆಸಬೇಕೆನ್ನುವ ನನ್ನ ಹಂಬಲಕ್ಕೆ ಸಾತ್‌ ನೀಡಬೇಕೆಂದು ಮನವಿ ಮಾಡುತ್ತಾ, ಬಿಜೆಪಿ ಸರಕಾರ ಕೂಡಾ ಸರ್ವಜನಾಂಗದ ಅಭಿವೃದ್ದಿಗೆ ಬದ್ದವಾಗಿ ಕೆಲಸ ಮಾಡುತ್ತಿದ್ದು, ನಾಗರಿಕರು ಸರಕಾರದ ಸೌಲಭ್ಯಗಳ ಸದ್ಬಳಕೆಗೆ ಮುಂದಾಗಬೇಕೆಂದರು. ಮಲ್ಲಯ್ಯ ಸುರಗಿಮಠ ಪ್ರಾಸ್ತವಿಕ ಮಾತನಾಡಿದರು. ವೇ,ಮೂ, ನಿಂಗಪ್ಪಜ್ಜ ಸಾನಿಧ್ಯವಹಿಸಿದ್ದರು. ವೇದಿಕೆಯಲ್ಲಿ ಬಸನಗೌಡ ಗೌಡ್ರ, ಯಂಕನಗೌಡ ಹಿರೇನಾಯ್ಕರ ಈರಣ್ಣ ಮೇಟಿ ಸಿದ್ದನಗೌಡ ಕುಳಗೇರಿ ಮಲ್ಲಿಕಾರ್ಜುನ ಅಂಗಡಿ ಶೇಖರ ರಾಠೋಡ ಪಿಡಬ್ಲುಡಿ ಕಾ,ನಿ,ಅಭಿಯಂತರ ನಾರಾಯಣ ಕುಲಕರ್ಣಿ ಜಿ,ಪಂ,ಕಾ,ನಿ,ಅಭಿಯಂತರ ಡಿ,ಎಲ್‌,ಶಾಸ್ತಿ್ರ ಉಪತಹಶೀಲ್ದಾರ ರಾಜಶೇಖರ ಸಾತಿಹಾಳ ಇದ್ದರು.

ಚಿಂಚಲಕಟ್ಟಿ ಗ್ರಾಮದ ಎಸ್‌ಸಿ, ಕಾಲೋನಿ ಸಿ,ಸಿ,ರಸ್ತೆ ಪಾಂಡುರಂಗ ದೇವಸ್ಥಾನ ಯಲ್ಲಮ್ಮದೇವಿ ದೇವಸ್ಥಾನದ ಕಾಮಗಾರಿಗಳು ಮತ್ತು ಹವಳಕೊಡ ಗ್ರಾಮದಲ್ಲಿ ಮಾರುತೇಶ್ವರ ದೇವಸ್ಥಾನ, ಚಾವಡಿ ಮಹಾಧ್ವಾರ ಹಾಗೂ ಎಸ್‌ಸಿ,ಕಾಲೋನಿ ಸಿ,ಸಿ ರಸ್ತೆ ಕಾಮಗಾರಿಗಳು ಹಾಗೂ ಬೆಳ್ಳಿಖಂಡಿ ಯಿಂದ ಬಾದಾಮಿ ಬಟಕುರ್ಕಿ ರಸ್ತೆವರೆಗೆ ರಸ್ತೆ ಅಭಿವೃದ್ದಿ ಕಾಮಗಾರಿ, ಮಾರುತೇಶ್ವರ ದೇವಸ್ಥಾನ ಅಭಿವೃದ್ದಿ, ಚಾವಡಿ ಮಹಾಧ್ವಾರದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ಈ ಸಂದಂರ್ಭಸಲ್ಲಿ ಬಿಜೆಪಿ ಧುರೀಣರಾದ ಹೂವಪ್ಪ ರಾಠೋಡ, ಹನಮಂತಗೌಡ ಪಾಟೀಲ(ಹೊಸಕೋಟಿ) ದುಶ್ಯಂಗಪ್ಪ ಮುರನಾಳ, ರಾಮಚಂದ್ರ ಮೈಲಾರ, ಮಲ್ಲು ಕಂಟೆಪ್ಪನವರ, ಶಂಕರಗೌಡ ಗೌಡ್ರ ಸೇರಿದಂತೆ ಹಲವಾರು ನಾಯಕರಿದ್ದರು.
 

click me!