ಮಂಚನಬೆಲೆಗೆ ಶಾಶ್ವತ ಸೇತುವೆ ನಿರ್ಮಾಣ ಯಾವಾಗ?: ತಾತ್ಕಾಲಿಕ ಸೇತುವೆಯು ಮುಳುಗಡೆ ಸಾಧ್ಯತೆ

By Kannadaprabha NewsFirst Published Jun 1, 2023, 9:03 PM IST
Highlights

ಕಳೆದ ವರ್ಷ ಅಕ್ಟೋಬರ್‌ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದ ಮಂಚನಬೆಲೆ ಗ್ರಾಮದ ಮುಖ್ಯ ಸೇತುವೆ ಕೊಚ್ಚಿ ಹೋಗಿದ್ದು ಯಾವಾಗ ಮತ್ತೊಮ್ಮೆ ಮುಖ್ಯ ಸೇತುವೆ ನಿರ್ಮಾಣವಾಗುತ್ತದೆ ಎಂದು ಗ್ರಾಮಸ್ಥರು ಹಾಗೂ ಪ್ರವಾಸಿಗರು ಸರ್ಕಾರಕ್ಕೆ ಪ್ರಶ್ನೆ ಮಾಡುತ್ತಿದ್ದಾರೆ. 

ಮಾಗಡಿ (ಜೂ.01): ಕಳೆದ ವರ್ಷ ಅಕ್ಟೋಬರ್‌ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದ ಮಂಚನಬೆಲೆ ಗ್ರಾಮದ ಮುಖ್ಯ ಸೇತುವೆ ಕೊಚ್ಚಿ ಹೋಗಿದ್ದು ಯಾವಾಗ ಮತ್ತೊಮ್ಮೆ ಮುಖ್ಯ ಸೇತುವೆ ನಿರ್ಮಾಣವಾಗುತ್ತದೆ ಎಂದು ಗ್ರಾಮಸ್ಥರು ಹಾಗೂ ಪ್ರವಾಸಿಗರು ಸರ್ಕಾರಕ್ಕೆ ಪ್ರಶ್ನೆ ಮಾಡುತ್ತಿದ್ದಾರೆ. ಮಂಚನಬೆಲೆ ಜಲಾಶಯದ ಪಕ್ಕದಲ್ಲಿ ಮುಖ್ಯ ಸೇತುವೆ ನಿರ್ಮಾಣ ಮಾಡಲಾಗಿತ್ತು ಈ ಸೇತುವೆಯು ಶಿಥಿಲಾವಸ್ಥೆಯಲ್ಲಿ ಇತ್ತು. ಭಾರೀ ಮಳೆಯಿಂದ ಹೆಚ್ಚುವರಿ ನೀರನ್ನು ಜಲಾಶಯದಿಂದ ಬಿಟ್ಟರಭಸಕ್ಕೆ ಸೇತುವೆ ಸಂಪೂರ್ಣ ಕುಸಿದು ಹೋಗಿದ್ದು, ಈಗ ಹೊಸ ಸೇತುವೆ ನಿರ್ಮಾಣ ಕಾರ್ಯ ಆಗದೇ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿದೆ.

ಈಗ ಮತ್ತೇ ಮಳೆಗಾಲ ಆಗಿರುವುದರಿಂದ ಹೆಚ್ಚುವರಿ ನೀರು ಮಂಚನಬೆಲೆ ಜಲಾಶಯಕ್ಕೆ ಬಂದರೆ ಮತ್ತೆ ತಾತ್ಕಾಲಿಕವಾಗಿ ನಿರ್ಮಾಣ ಮಾಡಿರುವ ಸೇತುವೆ ಮುಳುಗಡೆ ಯಾಗುವ ಭೀತಿಯಲ್ಲಿದೆ. ಶನಿವಾರ ಮತ್ತು ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ವಾಹನ ದಟ್ಟಣೆಯು ಹೆಚ್ಚಾಗುತ್ತಿದ್ದು, ತಾತ್ಕಾಲಿಕ ಸೇತುವೆಯಲ್ಲಿ ಪ್ರಯಾಣ ಮಾಡುವಂತಾಗಿದೆ. ಒಂದು ವೇಳೆ ಮಳೆ ಹೆಚ್ಚಾದರೆ ಈ ಸೇತುವೆಯು ಮುಳುಗಡೆಯಾದರೆ ಮಂಚನಬೆಲೆ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸಾಕಷ್ಟುಸಮಸ್ಯೆ ಆಗಲಿದೆ.

ಪಕ್ಷಭೇದವಿಲ್ಲದೆ ಆದ್ಯತೆ ಮೇರೆಗೆ ಕೆಲಸ ಮಾಡಿ: ಶಾಸಕ ಧೀರಜ್‌ ಮುನಿರಾಜ್‌

ಈ ಕೂಡಲೇ ಸರ್ಕಾರ ಹೊಸ ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು ತಾತ್ಕಾಲಿಕ ಸೇತುವೆ ಸಾಕಷ್ಟುಅಪಾಯಕಾರಿಯಾಗಿದ್ದು, ಕಿರಿದಾದ ಸೇತುವೆಯಿಂದ ವಾಹನ ಸವಾರರು ಭಯದಲ್ಲೇ ವಾಹನ ಸಂಚರಿಸುವಂತಾಗಿದೆ. ಈ ಕೂಡಲೇ ಪ್ರವಾಸೋದ್ಯಮ ಇಲಾಖೆ ಹಾಗೂ ಕಾವೇರಿ ನೀರಾವರಿ ನಿಗಮದಿಂದ ಹೆಚ್ಚುವರಿ ಹಣ ಬಿಡುಗಡೆ ಮಾಡಿಸಿ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸುವ ಮೂಲಕ ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕೆಂದು ಮಂಚನಬೆಲೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ವೀರೇಗೌಡನದೊಡ್ಡಿ ಇಂದ ಮಂಚನಬೆಲೆ ಮುಖ್ಯರಸ್ತೆಯು ಸಾಕಷ್ಟು ಗುಂಡಿಗಳಿಂದ ಕೂಡಿದ್ದು ಕಾಡಿನ ಮಧ್ಯೆ ಹಾದುಹೋಗುವ ಮುಖ್ಯ ರಸ್ತೆಗೆ ಹೊಸದಾಗಿ ಡಾಂಬರು ಹಾಕುವ ಮೂಲಕ ಇಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕು ಸಾಕಷ್ಟು ಗುಂಡಿಗಳಿಂದ ಕೂಡಿದವರಿಂದ ಅಪಘಾತಕ್ಕೆ ಆಹ್ವಾನ ನೀಡುತ್ತಿದ್ದು ರಾತ್ರಿ ವೇಳೆ ಈ ರಸ್ತೆಯಲ್ಲಿ ಸಂಚರಿಸುವುದು ಸಾಕಷ್ಟುಅಪಾಯಕಾರಿಯಾಗಿದ್ದು ಕೂಡಲೇ ಡಾಂಬರು ಹಾಕಿಸುವ ಕೆಲಸಕ್ಕೆ ಮುಂದಾಗ ಬೇಕಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ರಾಜ್ಯದ ಅಭಿವೃದ್ಧಿಯೇ ನಮ್ಮ ಸರ್ಕಾರದ ಗುರಿ: ಸಚಿವ ಜಮೀರ್‌ ಅಹಮ್ಮದ್‌

ಬೆಂಗಳೂರಿಗೆ ಸಂಪಕ: ಮಂಚನಬೆಲೆ ಜಲಾಶಯಕ್ಕೆ ಬೆಂಗಳೂರಿನ ಕೆಂಗೇರಿ ಮೂಲಕ ದೊಡ್ಡ ಆಲದಮರದಿಂದ ಮಂಚನ ಬೆಲೆಗೆ ಸಾಕಷ್ಟುಪ್ರವಾಸಿಗರು ಆಗಮಿಸುತ್ತಿದ್ದು, ಈ ಸೇತುವೆಯು ಮಂಚನಬೆಲೆ ಮತ್ತು ಬೆಂಗಳೂರಿಗೆ ಮುಖ್ಯ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ತಾತ್ಕಾಲಿಕ ಸೇತುವೆ ಮುಳುಗಡೆಯಾದರೆ ಇಲ್ಲಿಗೆ ಬರುವ ಪ್ರವಾಸಿಗರಿಗೆ ಸಾಕಷ್ಟುಸಮಸ್ಯೆ ಉಂಟಾಗಲಿದೆ.

click me!