Shivamogga: ಬೀದಿನಾಯಿಗಳಿಗೆ ಕಡಿವಾಣ ಎಂದು?

By Kannadaprabha NewsFirst Published Dec 3, 2022, 2:18 PM IST
Highlights

ನಗರ ಮಾತ್ರವಲ್ಲ, ಜಿಲ್ಲೆಯಲ್ಲಿ ಕೂಡ ಬೀದಿನಾಯಿಗಳ ಹಾವಳಿ ಮಿತಿಮೀರಿದæ. ಕಳೆದ ಮೂರು ದಿನಗಳಲ್ಲಿ ಶಿವಮೊಗ್ಗ ಮತ್ತು ಭದ್ರಾವತಿ ಪಟ್ಟಣಗಳ ವ್ಯಾಪ್ತಿಯಲ್ಲಿ ಹಲವಾರು ಮಂದಿ ಬೀದಿನಾಯಿಗಳ ಕಡಿತಕ್ಕೆ ಒಳಗಾಗಿದ್ದರೆ. ಭದ್ರಾವತಿಯಲ್ಲಿ ಬಾಲಕಿ ಮೃತಪಟ್ಟಿದ್ದಾಳೆ.

ಶಿವಮೊಗ್ಗ (ಡಿ.3) : ನಗರ ಮಾತ್ರವಲ್ಲ, ಜಿಲ್ಲೆಯಲ್ಲಿ ಕೂಡ ಬೀದಿನಾಯಿಗಳ ಹಾವಳಿ ಮಿತಿಮೀರಿದæ. ಕಳೆದ ಮೂರು ದಿನಗಳಲ್ಲಿ ಶಿವಮೊಗ್ಗ ಮತ್ತು ಭದ್ರಾವತಿ ಪಟ್ಟಣಗಳ ವ್ಯಾಪ್ತಿಯಲ್ಲಿ ಹಲವಾರು ಮಂದಿ ಬೀದಿನಾಯಿಗಳ ಕಡಿತಕ್ಕೆ ಒಳಗಾಗಿದ್ದರೆ. ಭದ್ರಾವತಿಯಲ್ಲಿ ಬಾಲಕಿ ಮೃತಪಟ್ಟಿದ್ದಾಳೆ.

ಭದ್ರಾವತಿ ಸಮೀಪದ ದೊಣಬಘಟ್ಟದಲ್ಲಿ ಮೂರು ದಿನಗಳ ಹಿಂದೆ ಹೊಲವೊಂದರಲ್ಲಿ ಬಾಲಕಿಯೊಬ್ಬಳ ಮೇಲೆ ಬೀದಿನಾಯಿಗಳ ಗುಂಪು ದಾಳಿ ನಡೆಸಿ, ತೀವ್ರವಾಗಿ ಗಾಯಗೊಳಿಸಿದ್ದವು. ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ವಿಫಲವಾಗಿ ಸಾವು ಕಂಡಳು.

ಕಾರವಾರದಲ್ಲಿ ಬೀದಿನಾಯಿಗಳದ್ದೇ ಕಾರುಬಾರು; ರಾತ್ರಿ ಓಡಾಡೋಕೆ ಹೆದರ್ತಾರೆ ಜನ

ಇದರ ಬೆನ್ನಲ್ಲೆ ಗುರುವಾರ ಶಿವಮೊಗ್ಗ ನಗರದ ಹೊರವಲಯದ ಪುರಲೆ ಗ್ರಾಮದಲ್ಲಿ ಮೂವರು ಮಕ್ಕಳು ಬೀದಿನಾಯಿಗಳ ದಾಳಿಯಿಂದ ಗಾಯಗೊಂಡ ಘಟನೆ ನಡೆದಿದೆ. ಪ್ರತೀಕ್ಷ, ಅವಿನಾಶ್‌ ಮತ್ತು ಪಂಕಜ್‌ ಗಾಯಗೊಂಡ ಮಕ್ಕಳಾಗಿದ್ದಾರೆ. ಕೆರೆ ಏರಿಯ ಮೇಲೆ ಹೋಗುತ್ತಿದ್ದ ಮಕ್ಕಳ ಮೇಲೆ ನಾಯಿಗಳು ದಾಳಿ ನಡೆಸಿದ್ದು, ತಕ್ಷಣವೇ ಇವರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಗಿದೆ.

ಆಸ್ಪತ್ರೆಗೆ ನಗರಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಧೀರರಾಜ್‌ ಹೊನ್ನವಿಲೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ನಗರದಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ಮಾತುಗಳನ್ನು ಕೂಡ ಆಡಿದ್ದಾರೆ.

ಗುಂಪಾಗಿ ತಿರುಗುತ್ತಾ ದಾಳಿ ನಡೆಸುವ ಶ್ವಾನಪಡೆ:

ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ. ಯಾವುದೇ ಬಡಾವಣೆಗಳಿಗೆ ಹೋದರೂ ಗುಂಪು ಗುಂಪಾಗಿ ಬೀದಿನಾಯಿಗಳು ತæೂೕಳಗಳಂತæ ತಿರುಗುತ್ತಿವೆ. ಕೆಲವೊಮ್ಮೆ ದ್ವಿಚಕ್ರ ವಾಹನಗಳಿಗೆ ಅಡ್ಡ ಬಂದು ವಾಹನ ಉರುಳಿಬಿದ್ದು ಚಾಲಕನಿಗೆ ಗಾಯವಾದ ಘಟನೆ ನಡೆದು, ಸವಾರರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇನ್ನೊಂದೆಡೆ ಏಕಾಏಕಿ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಸಾರ್ವಜನಿಕರ ಮೇಲೂ ದಾಳಿ ನಡೆಸುತ್ತಿವೆ. ಅದರಲ್ಲಿಯೂ ಮಹಿಳೆಯರು ಮತ್ತು ಮಕ್ಕಳನ್ನು ಕಂಡರೆ ಈ ನಾಯಿಗಳ ಆರ್ಭಟ ಹೆಚ್ಚಾಗುತ್ತದೆ. ಸ್ವಲ್ಪವೂ ಹೆದರದæೕ ದಾಳಿ ನಡೆಸುತ್ತದೆ. ವೃದ್ಧರೂ ನಾಯಿ ದಾಳಿಯ ದೊಡ್ಡ ಸಂತ್ರಸ್ಥರು. ಕೆಲವು ಬಡಾವಣೆಗಳಲ್ಲಿ ಮಕ್ಕಳು ಮತ್ತು ವೃದ್ಧರು ಮನೆಯಿಂದ ಹೊರಬರಲು ಹೆದರುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ.

10 ತಿಂಗಳಲ್ಲಿ 16 ಸಾವಿರ ಜನರಿಗೆ ಕಡಿತ

ಜಿಲ್ಲೆಯಲ್ಲಿ ಕಳೆದ 10 ತಿಂಗಳಲ್ಲಿ ಸುಮಾರು 16 ಸಾವಿರ ಜನ ಬೀದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ ಅತಿ ಹೆಚ್ಚು ಎಂದರೆ 4145 ಜನರಿಗೆ ನಾಯಿ ಕಚ್ಚಿದ್ದರೆ,ಸೊರಬದಲ್ಲಿ 1256 ಮಂದಿ ಬೀದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಭದ್ರಾವತಿಯಲ್ಲಿ 3009, ಸಾಗರದಲ್ಲಿ 2595 ಮತ್ತು ಶಿಕಾರಿಪುರದಲ್ಲಿ 1736 ಜನ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಪ್ರತಿ ದಿನ ನಗರಪಾಲಿಕೆಗೆ ಕನಿಷ್ಟ10 ದೂರುಗಳು ಬರುತ್ತಿವೆ.

ಬೀದಿ ನಾಯಿಗಳ ನಿಯಂತ್ರಣದಲ್ಲಿ ಪಾಲಿಕೆ ವಿಫಲವಾಗಿದೆ. ಇದಕ್ಕಾಗಿ ಆರೋಗ್ಯ ಇಲಾಖೆ, ಪಶು ಸಂಗೋಪನಾ ಇಲಾಖೆಯ ಜೊತೆ ಸೇರಿಕೊಂಡು ನಗರಪಾಲಿಕೆಯ ಆರೋಗ್ಯ ಇಲಾಖೆ ನಿಯಂತ್ರಣಕ್ಕೆ ಯೋಜನೆ ರೂಪಿಸುತ್ತಿದೆ. ಆದರೆ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ಇದಕ್ಕಾಗಿ 2022-23 ರಲ್ಲಿ 20 ಲಕ್ಷ ನಿಗದಿಪಡಿಸಲಾಗಿದೆ. ಆದರೆ ಕಳೆದ ಐದು ವರ್ಷದಲ್ಲಿ ಕೇವಲ 2850 ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾತ್ರ ಆಗಿದೆ. ಅಂದರೆ ಪ್ರತಿ ನಾಯಿಗೆ 1227 ರು. ವ್ಯಯಿಸಲಾಗುತ್ತಿದೆ. ಮೀಸಲು ಇಟ್ಟಿರುವ ಹಣ ಸಾಲದೋ ಅಥವಾ ಅನುಷ್ಠಾನಗೊಳಿಸುವ ಇಚ್ಛಾಶಕ್ತಿಯ ಕೊರತೆಯೋ ಗೊತ್ತಾಗುತ್ತಿಲ್ಲ.

ಪಾಲಿಕೆ ವ್ಯಾಪ್ತಿಯಲ್ಲಿ 10 ಸಾವಿರ ಬೀದಿನಾಯಿ

ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಸರಿಯಾಗಿ ಮಾಡದೆ ಇರುವುದರಿಂದ ಬೀದಿ ನಾಯಿಗಳ ಸಂಖ್ಯೆ ಪ್ರತಿ ವರ್ಷ ಐದರಿಂದ ಹತ್ತರಷ್ಟುವೃದ್ದಿಸುತ್ತಿದೆ. ನಗರಪಾಲಿಕೆ ವ್ಯಾಪ್ತಿಯಲ್ಲಿ ಸರಿ ಸುಮಾರು 8-10 ಸಾವಿರ ಬೀದಿ ನಾಯಿಗಳು ಇರಬಹುದೆಂದು ಪಾಲಿಕೆ ಅಧಿಕಾರಿಗಳು ಲೆಕ್ಕಾಚಾರ ಹಾಕಿದ್ದಾರೆ. ಪ್ರತಿ ನಾಯಿ ಸರಾಸರಿ 4-5 ಮರಿಗಳನ್ನು ವರ್ಷಕ್ಕೆ ಎರಡು ಬಾರಿ ಹಾಕಿದರೆ ಇವುಗಳ ಸಂಖ್ಯೆ ಯಾವ ಮಟ್ಟಕ್ಕೆ ಹೋಗ ಬಹುದು ಎಂಬುದು ಸಾರ್ವಜನಿಕರ ಪ್ರಶ್ನೆ. ಈ ವರ್ಷ ಕೇವಲ 2850 ನಾಯಿಗಳಿಗೆ ಮಾತ್ರ ಸಂತಾನ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದರೆ ವ್ಯವಸ್ಥೆಯ ಬೇಜವಾಬ್ದಾರಿ ಹೇಗಿದೆ ಎಂದು ಅರ್ಥವಾಗುತ್ತದೆ.

ಬೀದಿನಾಯಿ ದಾಳಿ ಮಾಡಿದರೆ ಆಹಾರ ನೀಡುವವರೇ ಹೊಣೆ: ಸುಪ್ರೀಂಕೋರ್ಟ್‌

ಇವುಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಇವುಗಳಿಗೆ ಸಮರ್ಪಕ ರೀತಿಯಲ್ಲಿ ಆಹಾರ ಸಿಗುತ್ತಿಲ್ಲ. ಆಹಾರ ಸಿಗದ ಕಾರಣ ವ್ಯಗ್ರಗೊಂಡು ಮನೆಯೊಳಗೆ ನುಗ್ಗುವುದು, ದಾಳಿ ಮಾಡುವುದು ನಡೆಯುತ್ತಿವೆ. ಈಗಲಾದರೂ ಪಾಲಿಕೆ ಮತ್ತು ಆಯಾ ತಾಲೂಕು ಮತ್ತು ಸ್ಥಳೀಯ ಆಡಳಿತ ಎಚ್ಚರಗೊಂಡು ಸಮರೋಪಾದಿಯಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಮುಂದಾಗಬೇಕು. ಆಗ ಮಾತ್ರ ಯಶಸ್ಸು ಸಾಧ್ಯ. ಇಲ್ಲದಿದ್ದರೆ ಶಿವಮೊಗ್ಗ ನಗರ ಮತ್ತು ಜಿಲ್ಲೆ ಶಂಕಿತ ಭಯೋತ್ಪಾದಕರ ಅಡಗು ತಾಣ ಮಾತ್ರವಲ್ಲ, ಕ್ರೂರಿ ಬೀದಿ ನಾಯಿಗಳ ಅಡಕು ತಾಣ, ಎಚ್ಚರಿಕೆ ಎಂಬ ಹಣೆಪಟ್ಟಿಕೂಡ ಬಾರದೆ ಇರಲಾರದು.

click me!