ಉಡುಪಿ: ಅಪಘಾತದಲ್ಲಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ರೂ ಸಹಾಯಕ್ಕೆ ಬಾರದ ಜನ..!

By Girish Goudar  |  First Published Dec 3, 2022, 2:00 PM IST

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಾಯಾಳನ್ನು ಕೊಂಡೊಯ್ಯವಂತೆ ಇಬ್ಬರು ಗೆಳೆಯರು ಗೋಗರೆದರೂ ದೂರವೇ ನಿಂತು ಎಲ್ಲವನ್ನು ಮೌನವಾಗಿ ನೋಡುತ್ತಿದ್ದ ಉಡುಪಿ ಜನ.  


ಉಡುಪಿ(ಡಿ.03):  ಅಪಘಾತ ಸಂಭವಿಸಿದಾಗ ಗಾಯಾಳುಗಳನ್ನ ಆಸ್ಪತ್ರೆಗೆ ಸಾಗಿಸಿ ಪ್ರಾಣ ಉಳಿಸಿದ ಸಾಕಷ್ಟು ಘಟನೆಗಳನ್ನ ಕೇಳಿದ್ದೀವಿ, ನೋಡಿದ್ದೇವೆ. ಆದರೆ, ಇಲ್ಲಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಯಾರೂ ಕೂಡ ಹತ್ತಿರ ಬಾರದ ಕರುಳು ಹಿಂಡುವ ಘಟನೆ ಉಡುಪಿಯ ಕಟಪಾಡಿಯಲ್ಲಿ ನಿನ್ನೆ(ಶುಕ್ರವಾರ) ನಡೆದಿದೆ. 

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಾಯಾಳನ್ನು ಕೊಂಡೊಯ್ಯವಂತೆ ಇಬ್ಬರು ಗೆಳೆಯರು ಗೋಗರೆದರೂ ಜನರು ಮಾತ್ರ ದೂರವೇ ನಿಂತು ಎಲ್ಲವನ್ನು ಮೌನವಾಗಿ ನೋಡುತ್ತಿದ್ದರು. 

Tap to resize

Latest Videos

undefined

ರೈಲು ಹತ್ತುವ ವೇಳೆ ದುರಂತ: ಗಾಲಿಗೆ ಸಿಲುಕಿ ಪ್ರಯಾಣಿಕ ಸಾವು

ರಿಕ್ಷಾ ಆದ್ರೂ ಕರೆ ತನ್ನಿ ಅಂದ್ರೂ, ಸಾರ್ವಜನಿಕರು ಮಾತ್ರ ಇದಕ್ಕೂ ತಮಗೂ ಸಂಬಂಧವಿಲ್ಲವೇನೋ ಎಂಬಂತೆ ನಿಂತಿದ್ದರು. ಸ್ಥಳದಲ್ಲೇ ಪೊಲೀಸರು ಇದ್ರೂ ಇವರೂ ಕೂಡ ಸಹಾಯಕ್ಕೆ ಬಂದಿಲ್ವಂತೆ. ಕೊನೆಗೆ ಕಾಡಿ ಬೇಡಿ ಗೆಳೆಯರು ಆಟೋದಲ್ಲಿ ಗೆಳೆಯನನ್ನು ಕೊಂಡೊಯ್ದಿದ್ದಾರೆ. ಗಾಯಾಳು ಗೆಳೆಯನನ್ನು ಹಿಡಿದು ಆಕ್ರಂದಿಸುವ ಗೆಳೆಯರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
 

click me!