'ಸಿದ್ದು ಸಿಎಂ ಆದಾಗ ಉತ್ತರ ಕರ್ನಾಟಕದ ಕುರಿಗಳೆಲ್ಲಾ ಬ್ಯಾ ಅಂತ ಕುಣಿದವು'..!

By Kannadaprabha News  |  First Published Nov 20, 2019, 10:48 AM IST

ಪಕ್ಷ ಬಿಟ್ಟಿದ್ದು, ನಾನಲ್ಲ, ಸಿದ್ದರಾಮಯ್ಯ ಪಕ್ಷ ಬಿಡಿಸಿದ್ದು. ಕಾಂಗ್ರೆಸ್‌ ಪಕ್ಷ ನಿಮ್ಮ ಸಿದ್ದರಾಮಯ್ಯನದು ಅಲ್ವೇನಪ್ಪ? ಸಿದ್ದರಾಮಯ್ಯ ಸಿಎಂ ಆದಾಗ ಉತ್ತರ ಕರ್ನಾಟಕದ ಕುರಿಗಳೆಲ್ಲಾ ಬ್ಯಾ ಅಂತ ಕುಣಿದವು ಎಂದು ಹುಣಸೂರು ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎಚ್‌. ವಿಶ್ವನಾಥ್‌ ವ್ಯಂಗ್ಯ ಮಾಡಿದ್ದಾರೆ.


ಮೈಸೂರು(ನ.20): ಮಾಜಿ ಸಚಿವ, ಹುಣಸೂರು ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎಚ್‌. ವಿಶ್ವನಾಥ್‌ ಹಾಗೂ ಮಾಜಿ ಸಂಸದ ಧ್ರುವನಾರಾಯಣ್‌ ಅವರು ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಮಂಗಳವಾರ ಶಾಸಕ ತನ್ವೀರ್‌ ಸೇಠ್‌ ನೋಡಲು ಬಂದಾಗ ಆಕಸ್ಮಿಕವಾಗಿ ಭೇಟಿಯಾಗಿ, ಉಭಯ ಕುಶಲೋಪರಿ ವಿಚಾರಿಸಿಕೊಂಡರು.

ಈ ವೇಳೆ ಧ್ರುವನಾರಾಯಣ್‌ ಅವರು, ನಾನು ನಿಮಗೆ ಕಾಂಗ್ರೆಸ್‌ ಪಕ್ಷ ಬಿಡದಂತೆ ಮನವಿ ಮಾಡಿದ್ದೆ. ಆದರೆ, ನೀವು ಪಕ್ಷ ಬಿಟ್ಟು ಹೋದಿರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಎಚ್‌. ವಿಶ್ವನಾಥ್‌ ಅವರು, ಯಾರಪ್ಪ ಪಕ್ಷ ಬಿಟ್ಟಿದ್ದು, ನಾನಲ್ಲ, ಸಿದ್ದರಾಮಯ್ಯ ಪಕ್ಷ ಬಿಡಿಸಿದ್ದು ಎಂದಿದ್ದಾರೆ.

Tap to resize

Latest Videos

ಹುಣಸೂರು: ಉಪಸಮರದ ತ್ರಿಕೋನ ಸ್ಪರ್ಧೆಗೆ ವೇದಿಕೆ ಸಜ್ಜು

 ಕಾಂಗ್ರೆಸ್‌ ಪಕ್ಷ ನಿಮ್ಮ ಸಿದ್ದರಾಮಯ್ಯನದು ಅಲ್ವೇನಪ್ಪ? ಸಿದ್ದರಾಮಯ್ಯ ಸಿಎಂ ಆದಾಗ ಉತ್ತರ ಕರ್ನಾಟಕದ ಕುರಿಗಳೆಲ್ಲಾ ಬ್ಯಾ ಅಂತ ಕುಣಿದವು ಎಂದು ವ್ಯಂಗ್ಯವಾಡಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಧ್ರುವನಾರಾಯಣ್‌ ಅವರು, ನನಗೆ ಸಂತೋಷವಾಗಿದೆ, ನೀವು ಕಾಂಗ್ರೆಸ್‌ಗೆ ಧನ್ಯವಾದ ಅಂದ್ರಿ ಎಂದು ನಗೆ ಚಟಾಕಿ ಹಾರಿಸಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ನಂದಿ ಪ್ರತಿಮೆಗೆ ಅದ್ಧೂರಿ ಮಹಾಭಿಷೇಕ

click me!