ಕಳೆದು ಹೋದ ಮೊಬೈಲ್‌ ಫೋನ್‌ ಪತ್ತೆಗೆ ಪೊಲೀಸರಿಂದ ವಾಟ್ಸ್‌ಅಪ್‌ ನಂಬರ್‌ ಪ್ರಾರಂಭ

By Kannadaprabha News  |  First Published Apr 19, 2023, 7:33 AM IST

ಕಳೆದು ಹೋದ ಮೊಬೈಲ್‌ ಫೋನ್‌ಗಳನ್ನು ಪತ್ತೆ ಮಾಡಲು ಹಾಗೂ ಅವುಗಳ ದುರ್ಬಳಕೆ ತಡೆಯಲು ಮೈಸೂರು ನಗರ ಪೊಲೀಸ್‌ ಕಮೀಷನರೇಟ್‌ ವತಿಯಿಂದ ನೂತನ ಇ- ಪೋರ್ಟಲ್‌ ವ್ಯವಸ್ಥೆ ಜಾರಿಗೆ ತರಲಾಗಿದೆ. ಈ ನೂತನ ವ್ಯವಸ್ಥೆಗಾಗಿ ನಗರ ಪೊಲೀಸ್‌ ವತಿಯಿಂದ ಹೊಸದಾಗಿ ವಾಟ್ಸ್‌ಅಪ್‌ ಮೊಬೈಲ್‌ ನಂಬರ್‌ 63632-55135 ಆರಂಭಿಸಲಾಗಿದೆ.


 ಮೈಸೂರು :  ಕಳೆದು ಹೋದ ಮೊಬೈಲ್‌ ಫೋನ್‌ಗಳನ್ನು ಪತ್ತೆ ಮಾಡಲು ಹಾಗೂ ಅವುಗಳ ದುರ್ಬಳಕೆ ತಡೆಯಲು ಮೈಸೂರು ನಗರ ಪೊಲೀಸ್‌ ಕಮೀಷನರೇಟ್‌ ವತಿಯಿಂದ ನೂತನ ಇ- ಪೋರ್ಟಲ್‌ ವ್ಯವಸ್ಥೆ ಜಾರಿಗೆ ತರಲಾಗಿದೆ. ಈ ನೂತನ ವ್ಯವಸ್ಥೆಗಾಗಿ ನಗರ ಪೊಲೀಸ್‌ ವತಿಯಿಂದ ಹೊಸದಾಗಿ ವಾಟ್ಸ್‌ಅಪ್‌ ಮೊಬೈಲ್‌ ನಂಬರ್‌ 63632-55135 ಆರಂಭಿಸಲಾಗಿದೆ.

ನಗರಆಯುಕ್ತರ ಕಚೇರಿಯಲ್ಲಿ ಈ ನೂತನ ತಂತ್ರಜ್ಞಾನದ ವ್ಯವಸ್ಥೆಯನ್ನು ಅನುಕೂಲಕ್ಕಾಗಿ ಡಿಜಿಪಿ ಪ್ರವೀಣ್‌ ಸೂದ್‌ ಅವರು ಮಂಗಳವಾರ ಚಾಲನೆ ನೀಡಿದರು.

Tap to resize

Latest Videos

ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್‌ ಫೋನ್‌ ಕಳೆದುಕೊಂಡಲ್ಲಿ ಈ ಕೆಳಕಂಡಂತೆ ಕ್ರಮ ವಹಿಸಲು ತಿಳಿಸಿದೆ. ಮೊಬೈಲ್‌ ಫೋನ್‌ ಕಳೆದು ಹೋದಲ್ಲಿ ಕೂಡಲೇ ವಾಟ್ಸ್‌ಅಪ್‌ ಮೊಬೈಲ್‌ ನಂಬರ್‌ 63632-55135 ಹೈ ಎಂದು ಸಂದೇಶ ಕಳುಹಿಸುವುದು. ಸಂದೇಶ ಕಳುಹಿಸಿದ ಮೊಬೈಲ್‌ ನಂಬರ್‌ಗೆ ಒಂದು ಇ-ಪೋರ್ಟಲ್‌ ಲಿಂಕ್‌ನ ಸಂದೇಶ ಬರುತ್ತದೆ. ಈ ಲಿಂಕ್‌ ಮೂಲಕ ತೆರೆದುಕೊಳ್ಳುವ ಇ-ಪೋರ್ಟಲ್‌ನಲ್ಲಿ ಕೇಳಲಾಗಿರುವ ಎಲ್ಲಾ ಅವಶ್ಯಕ ಮಾಹಿತಿಗಳನ್ನು ಸಾರ್ವಜನಿಕರು ಭರ್ತಿ ಮಾಡಿ ಸಬ್‌ಮಿಟ್‌ ಮಾಡುವುದು. ನಂತರ ಕಳೆದು ಹೋದ ಮೊಬೈಲ್‌ ಫೋನ್‌ ಪತ್ತೆಗೆ ನಗರ ಪೊಲೀಸ್‌ ವತಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ವಿವರಿಸಿದರು.

ಸಾರ್ವಜನಿಕರ ಅನುಕೂಲಕ್ಕಾಗಿ ನಗರ ಪೊಲೀಸ್‌ ವತಿಯಿಂದ ಮೇಲ್ಕಂಡಂತೆ ಹೊಸ ವಾಟ್ಸ್‌ಅಪ್‌ ವ್ಯವಸ್ಥೆಯನ್ನು ಪ್ರಾರಂಭಿಸಿದ್ದು, ನಗರ ವ್ಯಾಪ್ತಿಯಲ್ಲಿ ಮೊಬೈಲ್‌ ಕಳೆದುಕೊಂಡ ಸಾರ್ವಜನಿಕರು ಈ ನೂತನ ವ್ಯವಸ್ಥೆಯ ಉಪಯೋಗವನ್ನು ಪಡೆದುಕೊಳ್ಳುವಂತೆ ಅವರು ಕೋರಿದರು.

ಈ ವೇಳೆ ದಕ್ಷಿಣ ವಲಯದ ಐಜಿಪಿ ಪ್ರವೀಣ್‌ ಮಧುಕರ್‌ ಪವಾರ್‌, ಡಿಸಿಪಿಗಳಾದ ಎಂ. ಮುತ್ತುರಾಜು, ಎಸ್‌. ಜಾಹ್ನವಿ, ಮೈಸೂರು ಎಸ್ಪಿ ಸೀಮಾ ಲಾಟ್ಕರ್‌ ಸೇರಿದಂತೆ ದಕ್ಷಿಣ ವಲಯದ ಜಿಲ್ಲೆಗಳ ಎಸ್ಪಿಗಳು ಹಾಗೂ ಇತರೆ ಪೊಲೀಸ್‌ ಅಧಿಕಾರಿಗಳು ಇದ್ದರು.

ಪೊಲೀಸ್ ಇಲಾಖೆ ದಿನದ 24 ಗಂಟೆ ಶ್ರಮಿಸುತ್ತಿದೆ

  ಹಾಸನ: ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದವರ, ಬಡವರ, ದೀನದಲಿತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ದಿನದ 24 ಗಂಟೆಗಳ ಕಾಲ ಶ್ರಮಿಸುತ್ತಿದೆ ಎಂದು ಗ್ರಾಮಾಂತರ ಪೊಲೀಸ್‌ ಠಾಣೆ ನಿವೃತ್ತ ಪೊಲೀಸ್‌ ಉಪನಿರೀಕ್ಷಕರಾದ ಎಚ್‌. ಪುಟ್ಟರಾಜಯ್ಯ ತಿಳಿಸಿದರು.

ನಗರದ ಡಿ.ಎ.ಆರ್‌. ಜಿಲ್ಲಾ ಕವಾಯತು ಮೈದಾನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಪೊಲೀಸ್‌ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಪೊಲೀಸ್‌ ಇಲಾಖೆಯಲ್ಲಿ ಸುಧಿ​ೕರ್ಘ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ಸಣ್ಣಪುಟ್ಟವಿಚಾರಣೆ ಬಿಟ್ಟರೇ ಯಾವುದೇ ತೊಂದರೆಗಳಿಗೆ ಒಳಗಾಗದೇ ಕರ್ತವ್ಯ ನಿರ್ವಹಿಸಲಾಗಿದೆ. 1984ನೇ ಇಸವಿಯಲ್ಲಿ ಕರ್ನಾಟಕ ಪೊಲೀಸ್‌ ಸೇವೆಗೆ ಕಾನ್ಸ್‌ ಟೇಬಲ್‌ ಆಗಿ ನನ್ನ ಮೊದಲ ವೃತ್ತಿ ಆರಂಭಿಸಿದೆನು. ಹಾಸನ ಜಿಲ್ಲೆಯ ನಾನಾ ತಾಲೂಕುಗಳಲ್ಲಿ ಕರ್ತವ್ಯ ನಿರ್ವಹಿಸಿ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿಯಲ್ಲಿ ಪಿಸಿಯಿಂದ ಇಡಿದು ಪಿಎಸ್‌ಐ. ವರೆಗೂ ಒಂದೆ ಠಾಣೆಯಲ್ಲಿ ಸತತವಾಗಿ 18 ವರ್ಷಗಳ ಕಾಲ ಕೆಲಸ ನಿರ್ವಹಿಸಿರುವುದು ಹೆಮ್ಮೆಯ ವಿಚಾರ ಎಂದರು.

ಕರ್ತವ್ಯದ ವೇಳೆ ಅನೇಕ ಕಷ್ಟಸುಖಗಳು ಬಂದರೂ ಎಲ್ಲವನ್ನು ನಿಭಾಯಿಸಿ ಈಗ ನಿವೃತ್ತಿ ಹೊಂದಿರುವುದು ಸಂತೋಷವಾಗಿದೆ. ಪೊಲೀಸ್‌ ಇಲಾಖೆ ಎಂದರೇ ಮುಖ್ಯವಾದ ಅಂಗವಾಗಿದ್ದು, ಎಲ್ಲಾ ಇಲಾಖೆಗಿಂತಲೂ ಅಗ್ರಸ್ಥಾನದಲ್ಲಿ ಪೊಲೀಸ್‌ ಇಲಾಖೆ ಇದೆ. ಪ್ರತಿ ಇಲಾಖೆಗೂ ನಾವು ಗಮನಕೊಟ್ಟು ದಿನದ 24 ಗಂಟೆಗಳ ಕಾಲ ಮುಂಚೂಣಿಯಲ್ಲಿರಬೇಕು. ನೊಂದ ಬಡವರ, ದೀನದಲಿತರ, ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಕಷ್ಟಕಾರ್ಪಣ್ಯಗಳಿಗೆ ಹೆಗಲಾಗಿ ನಿಂತು ಸಾಮಾಜಿಕ ನ್ಯಾಯ, ಸಂವಿಧಾನಿಕ ಬದ್ಧವಾದ ನ್ಯಾಯವನ್ನು ಕೊಡಿಸುವ ನಿಟ್ಟಿನಲ್ಲಿ ಇನ್ನು ಕೂಡ ಪೊಲೀಸ್‌ ಇಲಾಖೆ ಶ್ರಮಿಸುತ್ತಿದೆ ಎಂದು ಹೇಳಿದರು.

ಹಿಂದಿನ ದಿನಗಳಲ್ಲಿ ಅಷ್ಟೊಂದು ಸವಲತ್ತುಗಳು ಪೊಲೀಸ್‌ ಇಲಾಖೆಗೆ ಇರಲಿಲ್ಲ. ಇತ್ತಿಚಿನ ದಿನಗಳಲ್ಲಿ ಹೆಚ್ಚಿನ ಸವಲತ್ತುಗಳು ಸಿಗುತ್ತಿದೆ. ಪೊಲೀಸ್‌ ಎಂದ್ರೆ ನಾಗರೀಕ ಪೊಲೀಸರಾಗಿ ಸಾರ್ವಜನಿಕರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮಾಹಿತಿಯನ್ನು ಸಂಗ್ರಹಿಸಿ ಪೊಲೀಸ್‌ ಇಲಾಖೆಯಿಂದ ಭದ್ರತೆ ಕೊಡುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವುದು. ಇಲಾಖೆಯಲ್ಲಿರುವ ಎಲ್ಲರೂ ಸರಕಾರದ ಸೇವೆಯನ್ನು ನಿಷ್ಠೆಯಿಂದ ಮಾಡಬೇಕು. 112 ಪೊಲೀಸ್‌ ಸೇವೆ ಸಾರ್ವಜನಿಕರಿಗೆ ಉತ್ತಮವಾಗಿದೆ. ಪೊಲೀಸ್‌ ಧ್ವಜಾ ದಿನಾಚರಣೆಯಲ್ಲಿ ಧ್ವಜವನ್ನು ಸಾರ್ವಜನಿಕವಾಗಿ ಮಾರಾಟ ಮಾಡಿ ಬಂದಂತಹ ಹಣವನ್ನು ರಾಜ್ಯ ಪೊಲೀಸ್‌ ಮತ್ತು ಜಿಲ್ಲಾ ಪೊಲೀಸ್‌ ಕಲ್ಯಾಣ ನಿ​ಧಿಗೆ ವಿನಿಯೋಗಿಸಲಾಗುವುದು. ಇದರಿಂದ ಪೊಲೀಸ್‌ ಕರ್ತವ್ಯ ನಿರ್ವಹಿಸುವ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.

click me!