ಕಲ್ಪತರು ಜಿಲ್ಲೆಯಲ್ಲಿ ಪಕ್ಷೇತರರದ್ದೇ ಪಾರುಪತ್ಯ!

By Kannadaprabha News  |  First Published Apr 19, 2023, 7:12 AM IST

ಚುನಾವಣಾ ರಾಜಕಾರಣ ಆರಂಭವಾದ ಬಳಿಕ ತುಮಕೂರು ಜಿಲ್ಲೆಯಲ್ಲಿ 13 ಮಂದಿ ಪಕ್ಷೇತರರು ಆಯ್ಕೆಯಾಗಿದ್ದಾರೆ.


ಉಗಮ ಶ್ರೀನಿವಾಸ್‌

 ತುಮಕೂರು :  ಚುನಾವಣಾ ರಾಜಕಾರಣ ಆರಂಭವಾದ ಬಳಿಕ ತುಮಕೂರು ಜಿಲ್ಲೆಯಲ್ಲಿ 13 ಮಂದಿ ಪಕ್ಷೇತರರು ಆಯ್ಕೆಯಾಗಿದ್ದಾರೆ.

Tap to resize

Latest Videos

1952ರಲ್ಲಿ ನಡೆದ ಮೊದಲ ಯಲ್ಲಿ ಮಧುಗಿರಿ ದ್ವಿಸದಸ್ಯ ಕ್ಷೇತ್ರದಿಂದ ಸಿ.ಜೆ. ಮುಕ್ಕಣ್ಣಪ್ಪ ಅವರು ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಆ ಚುನಾವಣೆಯಲ್ಲಿ ಮುಕ್ಕಣ್ಣಪ್ಪ ಅವರು 10257 ಮತಗಳನ್ನು ಪಡೆದು ಸಮಾಜವಾದಿ ಪಕ್ಷದ ಕೆ. ಭೀಮಯ್ಯ ಅವರನ್ನು ಪರಾಭವಗೊಳಿಸಿದರು. ಭೀಮಯ್ಯ ಅವರು 8163 ಮತಗಳನ್ನು ಪಡೆದಿದ್ದರು.

ಅದೇ ವರ್ಷ ಶಿರಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಬಿ.ಎನ್‌. ರಾಮೇಗೌಡ ಅವರು ಗೆಲುವು ಸಾಧಿಸುವ ಮೂಲಕ ಇತಿಹಾಸ ಬರೆದಿದ್ದರು. ಅಂದು ನಡೆದ ಚುನಾವಣೆಯಲ್ಲಿ ರಾಮೇಗೌಡರು 11387 ಮತಗಳನ್ನು ಪಡೆದಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ತಾರೇಗೌಡ ಅವರನ್ನು 10401 ಮತ ಪಡೆದು ಪರಾಭವಗೊಂಡಿದ್ದರು.

1957ರಲ್ಲಿ ಶಿರಾ ದ್ವಿಸದಸ್ಯ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ದೇವಣಂ ಸತ್ಯನಾರಾಯಣ ಅವರು 7022 ಮತ ಪಡೆದು ಗೆಲುವು ಸಾಧಿಸಿದ್ದರು. ಬಿಜೆಎಸ್‌ ಪಕ್ಷದ ಎಂ. ಚಂದ್ರಶೇಖರಯ್ಯ ಅವರು 6926 ಮತ ಪಡೆದು ಸೋಲನ್ನು ಅನುಭವಿಸಿದ್ದರು. ಅದೇ ವರ್ಷ ಗುಬ್ಬಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿ.ಜೆ. ಮುಕ್ಕಣ್ಣಪ್ಪ ಅವರು 8621 ಮತ ಪಡೆದು ಗೆಲುವು ಸಾಧಿಸಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಗಟ್ಟಿರೇವಣ್ಣ 6972 ಮತ ಪಡೆದು ಸೋಲನ್ನು ಅನುಭವಿಸಿದ್ದರು.

1962ರಲ್ಲಿ ಶಿರಾದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸಿ.ಜೆ. ಮುಕ್ಕಣ್ಣಪ್ಪ 21746 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮಾಲಿ ಮರಿಯಪ್ಪ ಅವರು 18002 ಮತಗಳನ್ನು ಪಡೆದಿದ್ದರು. ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ವಿ.ಎಂ.ಡಿಯೋ 10420 ಮತ ಪಡೆದು ಹೆಲುವು ಸಾಧಿಸಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಆರಾಧ್ಯ 9896 ಮತ ಪಡೆದು ಸೋತಿದ್ದರು. ಅದೇ ವರ್ಷ ಕುಣಿಗಲ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಅಂದಾನಯ್ಯ ಅವರು ಆಯ್ಕೆಯಾಗಿದ್ದರು. ಆ ಚುನಾವಣೆಯಲ್ಲಿ ಅವರು 17410 ಮತಗಳನ್ನು ಪಡೆದಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಟಿ.ಎನ್‌. ಮೂಡ್ಲಗಿರಿಗೌಡ ಅವರು 9165 ಮತ ಪಡೆದು ಪರಾಭವಗೊಂಡಿದ್ದರು.

1967ರಲ್ಲಿ ನಡೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಹುಲಿಯೂರುದುರ್ಗ ವಿಧಾನಸಭಾ ಕ್ಷೇತ್ರದಿಂದ ಹುಚ್ಚಮಾಸ್ತಿಗೌಡ ಅವರು ಆಯ್ಕೆಯಾಗಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಡಿ.ಟಿ. ಮಾಯಣ್ಣ 15050 ಮತ ಪಡೆದು ಪರಾಭವಗೊಂಡಿದ್ದರು. 1983ರಲ್ಲಿ ನಡೆದ ಚುನಾವಣೆಯಲ್ಲಿ ಪಾವಗಡ ಮೀಸಲು ಕ್ಷೇತ್ರದಿಂದ ಉಗ್ರನರಸಿಂಹಪ್ಪ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಆ ಚುನಾವಣೆಯಲ್ಲಿ ಅವರು 42274 ಮತಗಳನ್ನು ಪಡೆದಿದ್ದರು. ಅವರ ಎದುರಾಳಿ 25 ಸಾವಿರದ 285 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದ್ದರು. ಅದೇ ವರ್ಷ ನಡೆದ ಚುನಾವಣೆಯಲ್ಲಿ ಹುಲಿಯೂರುದುರ್ಗದಿಂದ ಹುಚ್ಚಮಾಸ್ತಿಗೌಡ ಸ್ವತಂತ್ರ ಅಭ್ಯರ್ಥಿಯಾಗಿ 21342 ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಬೋರೇಗೌಡ 16671 ಮತಗಳನ್ನು ಪಡೆದು ಪರಾಭವಗೊಂಡಿದ್ದರು.

1989ರಲ್ಲಿ ನಡೆದ ಚುನಾವಣೆಯಲ್ಲಿ ಕಳ್ಳಂಬೆಳ್ಳ ಕ್ಷೇತ್ರದಿಂದ ಟಿ.ಬಿ. ಜಯಚಂದ್ರ ಅವರು ಸ್ವತಂತ್ರ ಅಭ್ಯರ್ಥಿಯಾಗಿ 37844 ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಅವರ ಎದುರಾಳಿಯಾಗಿದ್ದ ಬಿ. ಗಂಗಣ್ಣ ಅವರು 14 ಸಾವಿರದ 89 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದ್ದರು. 2004ರಲ್ಲಿ ನಡೆದ ಚುನಾವಣೆಯಲ್ಲಿ ಗುಬ್ಬಿ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಎಸ್‌.ಆರ್‌. ಶ್ರೀನಿವಾಸ್‌ ಅವರು 40 ಸಾವಿರದ 431 ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಶಿವನಂಜಪ್ಪ ಅವರು 28ಸಾವಿರದ 854 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದ್ದರು. 2008ರಲ್ಲಿ ನಡೆದ ಚುನಾವಣೆಯಲ್ಲಿ ಪಾವಗಡ ಮೀಸಲು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೆಂಕಟರಮಣಪ್ಪ ಅವರು 43 ಸಾವಿರದ 562 ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಜೆಡಿಎಸ್‌ನ ತಿಮ್ಮರಾಯಪ್ಪ 30 ಸಾವಿರದ 515 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದ್ದರು.

ಗೆಲುವು ಸಾಧಿಸಿದ ಪಕ್ಷೇತರರು

1952ರಲ್ಲಿ ಮುಕ್ಕಣ್ಣಪ್ಪ, ರಾಮೇಗೌಡ ಆಯ್ಕೆ

1957ರಲ್ಲಿ ಮುಕ್ಕಣ್ಣಪ್ಪ, ದೇವಣಂ ಸತ್ಯನಾರಾಯಣ

1962ರಲ್ಲಿ ಮುಕ್ಕಣ್ಣಪ್ಪ, ವಿ.ಎಂ.ಡಿಯೋ, ಅಂದಾನಯ್ಯ

1967ರಲ್ಲಿ ಹುಲಿಯೂರುದುರ್ಗದಿಂದ ಹುಚ್ಚಮಾಸ್ತಿಗೌಡ

1983ರಲ್ಲಿ ಉಗ್ರನರಸಿಂಹಪ್ಪ, ಮೂಡ್ಲೇಗೌಡ ಜಯಭೇರಿ

2004ರಲ್ಲಿ ಗುಬ್ಬಿಯಿಂದ ಎಸ್‌.ಆರ್‌. ಶ್ರೀನಿವಾಸ್‌

2008ರಲ್ಲಿ ಪಾವಗಡದಿಂದ ವೆಂಕಟರಮಣಪ್ಪ ಆಯ್ಕೆ

click me!