ಉದಯನಿಧಿ ಸ್ಟಾಲಿನ್‌ ಹೇಳಿಕೆಯಲ್ಲಿ ತಪ್ಪೇನಿದೆ: ನಟ ಪ್ರಕಾಶ್‌ ರೈ

By Kannadaprabha News  |  First Published Sep 11, 2023, 4:27 AM IST

ಎಲ್ಲಾ ಧರ್ಮಗಳಲ್ಲೂ ವಿಕೃತಿ ಇದೆ. ಅದು ಸರಿಹೋಗಲೇ ಬೇಕು. ನಾನು ಯಾವುದೇ ಧರ್ಮದ ಬಗ್ಗೆ ಮಾತಾಡುತ್ತಿಲ್ಲ, ಯಾವ ಧರ್ಮದ ವಿರೋಧಿಯೂ ನಾನಲ್ಲ. ರಾಜಕಾರಣಿಗಳೇನು ಧರ್ಮವನ್ನು ಗುತ್ತಿಗೆ ಪಡೆದಿದ್ದಾರಾ? ರಾಜಕಾರಣಿಗಳು ಹೊರಗಡೆ ಭಿನ್ನ, ತುಷ್ಟೀಕರಣ ವಿಚಾರ ಬಂದಾಗ ಎಲ್ಲಾ ರಾಜಕಾರಣಿಗಳು, ರಾಜಕೀಯ ಪಕ್ಷಗಳೂ ಒಂದೇ. ನನಗೆ ದೇಶ ಮಾತ್ರ ಮುಖ್ಯ ಎಂದ ಬಹುಭಾಷಾ ನಟ ಪ್ರಕಾಶ ರೈ 


ಕಲಬುರಗಿ(ಸೆ.11): ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್‌ ಮಾತಾಡಿದ್ದರಲ್ಲಿ ತಪ್ಪೇನಿದೆ? ಅಸ್ಪೃಶ್ಯತೆ ಹೋಗಬೇಕೋ ಇಲ್ಲವೋ? ಉದಯನಿಧಿ ಅವರ ಹೇಳಿಕೆಯನ್ನ ತಿರುಚಲಾಗಿದೆ ಎಂದು ಬಹುಭಾಷಾ ನಟ ಪ್ರಕಾಶ ರೈ ಹೇಳಿದರು.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಧರ್ಮಗಳಲ್ಲೂ ವಿಕೃತಿ ಇದೆ. ಅದು ಸರಿಹೋಗಲೇ ಬೇಕು. ನಾನು ಯಾವುದೇ ಧರ್ಮದ ಬಗ್ಗೆ ಮಾತಾಡುತ್ತಿಲ್ಲ, ಯಾವ ಧರ್ಮದ ವಿರೋಧಿಯೂ ನಾನಲ್ಲ. ರಾಜಕಾರಣಿಗಳೇನು ಧರ್ಮವನ್ನು ಗುತ್ತಿಗೆ ಪಡೆದಿದ್ದಾರಾ? ರಾಜಕಾರಣಿಗಳು ಹೊರಗಡೆ ಭಿನ್ನ, ತುಷ್ಟೀಕರಣ ವಿಚಾರ ಬಂದಾಗ ಎಲ್ಲಾ ರಾಜಕಾರಣಿಗಳು, ರಾಜಕೀಯ ಪಕ್ಷಗಳೂ ಒಂದೇ. ನನಗೆ ದೇಶ ಮಾತ್ರ ಮುಖ್ಯ ಎಂದರು.

Tap to resize

Latest Videos

undefined

ಉದಯನಿಧಿ ಹಿಂದೂ ಧರ್ಮವನ್ನು ವಿರೋಧಿಸುವ ತಲೆಕೆಟ್ಟ ರಾಜಕಾರಣಿ: ಸಂಸದ ರಾಘವೇಂದ್ರ

ನಾನು ಪ್ರತಿಭೆಯಿಂದಷ್ಟೇ ಬೆಳೆದಿಲ್ಲ, ಜನರ ಪ್ರೀತಿಯಿಂದ ಬೆಳೆದಿದ್ದೇನೆ. ಜನರಿಗಾಗಿ ನಾನು ಧ್ವನಿ ಎತ್ತಲೇಬೇಕು. ಆ ಕೆಲಸ ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ ಎಂದ ಅವರು, ಬಸವಣ್ಣ, ಅಂಬೇಡ್ಕರ್‌ ಅವರು ಹೇಳಿದ್ದು ಕೇವಲ ಭಾಷಣಕ್ಕಾಗಿ ಅಲ್ಲ, ಅವನ್ನೆಲ್ಲವನ್ನೂ ಅಳವಡಿಸಿಕೊಳ್ಳೋದೇ ನಿಜ ಜೀವನ ಎಂದು ಪ್ರತಿಪಾದಿಸಿದರು.

click me!