ಸುಮಾರು 30 ಕ್ಕೂ ಅಧಿಕ ವಿವಿಧ ಮಠಾಧೀಶರು ಸಾಧು ಸಂತರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ, ಹಿಂದು ಧರ್ಮ ಎದುರಿಸುತ್ತಿರುವ ಗೋಹತ್ಯೆ, ಲವ್ ಜಿಹಾದ್, ಕೌ ಜಿಹಾದ್, ಜಾತ್ರಾ ಜಿಹಾದ್, ಮತಾಂತರ , ಸಾಮಾಜಿಕ ಜಾಲತಾಣಗಳಿಂದಾಗಿ ಸಂಸ್ಕೃತಿಯ ಮೇಲಾಗುತ್ತಿರುವ ದಾಳಿ ಮೊದಲಾದ ಜ್ವಲಂತ ಸಮಸ್ಯೆಗಳ ಬಗ್ಗೆ ಜಾಗೃತರಾಗುವುದು ಹೆಚ್ಚು ಅವಶ್ಯಕವಾಗಿದೆ: ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು
ಉಡುಪಿ(ಸೆ.11): ಸನಾತನ ಧರ್ಮೀಯರೇ ಬಹುಸಂಖ್ಯೆಯಲ್ಲಿರುವ ಭಾರತದಲ್ಲಿ, ಸನಾತನ ಧರ್ಮವನ್ನೇ ಕಿತ್ತೊಗೆಯಬೇಕು ಎನ್ನುವ ಮೂಲಕ, ಭಾರತವನ್ನೇ ಛಿದ್ರ ಮಾಡಲು ಹೊರಟಿರುವ ಯಾರೇ ಆಗಲಿ ಅಥವಾ ಅವರನ್ನು ಬೆಂಬಲಿಸುವ ಯಾವುದೇ ರಾಜಕೀಯ ಅಥವಾ ದೇಶದ್ರೋಹಿ ಶಕ್ತಿಗಳಿಗೆ ಸಂದರ್ಭ ಬಂದಾಗ ಅವಶ್ಯವಾಗಿ ಪಾಠ ಕಲಿಸಬೇಕು. ಅದಕ್ಕಾಗಿ ಸಮಸ್ತ ಹಿಂದೂ ಸಮಾಜ ಜಾಗೃತರಾಗಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕರೆ ನೀಡಿದ್ದಾರೆ.
ಮೈಸೂರಿನಲ್ಲಿ ತಮ್ಮ36 ನೇ ಚಾತುರ್ಮಾಸ್ಯದ ಅಂಗವಾಗಿ ಚಾತುರ್ಮಾಸ್ಯವ್ರತ ಸಮಿತಿ ಮತ್ತು ಮೈಸೂರು ಜಿಲ್ಲಾ ವಿಶ್ವಹಿಂದು ಪರಿಷತ್ ಗಳ ಸಂಯೋಜನೆಯಲ್ಲಿ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಆಶ್ರಯದಲ್ಲಿ ಭಾನುವಾರ ನಡೆದ ಸಂತ ಸಮಾವೇಶ ಮತ್ತು ಬೃಹತ್ ಧರ್ಮ ಸಭೆಯ ಅಧ್ಯಕ್ಷತೆ ವಹಿಸಿ ಮಾರ್ಗದರ್ಶನ ನೀಡಿದರು .
undefined
ಉಡುಪಿ: ಶ್ರದ್ಧಾ ಭಕ್ತಿಯ ಕೃಷ್ಣಜನ್ಮಾಷ್ಟಮಿ ಆಚರಣೆ; ಇಂದು ರಥಬೀದಿಯಲ್ಲಿ ಕೃಷ್ಣ ಲೀಲೋತ್ಸವ
ಸುಮಾರು 30 ಕ್ಕೂ ಅಧಿಕ ವಿವಿಧ ಮಠಾಧೀಶರು ಸಾಧು ಸಂತರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ, ಹಿಂದು ಧರ್ಮ ಎದುರಿಸುತ್ತಿರುವ ಗೋಹತ್ಯೆ, ಲವ್ ಜಿಹಾದ್, ಕೌ ಜಿಹಾದ್, ಜಾತ್ರಾ ಜಿಹಾದ್, ಮತಾಂತರ , ಸಾಮಾಜಿಕ ಜಾಲತಾಣಗಳಿಂದಾಗಿ ಸಂಸ್ಕೃತಿಯ ಮೇಲಾಗುತ್ತಿರುವ ದಾಳಿ ಮೊದಲಾದ ಜ್ವಲಂತ ಸಮಸ್ಯೆಗಳ ಬಗ್ಗೆ ಜಾಗೃತರಾಗುವುದು ಹೆಚ್ಚು ಅವಶ್ಯಕವಾಗಿದೆ ಎಂದರು.
ವಿಶ್ವ ಹಿಂದು ಪರಿಷತ್ ಮೈಸೂರು ಜಿಲ್ಲಾ ಉಪಾಧ್ಯಕ್ಷ ಜಗದೀಶ ಹೆಬ್ಬಾರ್ ನಿರ್ಣಯ ಮಂಡಿಸಿದರು. ಚಾತುರ್ಮಾಸ್ಯ ಸಮಿತಿ ಕಾರ್ಯಾಧ್ಯಕ್ಷ ರವಿ ಶಾಸ್ತ್ರಿ, ವಿ.ಹಿಂ.ಪ. ಜಿಲ್ಲಾಧ್ಯಕ್ಷ ಪ್ರಶಾಂತ್, ಆಶ್ರಮದ ಪ್ರ.ವ್ಯವಸ್ಥಾಪಕ ಎಚ್.ವಿ. ಪ್ರಸಾದ್, .ಹಿಂ.ಪ. ವಿಭಾಗ ಸಂಯೋಜಕಿ ಸವಿತಾ ಘಾಟ್ಗೆ ಮೊದಲಾದವರು ಉಪಸ್ಥಿತರಿದ್ದರು.
ಆಶ್ರಮದ ವೇದ ವಿದ್ಯಾರ್ಥಿಗಳ ವೇದ ಘೋಷದೊಂದಿಗೆ ಆರಂಭವಾದ ಧರ್ಮಸಭೆಯಲ್ಲಿ ಚಾತುರ್ಮಾಸ್ಯ ಸಮಿತಿಯ ಎಂ.ಕೆ.ಪುರಾಣಿಕ್ ಸ್ವಾಗತಿಸಿದರು, ವಿಶ್ವ ಹಿಂದು ಪರಿಷತ್ ಪ್ರಾಂತ ಅಧ್ಯಕ್ಷ ಎಂ.ಬಿ. ಪುರಾಣಿಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ವಾನ್ ಬಿ.ಎನ್. ವಿಜಯೀಂದ್ರಾಚಾರ್ಯರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.