ಕರಾವಳಿ ರೈಲ್ವೆ ಬೇಡಿಕೆಗಳು: ಗೋಮಟೇಶ್ವರ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ ವರೆಗೆ ವಿಸ್ತರಿಸಲು ಮನವಿ

Published : Aug 18, 2026, 10:04 PM IST
Mangaluru Central Railway

ಸಾರಾಂಶ

ಮಂಗಳೂರು ಭಾಗದ ಹಲವು ವರ್ಷಗಳ ರೈಲ್ವೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಶ್ಚಿಮ ಕರಾವಳಿ ರೈಲ್ವೆ ಅಭಿವೃದ್ಧಿ ಸಮಿತಿಯು ಪಾಲಕಾಡು ವಿಭಾಗದ ಪ್ರಬಂಧಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಗೋಮಟೇಶ್ವರ ಎಕ್ಸ್‌ಪ್ರೆಸ್‌ ವಿಸ್ತರಣೆ, ಹೊಸ ರೈಲುಗಳ ಆರಂಭ, ನಿಲ್ದಾಣ ನವೀಕರಣ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ಇವುಗಳನ್ನು ಆದ್ಯತೆಯ ಮೇಲೆ ಪರಿಗಣಿಸುವುದಾಗಿ ಡಿ.ಆರ್.ಎಂ. ಭರವಸೆ ನೀಡಿದ್ದಾರೆ.

ಮಂಗಳೂರು: ಕಳೆದ ಹಲವು ವರ್ಷದಿಂದ ನೆನೆಗುದಿಗೆ ಬಿದ್ದಿರುವ ಮಂಗಳೂರು ಭಾಗದ ವಿವಿಧ ರೈಲ್ವೆ ಬೇಡಿಕೆಗಳ ಶೀಘ್ರ ಈಡೇರಿಕೆಗಾಗಿ ರೈಲ್ವೇಗೆ ಮನವಿ ನೀಡಲಾಗಿದೆ. ಪಾಲಕಾಡು ವಿಭಾಗ ರೈಲ್ವೇ ಸಲಹಾ ಸಮಿತಿಯ ಮಾಜಿ ಸದಸ್ಯ ಹನುಮಂತ ಕಾಮತ್ ಮಾರ್ಗದರ್ಶನದಲ್ಲಿ, ಪಶ್ಚಿಮ ಕರಾವಳಿ ರೈಲ್ವೆ ಅಭಿವೃದ್ಧಿ ಸಮಿತಿ ಸದಸ್ಯರು ಪಾಲಕಾಡು ರೈಲ್ವೆ ವಿಭಾಗ ಕಚೇರಿಗೆ ಭೇಟಿ ನೀಡಿ, ರೈಲ್ವೇ ವಿಭಾಗ ಪ್ರಬಂಧಕರನ್ನು (ಡಿ.ಆರ್.ಎಂ.) ಭೇಟಿ ಮಾಡಿ, ಈ ಭಾಗದ ಜನತೆಯ ಬಹುಕಾಲದ ಬೇಡಿಕೆಗಳ ಶೀಘ್ರ ಈಡೇರಿಕೆ ಬಗ್ಗೆ ಚರ್ಚಿಸಿದರು.

ಮಂಗಳೂರಿನಿಂದ ಬೆಂಗಳೂರಿಗೆ ಅತ್ಯಂತ ಕಡಿಮೆ ಪ್ರಯಾಣ ವೆಚ್ಚದಲ್ಲಿ ಸಂಪರ್ಕ ಕಲ್ಪಿಸುವ ಹಗಲು ರೈಲನ್ನು (ಗೋಮಟೇಶ್ವರ ಎಕ್ಸ್‌ಪ್ರೆಸ್‌) ಮಂಗಳೂರು ಸೆಂಟ್ರಲ್‌ವರೆಗೆ ವಿಸ್ತರಿಸುವ ಬೇಡಿಕೆ ಈವರೆಗೂ ಈಡೇರಿಸಲಿಲ್ಲ. ಮಂಗಳೂರು ಸೆಂಟ್ರಲ್‌ನಲ್ಲಿ 4 ಮತ್ತು 5 ಪ್ಲಾಟ್ ಫಾರಂ ಅದ ಬಳಿಕ, ಈ ರೈಲನ್ನು ಕೇಂದ್ರ ನಿಲ್ದಾಣಕ್ಕೆ ವಿಸ್ತರಿಸಲಾಗುವುದು ಎಂದು ಈ ಭಾಗದ ಜನಪ್ರತಿನಿಧಿಗಳಿಗೆ, ರೈಲ್ವೆ ಸಲಹಾ ಸಮಿತಿ ಸದಸ್ಯರಿಗೆ ರೈಲ್ವೆ ಅಧಿಕಾರಿಗಳು ಈ ಹಿಂದೆ ಭರವಸೆ

ನೀಡಿದ್ದರು. ಮಂಗಳೂರು ಸೆಂಟ್ರಲ್‌ನಲ್ಲಿ ಹೆಚ್ಚುವರಿ ಪ್ಲಾಟ್ ಫಾರಂ ಆದ ಬಳಿಕವೂ ಬೇಡಿಕೆ ಈಡೇರಿಲ್ಲ. ಆದುದರಿಂದ ಈ ರೈಲನ್ನು ಶೀಘ್ರ ಮಂಗಳೂರು ಸೆಂಟ್ರಲ್‌ವರೆಗೆ ವಿಸ್ತರಣೆ ಮಾಡುವಂತೆ ಅಥಾವ ಒಂದು ವೇಳೆ ಇದು ಸದ್ಯಕ್ಕೆ ಅಸಾಧ್ಯವಾದರೇ, ವಾರಕ್ಕೆ ಒಮ್ಮೆ ಸಂಚರಿಸುವ 16539/40 ಯಶವಂತಪುರ-ಮಂಗಳೂರು ಜಂಕ್ಷನ್ ರೈಲನ್ನು ಮಂಗಳೂರು ಸೆಂಟ್ರಲ್ ವರೆಗೆ ವಿಸ್ತರಣೆ ಮಾಡುವಂತೆ ಮನವಿ ಮಾಡಲಾಯಿತು.

ಮಂಗಳೂರು ಜಂಕ್ಷನ್ ಹಾಗೂ ಮಂಗಳೂರು ಸೆಂಟ್ರಲ್ ನಡುವೆ ಹಳಿ ಡಬ್ಲಿಂಗ್, ಮಂಗಳೂರಿನಿಂದ ಬೆಂಗಳೂರು ಹಾಗೂ ಮುಂಬಯಿ ಭಾಗಕ್ಕೆ ರಜಾ ಕಾಲದ ವಿಶೇಷ ರೈಲು ವ್ಯವಸ್ಥೆ, ಮಂಗಳೂರು - ಸುಬ್ರಹ್ಮಣ್ಯಕ್ಕೆ ಮೆಮು (MEMU) ರೈಲು, ಮಂಗಳೂರು ಸೆಂಟ್ರಲ್ ನಿಲ್ದಾಣ ನವೀಕರಣ, ವಾರಕ್ಕೊಮ್ಮೆ ಸಂಚರಿಸುವ ರಾಮೇಶ್ವರ ರೈಲಿನ ಭೋಗಿಗಳನ್ನು ಬಳಸಿ ಮುಂಬೈ ಅಥಾವ ಭಾವ ನಗರಕ್ಕೆ ಹೊಸ ರೈಲಿನ ಆರಂಭ ಇತ್ಯಾದಿ ಬೇಡಿಕೆಗಳನ್ನು ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿದ ಡಿ.ಆರ್.ಎಂ. ಅವರು ಬೇಡಿಕೆಗಳನ್ನು ಪರಿಶೀಲಿಸಿ ಆದ್ಯತೆಯ ಮೇಲೆ ಪರಿಗಣಿಸಲಾಗುವುದು ಎಂಬ ಭರವಸೆ ನೀಡಿದರು. ಮಂಗಳೂರು ಸೆಂಟ್ರಲ್‌ನಲ್ಲಿ ಇನ್ನೂ ಹೆಚ್ಚುವರಿಯಾಗಿ ಎರಡು ಪ್ಲಾಟ್ ಫಾರಂಗಳ ನಿರ್ಮಾಣಕ್ಕೆ ಅನುಮತಿ ದೊರಕಿದ್ದು, ನಿರ್ಮಾಣ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ ಎ೦ಬ ಮಾಹಿತಿ ನೀಡಿದರು.

ಮಂಗಳೂರು ರೈಲ್ವೆ ನಿಲ್ದಾಣ ಸಲಹಾ ಸಮಿತಿ ಮಾಜಿ ಸದಸ್ಯ ಹಾಗೂ ಪಶ್ಚಿಮ ಕರಾವಳಿ ರೈಲ್ವೆ ಅಭಿವೃದ್ಧಿ ಸಮಿತಿ ಸದಸ್ಯ ಅನಿಲ್ ಹೆಗ್ಡೆ ಮತ್ತು ಇತರರು ಇದ್ದರು.

PREV
Read more Articles on
click me!

Recommended Stories

ಬೆಂಗಳೂರು ಇಸ್ಕಾನ್ ವಿವಾದ, ಯಾರಿಗೆ ಒಲಿಯಲಿದೆ ರಾಜಾಜಿನಗರದ ಹರೇ ಕೃಷ್ಣ ಮಂದಿರ?  ಹೊಸ ಪೀಠ ರಚನೆಗೆ ಸುಪ್ರೀಂ ಸಮ್ಮತಿ!
'ನನ್ನ ಏಕೈಕ ಕೆಲಸ ಬಡವರಿಗೆ ಸಹಾಯ ಮಾಡೋದು..' ವಿಧಾನಸಭೆ ಉಪಸಭಾಧ್ಯಕ್ಷರಾಗಿ ಆಯ್ಕೆಯಾದ ಮಂಕಾಳ ವೈದ್ಯ ಭಾವುಕ ಭಾಷಣ!