ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಗ್ರಾಮದಲ್ಲಿವೊಂದರಲ್ಲಿ ಮಳೆ ಇಲ್ಲದೆ ಬರದಿಂದ ತತ್ತರಿಸಿರುವ ಜನರು ಮಳೆಗಾಗಿ ಕತ್ತೆಗಳ ಮದುವೆ ಮಾಡಿಸಿ ಮೆರವಣಿಗೆ ಮಾಡಿದ್ದಾರೆ.
ದಾವಣಗೆರೆ (ಮೇ.13): ರಾಜ್ಯದ ಹಲವು ಕಡೆ ಬಿಡದೇ ಮಳೆ ಸುರಿಯುತ್ತಿದೆ. ಆದರೆ ಮತ್ತೊಂದೆಡೆ ಕೆಲವು ಕಡೆ ಮಳೆಗಾಗಿ ಪೂಜೆ ನಡೆಯುತ್ತಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹೊಳೆಸಿರಿಗೆರೆ ಗ್ರಾಮದಲ್ಲಿ ಮಳೆ ಇಲ್ಲದೆ ಬರದಿಂದ ತತ್ತರಿಸಿ ಬಿಸಿಲಿಗೆ ಬಸವಳಿದಿರುವ ಜನರು ಮಳೆಗಾಗಿ ಕತ್ತೆಗಳ ಮದುವೆ ಮಾಡಿಸಿ ಮೆರವಣಿಗೆ ಮಾಡಿದ್ದಾರೆ.
ಮಳೆಗಾಗಿ ಮೂಡ ನಂಬಿಕೆಗೆ ಮೊರೆ ಹೋಗಿ ಕತ್ತೆಗಳ ಮದುವೆ ಮಾಡಿ ವಿಶೇಷ ಪ್ರಾರ್ಥನೆ ಮಾಡಿದ್ದಾರೆ. ಕತ್ತೆಗಳಿಗೆ ಮದುವೆ ಮಾಡಿಸಿದರೆ ಮಳೆಯಾಗುತ್ತದೆ ಎನ್ನುವ ನಂಬಿಕೆ ಇವರದ್ದು, ಹೀಗಾಗಿ ಕತ್ತೆಗಳಿಗೆ ಮದು ಮಕ್ಕಳಂತೆ ಸಿಂಗಾರ ಮಾಡಿದ ಗ್ರಾಮಸ್ಥರು ಶ್ರೀ ಯೋಗಿ ನಾರೇಯಣ ದೇವಸ್ಥಾನದಲ್ಲಿ ಶಾಸ್ರೋಕ್ತವಾಗಿ ವಿವಾಹ ಕಾರ್ಯ ನೆರವೇರಿಸಿದ್ದಾರೆ. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮಳೆಗಾಗಿ ಪ್ರಾರ್ಥಿಸಿದರು.
undefined
ರಾಜ್ಯಾದ್ಯಂತ ಮೇ 15ರವರೆಗೆ ಬಿರುಗಾಳಿ ಸಹಿತ ಭಾರೀ ಮಳೆ, ಎಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
ಇತ್ತೀಚೆಗೆ ತುಮಕೂರಿನಲ್ಲಿ ಕತ್ತೆಗಳಿಗೆ , ಇಬ್ಬರು ಬಾಲಕರಿಗೆ ಕೂಡ ಮದುವೆ ಮಾಡಿಸಿ ಮಳೆಗಾಗಿ ಪ್ರಾರ್ಥಿಸಿದರು. ತುಮಕೂರಿನ ಜಯಪುರ ಬಡಾವಣೆಯಲ್ಲಿ ಬಾಲಕರಿಗೆ ವಧು ವರನ ರೀತಿಯಲ್ಲಿ ಅಲಂಕಾರ ಮಾಡಿ ವಿಶೇಷ ಆಚರಣೆ ಮಾಡಿದರು. ಮಳೆಗಾಗಿ ವಿಶೇಷ ಪ್ರಾರ್ಥನೆ ಮಾಡಿದ್ದ ತಿಪಟೂರು ತಾಲೂಕಿನ ಅಲ್ಬೂರು ಗ್ರಾಮಸ್ಥರು ಕತ್ತೆಗಳಿಗೆ ಮದುವೆ ಮಾಡಿಸಿದ್ದರು.
ಮಳೆಗಾಗಿ ದೇವರ ಮೊರೆ ಹೋದ ಗ್ರಾಮಸ್ಥರು; ಮಕ್ಕಳಿಗೆ ಸೊಪ್ಪು ಕಟ್ಟಿ ವಿಶೇಷ ಪೂಜೆ
ಕರ್ನಾಟಕದಲ್ಲಿ ಮಳೆ ಬರದೆ ಭೀಕರ ಬರಗಾಲ ಎದುರಾದಾಗ ಒಂದೊಂದು ಕಡೆ ಒಂದೊಂದು ರೀತಿಯ ವಿಶಿಷ್ಟ ಆಚರಣೆ ಮಾಡುತ್ತಾರೆ. ಕೆಲವು ಕಡೆ ಯಜ್ಞ ಯಾಗಗಳನ್ನು ಮಾಡಿದರೆ, ಕೆಲವು ಕಡೆ ಕಪ್ಪೆಗಳ ಮದುವೆ, ಕತ್ತೆಗಳ ಮದುವೆ, ಅರಳಿಮರ ಮತ್ತು ಬೇವಿನ ಮರದ ಮದುವೆ, ಗಂಡು ಮಕ್ಕಳಿಬ್ಬರ ಮದುವೆ ಮಾಡುವ ಮೂಲಕ ಪ್ರಾರ್ಥನೆ ಸಲ್ಲಿಸುವುದು ಇದೆ. ಮೇಲುನೋಟಕ್ಕೆ ಇದು ಮೂಢನಂಬಿಕೆಯಂತೆ ಕಂಡು ಬಂದರೂ ಅದರಾಚೆಗೆ ಇರುವ ನಂಬಿಕೆಯನ್ನು ತಳ್ಳಿಹಾಕುವಂತಿಲ್ಲ.