ಕೊರೋನಾಗೆ ಸಂಬಂಧಿಸಿದಂತೆ ಎಷ್ಟುಖರ್ಚು ಮಾಡಲಾಗಿದೆ ಎಂಬ ಕುರಿತು ಪೈಸೆ ಪೈಸೆಯನ್ನು ಲೆಕ್ಕವಿಟ್ಟಿದ್ದೇವೆ. ಈ ವಿಷಯದಲ್ಲಿ ಜನರ ದಾರಿ ತಪ್ಪಿಸುವುದು ಬೇಡ. ನಾವೇ ನಿಮ್ಮ ಮನೆಗೆ ಲೆಕ್ಕ ಕೊಡುತ್ತೇವೆ. ನೀವು ಅಲ್ಲಿಂದಲೇ ಲೆಕ್ಕಹಾಕಿ ಎಂದು ಕಂದಾಯ ಸಚಿವ ಆರ್. ಅಶೋಕ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
ಮೈಸೂರು(ಜು.16): ಕೊರೋನಾಗೆ ಸಂಬಂಧಿಸಿದಂತೆ ಎಷ್ಟುಖರ್ಚು ಮಾಡಲಾಗಿದೆ ಎಂಬ ಕುರಿತು ಪೈಸೆ ಪೈಸೆಯನ್ನು ಲೆಕ್ಕವಿಟ್ಟಿದ್ದೇವೆ. ಈ ವಿಷಯದಲ್ಲಿ ಜನರ ದಾರಿ ತಪ್ಪಿಸುವುದು ಬೇಡ. ನಾವೇ ನಿಮ್ಮ ಮನೆಗೆ ಲೆಕ್ಕ ಕೊಡುತ್ತೇವೆ. ನೀವು ಅಲ್ಲಿಂದಲೇ ಲೆಕ್ಕಹಾಕಿ ಎಂದು ಕಂದಾಯ ಸಚಿವ ಆರ್. ಅಶೋಕ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಸರ್ಕಾರವಿದೆ. ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರವಿದೆ. ನಮ್ಮ ಅವಧಿಯಲ್ಲಿ ಖರ್ಚು ಮಾಡಿದ ಪ್ರತಿ ಪೈಸೆಗೂ ಲೆಕ್ಕವಿದೆ.
ದನದ ಬಾಲ ಹಿಡಿದ ಮರ, ಉಳವಿ ಕಾಡಿನಲ್ಲಿ ಅಚ್ಚರಿ!
ಈಗ ಸಿದ್ದರಾಮಯ್ಯ ಅವರು ವಿಧಾನಸೌಧಕ್ಕೆ ಬರುವುದು ಬೇಡ, ನಾವೇ ಖರ್ಚಿನ ಲೆಕ್ಕವನ್ನು ಕಳಿಹಿಸುತ್ತೇವೆ. ಕೊರೋನಾ ನಿಯಂತ್ರಣಕ್ಕೆ 3,500 ಕೋಟಿ ಖರ್ಚಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ನಾವು ಈವರೆಗೆ ಖರ್ಚು ಮಾಡಿರುವುದು 400 ಕೋಟಿ ಮಾತ್ರ ಎಂದು ತಿರುಗೇಟು ನೀಡಿದರು.
ಹಾಸಿಗೆ, ದಿಂಬು, ಬಕೆಟ್, ಜಗ್ಗು ಖರೀದಿಗೆ ಏಳೆಂಟು ಕೋಟಿಯಗದಿದ್ದರೂ 200 ಕೋಇ ಖರ್ಚಾಗಿದೆ ಎಂದು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಯಾವ ವಸ್ತುವನ್ನು ಬಾಡಿಗೆಗೆ ತಂದಿಲ್ಲ. ಮರು ಬಳಕೆಗೆ ಯೋಗ್ಯವಾದ ವಸ್ತು ಖರೀದಿಸಲು ಈಗ ಟೆಂಡರ್ ಕರೆಯಲಾಗಿದೆ. ಜಗ್ಗು, ಬಕೆಟ್ ಅನ್ನು ವಿದ್ಯಾರ್ಥಿನಿಲಯಗಳಲ್ಲಿ ಮರು ಬಳಸಬಹುದು ಎಂದು ಖರೀದಿಸಲಾಗುತ್ತಿದೆ. ಕೊರೋನಾ ನಿಯಂತ್ರಿಸುವಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಗೂಬೆ ಕೂರಿಸಲಾಗುತ್ತಿದೆ.
ಲೆಕ್ಕ ಕೊಡಿ ಎನ್ನುವ ಕಾಂಗ್ರೆಸಿಗರೇ, ಇಲ್ಲಿದೆ ನೋಡಿ ಲೆಕ್ಕ!
ಇಂತಹ ಸಂಕಷ್ಟದ ಸಂದರ್ಭದಲ್ಲಿಯೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಹಕಾರ ನೀಡದೆ ರಾಜಕೀಯ ಮಾಡುತ್ತಿದ್ದಾರೆ. ಲೆಕ್ಕ ಕೊಡಲು ನಮ್ಮದೇನು ತಕರಾರಿಲ್ಲ. ಆದರೆ ಇಂತಹ ಸಂದರ್ಭದಲ್ಲಿಯೂ ಸಹಕಾರ ನೀಡುತ್ತಿಲ್ಲವಲ್ಲ ಎಂದು ವಿಷಾದಿಸಿದರು.