ನಗರದ ಪ್ರಮುಖ ರಸ್ತೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ಕುದುರೆಗಳು ಹಗಲು- ರಾತ್ರಿ ಬಂದು ಮಲಗಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆ ಮಾಡುತ್ತಿವೆ. ಈ ಕುದುರೆಗಳ ಮಾಲೀಕರು ಕೂಡಲೇ 7 ದಿನಗಳೊಳಗೆ ತಮ್ಮ ಕುದುರೆಗಳನ್ನು ಸುಪರ್ದಿಗೆ ಪಡೆಯುಂತೆ ಮಹಾನಗರ ಪಾಲಿಕೆ ಸೂಚನೆ ನೀಡಿದೆ.
ಶಿವಮೊಗ್ಗ (ಜ.28) : ನಗರದ ಪ್ರಮುಖ ರಸ್ತೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ಕುದುರೆಗಳು ಹಗಲು- ರಾತ್ರಿ ಬಂದು ಮಲಗಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆ ಮಾಡುತ್ತಿವೆ. ಈ ಕುದುರೆಗಳ ಮಾಲೀಕರು ಕೂಡಲೇ 7 ದಿನಗಳೊಳಗೆ ತಮ್ಮ ಕುದುರೆಗಳನ್ನು ಸುಪರ್ದಿಗೆ ಪಡೆಯುಂತೆ ಮಹಾನಗರ ಪಾಲಿಕೆ ಸೂಚನೆ ನೀಡಿದೆ.
ನಗರದ ರಸ್ತೆಗಳಲ್ಲಿ, ವೃತ್ತಗಳಲ್ಲಿ, ಬಡಾವಣೆಗಳಲ್ಲಿ ಬಿಡಾಗಿ ಕುದುರೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇವುಗಳು ರಸ್ತೆ ಮತ್ತು ವೃತ್ತಗಳಲ್ಲಿ ಅಡ್ಡಾದಿಡ್ಡಿ, ತಿರುಗಾಡುವುದು, ಮಲಗುವುದು, ಸಾರ್ವಜನಿಕರ ಮೇಲೆ ನುಗ್ಗುವುದು ಹಾಗೂ ವಾಹನಗಳಿಗೆ ಅಡ್ಡಿ ಬರುತ್ತಿರುವ ಬಗ್ಗೆ ಅನೇಕ ದೂರುಗಳು ಬರುತ್ತಿದೆ. ಈ ಹಿಂದೆ ಅನೇಕ ಬಾರಿ ಪತ್ರಿಕಾ ಪ್ರಕಟಣೆ ಹೊರಡಿಸಿ ಮಾಲೀಕರು, ವಾರಸುದಾರರಿಗೆ ತಮ್ಮ ಕುದುರೆಗಳನ್ನು ಸುಪರ್ದಿಗೆ ತೆಗೆದುಕೊಳ್ಳಲು ತಿಳಿವಳಿಕೆ ಹೊರಡಿಸಲಾಗಿತ್ತು.
ದೇವಸ್ಥಾನ, ಕಾರ್ಖಾನೆಗಳು ಯಾವುದೇ ಕಾರಣಕ್ಕೂ ಮುಚ್ಚಬಾರದು: ವಿನಯ್ ಗುರೂಜಿ
ಸುಪರ್ದಿಗೆ ಪಡೆಯದಿದ್ದಲ್ಲಿ ಆಸಕ್ತಿಯುಳ್ಳ ಸಂಘ ಸಂಸ್ಥೆಗಳು ಅಥವಾ ಬಿಡಾಡಿ ಕುದುರೆಗಳನ್ನು ಸಾಕಿ ಸಲಹಿ ಉಪಯೋಗ ಪಡೆಯುವಂಥ ಆಸಕ್ತಿಯುಳ್ಳ ವಿವಿಧ ಯೋಜನೆಗಳನ್ನು ಉಳ್ಳಂಥ ಸಾರ್ವಜನಿಕರು ಮುಂದೆ ಬಂದಲ್ಲಿ ಕುದುರೆಗಳನ್ನು ನೀಡುವುದಾಗಿ ಪ್ರಕಟಣೆ ಹೊರಡಿಸಲಾಗಿತ್ತು.
ಇದಾಗ್ಯೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಿಡಾಡಿ ಕುದುರೆಗಳ ಹಾವಳಿ ಹೆಚ್ಚಾಗಿದೆ. ಈ ಸಂಬಂಧ ದೂರುಗಳು ಬರುತ್ತಿವೆ. ಕುದುರೆಗಳ ವಾರಸುದಾರರು ಇದ್ದಲ್ಲಿ ಅವುಗಳನ್ನು ಸುಪರ್ದಿಗೆ ಪಡೆಯಬೇಕು. ಇಲ್ಲವಾದಲ್ಲಿ ಪಾಲಿಕೆಯೇ ಕುದುರೆಗಳನ್ನು ವಶಕ್ಕೆ ಪಡೆದು ಎನ್‌ಜಿಒ ಅಥವಾ ಇವುಗಳನ್ನು ಸಾಕುವ ಇಚ್ಛೆಯುಳ್ಳ ಸಾರ್ವಜನಿಕರಿಗೆ ಕೊಡಲಿದೆ ಎಂದು ಮಹಾನಗರ ಪಾಲಿಕೆ ಎಚ್ಚರಿಕೆ ನೀಡಿದೆ.
ಕುದುರೆ ಸಾಗಿಸಲು ಎನ್‌ಜಿಒ ಮನವಿ:
ಕೆಲವು ಸ್ವಯಂ ಸೇವಾ ಸಂಸ್ಥೆ, ಏಜೆನ್ಸಿಗಳು ಈ ಬೀಡಾಡಿ ಕುದುರೆಗಳನ್ನು ಉಚಿತವಾಗಿ ತಮ್ಮ ವಶಕ್ಕೆ ತೆಗೆದುಕೊಂಡು ಸಾಗಿಸಲು ಅನುಮತಿ ಕೇಳುತ್ತಿವೆ. ಅವುಗಳನ್ನು ಬಳಸಿಕೊಂಡು ಬ್ಯಾಟರಿ ಚಾಲಿತ ಯಂತ್ರವನ್ನು ಬಳಸುವುದು, ವ್ಯವಸಾಯ ಕ್ಷೇತ್ರ, ಸಾಗಾಣಿಕೆ ಕ್ಷೇತ್ರಕ್ಕೆ ಬಳಸಿಕೊಳ್ಳುವುದಕ್ಕೆ ಮನವಿ ಸಲ್ಲಿಸಿವೆ. ಈ ಪ್ರಸ್ತಾವನೆಗೆ ಮೈಸೂರಿನಲ್ಲಿರುವ ಕೇಂದ್ರ ಆಹಾರ ಸಂಶೋಧನ ಕೇಂದ್ರ, ಬೆಂಗಳೂರಿನಲ್ಲಿರುವ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಮಾರ್ಗದರ್ಶನ ಪಡೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Hampi Utsav: ಹಂಪಿ ಉತ್ಸವಕ್ಕೆ ಮೆರುಗು ನೀಡಿದ ಫಲಪುಷ್ಪ ಪ್ರದರ್ಶನ
7 ದಿನ ಗಡುವು ನೀಡಿದ ಪಾಲಿಕೆ:
ಈ ಪ್ರಕಟಣೆ ಹೊರಡಿಸಿದ 7 ದಿನಗಳೊಳಗೆ ವಾರಸುದಾರರು ತಮ್ಮ ಕುದುರೆಗಳನ್ನು ಸುಪರ್ದಿಗೆ ಪಡೆಯಬೇಕು. ಇಲ್ಲವಾದಲ್ಲಿ ಕಾರ್ಪೊರೇಷನ್ ಕಾಯ್ದೆ ಅನುಸಾರ ಬಿಡಾಡಿ ಕುದುರೆಗಳನ್ನು ಸೂಕ್ತ ಎನ್ಜಿಒಗಳ ವಶಕ್ಕೆ ನೀಡಲಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ. ಬಿಡಾಡಿ ಕುದುರೆಗಳ ಮಾಲೀಕರು ಮೊ.98863- 26268 ಇಲ್ಲಿಗೆ ಸಂಪರ್ಕಿಸಬಹುದು. ** hಛಿa್ಝಠಿh್ಚಜಿಠಿy್ಚಟ್ಟpಟ್ಟaಠಿಜಿಟ್ಞಃಜಞaಜ್ಝಿ.್ಚಟಞ ** ಈ ವಿಳಾಸಕ್ಕೆ ತಮ್ಮ ದೂರುಗಳನ್ನು ದಾಖಲಿಸುವಂತೆ ತಿಳಿಸಿದ್ದಾರೆ.