
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಜ.28): ಒಂದು ತಿಂಗಳ ಅವಧಿಯಲ್ಲಿ ನಾಲ್ಕು ಕಾಡುಕೋಣ ದಾಳಿ ಪ್ರಕರಣದಿಂದ ಓರ್ವ ಸಾವನ್ನಪ್ಪಿದ್ದು ಮೂವರು ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಮತ್ತಿಕಟ್ಟೆ(Mattikatte) ಬಳಿ ಬೈಕಿನಲ್ಲಿ ತೆರಳುತ್ತಿದ್ದ ಇಬ್ಬರ ಮೇಲೆ ಕಾಡುಕೋಣ ದಾಳಿ(bison attack) ಮಾಡಿದ್ದು ಬೈಕ್ ಸವಾರರಿಬ್ಬರಿಗೂ ತೀವ್ರ ಗಾಯವಾಗಿದೆ. ಬೈಕ್ ಸಂಪೂರ್ಣ ಜಖಂಗೊಂಡಿದ್ದು ಬೈಕಿನ ಫೈಬರ್ ಭಾಗ ಪುಡಿ-ಪುಡಿಯಾಗಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿವೆ.
Bison Attacks: ಕಾಫಿನಾಡಲ್ಲಿ ಕಾಡುಕೋಣ ಹಾವಳಿ: 15 ದಿನದಲ್ಲಿ ಮೂರನೇ ದಾಳಿ!
ಮತ್ತಿಕಟ್ಟೆ ಸಮೀಪದ ಕಲ್ಯಾಣಗದ್ದೆ(Kalyanagadde)ಯ ದಿಲೀಪ್ ಹಾಗೂ ಆಶಾ ಕಾಡುಕೋಣದ ದಾಳಿಯಿಂದ ಗಾಯಗೊಂಡವರು. ಮತ್ತಿಕಟ್ಟೆ ರಸ್ತೆಯಲ್ಲಿ ಸವಾರರಿಬ್ಬರು ಬೈಕ್ ನಲ್ಲಿ ಬರುತ್ತಿದ್ದ ವೇಳೆ ಎತ್ತರ ಪ್ರದೇಶದಿಂದ ಜಂಪ್ ಮಾಡಿದ ಕೋಣ ಬೈಕ್ ಸವಾರರ ಮೇಲೆ ಮಾಡಿದೆ. ಕೂಡಲೇ ದಾರಿಹೊಕ್ಕರು ಇಬ್ಬರು ಗಾಯಾಳುಗಳನ್ನ ಬಣಕಲ್ ಖಾಸಗಿ ಆಸ್ಪತ್ರೆಗೆ ಕರೆದ್ಯೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಲೆನಾಡಿನಲ್ಲಿ ಮೇಲಿಂದ ಮೇಲೆ ಕಾಡುಕೋಣ ದಾಳಿ :
ಮಲೆನಾಡು ಭಾಗದಲ್ಲಿ ಮೇಲಿಂದ ಮೇಲೆ ಕಾಡುಕೋಣ ದಾಳಿ ಮೀತಿ ಮೀರುತ್ತಿದ್ದು ಮಲೆನಾಡಿಗರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಪ್ರಕರಣಗಳ ತಿಂಗಳ ಅವಧಿಯಲ್ಲಿ ನಾಲ್ಕನೇ ಪ್ರಕರಣವಾಗಿದ್ದು ಮಲೆನಾಡಿಗರು ಕಂಗಾಲಾಗಿದ್ದಾರೆ.
ತಾಲೂಕಿನ ನಿಡಗೋಡು ಬಳಿ ತೋಟದ ಕೆಲಸ ಮುಗಿಸಿ ಸಂಜೆ ಮನೆಯತ್ತ ಹೊರಟಿದ್ದ ಯುವಕನ ಮೇಲೆ ಕಾಡುಕೋಣ ದಾಳಿ ಮಾಡಿತ್ತು. ಯುವಕನ ಪಕ್ಕೆಗೆ ಕಾಡುಕೋಣ ಬಲವಾಗಿ ತಿವಿದ ಪರಿಣಾಮ ಪಕ್ಕೆಗೆ ಗಂಭೀರ ಗಾಯವಾಗಿತ್ತು. ಇತ್ತೀಚೆಗಷ್ಟೆ ಬೆಟ್ಟದಮರಡಿ ಗ್ರಾಮದಲ್ಲಿ ಕರ್ತವ್ಯ ಮುಗಿಸಿ ಹಿಂದಿರುಗುತ್ತಿದ್ದ ದಿನೇಶ್ ಎಂಬ ಪೇದೆ ಮೇಲೂ ಕಾಡುಕೋಣ ದಾಳಿ ಮಾಡಿತ್ತು. ಅವರು ಕೂಡ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ 20 ದಿನಗಳ ಹಿಂದೆ ಕಳಸ ತಾಲೂಕಿನ ತೋಟದೂರು ಸಮೀಪದ ಕುಳಿಹಿತ್ಲು ಗ್ರಾಮದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸೋಮಶೇಖರ್ ಎಂಬುವರ ಮೇಲೂ ಕಾಡುಕೋಣ ದಾಳಿ ಮಾಡಿತ್ತು. ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.
Wildlife: ನೀರು ಕುಡಿಯುತ್ತಿದ್ದ ಕಾಡೆಮ್ಮೆ ಬೆನ್ನಟ್ಟಿ ಹುಲಿ ಬೇಟೆ, ಮೈ ಜುಂ ಎನಿಸುವ ಅಪರೂಪದ ದೃಶ್ಯ
ಕಾಫಿನಾಡಲ್ಲಿ ಇತ್ತೀಚೆಗೆ ಕಾಡಾನೆಗಳ ಹಾವಳಿ ಹೆಚ್ಚಿದ್ದು, ಈಗ ಕಾಡಾನೆ ಜೊತೆ ಕಾಡುಕೋಣಗಳ ಹಾವಳಿಯೂ ಹೆಚ್ಚಾಗಿದೆ. ಬಣಕಲ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆಸ್ಪತ್ರೆಗೆ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಮೋಹನ್ ಭೇಟಿ ನೀಡಿ, ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ.