'ಎಚ್ಡಿಕೆ ಮತ್ತೆ ಮುಖ್ಯಮಂತ್ರಿ ಮಾಡಬೇಕು : 120 ಸ್ಥಾನದ ಗುರಿ'

Kannadaprabha News   | Asianet News
Published : Sep 28, 2021, 03:21 PM IST
'ಎಚ್ಡಿಕೆ ಮತ್ತೆ ಮುಖ್ಯಮಂತ್ರಿ ಮಾಡಬೇಕು : 120 ಸ್ಥಾನದ ಗುರಿ'

ಸಾರಾಂಶ

 ರಾಜ್ಯದಲ್ಲಿ ಮತ್ತೇ ಜೆಡಿಎಸ್‌ನ್ನು ಅಧಿಕಾರಕ್ಕೆ ತಂದು ಎಚ್‌.ಡಿ.ಕುಮಾರಸ್ವಾಮಿ ರವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡುವ ಹೊಣೆ  ಜೆಡಿಎಸ್‌ ಪಕ್ಷವನ್ನು ಈ ಬಾರಿ 120ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಮತ್ತೆ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬರುವಂತೆ ಮಾಡಬೇಕು 

ಟೇಕಲ್‌ (ಸೆ.28): ರಾಜ್ಯದಲ್ಲಿ ಮತ್ತೇ ಜೆಡಿಎಸ್‌ನ್ನು (JDS) ಅಧಿಕಾರಕ್ಕೆ ತಂದು ಎಚ್‌.ಡಿ.ಕುಮಾರಸ್ವಾಮಿ ರವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡುವ ಹೊಣೆ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ತಾಲೂಕು ಜೆಡಿಎಸ್‌ ಮುಖಂಡ ಜಿ.ಇ.ರಾಮೇಗೌಡ (Ramegowda) ತಿಳಿಸಿದರು.

ಅವರು ಟೇಕಲ್‌ನ ಕೆ.ಜಿ.ಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಹುಲಿಗುಟ್ಟೆ, ಕರಡಗುರ್ಕಿ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮದ ಸವಾರಮ್ಮದೇವಿಯ ದೇವಾಲಯ ಕಟ್ಟಡ ನಿರ್ಮಿಸಲು 50 ಸಾವಿರ ನಗದು ಮತ್ತು 50 ಮೂಟೆ ಸಿಮೆಂಟ್‌ನ್ನು ಗ್ರಾಮಸ್ಥರಿಗೆ ನೀಡಿ ಮಾತನಾಡಿದರು.

ಜೆಡಿಎಸ್‌ ಮತ್ತೆ ಅಧಿಕಾರಕ್ಕೆ ಬರಬೇಕು

ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿ ರೈತರ ಮನೆ ಬಾಗಿಲಿಗೆ ಯೋಜನೆಯು ಸಿಗುವಂತೆ ಮಾಡಿದ ಕುಮಾರಸ್ವಾಮಿರವರನ್ನು (HD Kumaraswamy) ಹಾಗೂ ಜೆಡಿಎಸ್‌ ಪಕ್ಷವನ್ನು ಈ ಬಾರಿ 120ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಮತ್ತೆ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬರುವಂತೆ ಮಾಡಬೇಕು ಎಂದರು.

2023ರ ಚುನಾವಣೆಗೆ 113 ಸ್ಥಾನ ಗೆದ್ದು ಮತ್ತೆ ಎಚ್‌ಡಿಕೆ ಸಿಎಂ ಆಗುವ ಗುರಿ

ರಾಜ್ಯ ಜೆಡಿಎಸ್‌ ಸಮಿತಿಯ ಬಲ್ಲಹಳ್ಳಿ ಬಿ.ಕೆ.ನಾರಾಯಣಸ್ವಾಮಿ ಮಾತನಾಡಿ, ಜೆಡಿಎಸ್‌ನ ಯುವಕ ಕಾರ್ಯಕರ್ತರು ತಾಲೂಕಿನಾದ್ಯಂತ ಪಕ್ಷ ಸಂಘಟನೆ ಮಾಡುತ್ತಿದ್ದು ಕುಮಾರಸ್ವಾಮಿರವರ ಯೋಜನೆಗಳನ್ನು ಪ್ರತಿ ಮನೆ ಮನೆಗಗೂ ತಿಳಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಟೇಕಲ್‌ ಸೋಮಶೇಖರ್‌, ನಟರಾಜ್‌, ಮಂಜುನಾಥಗೌಡ, ರಾಘವೇಂದ್ರ, ಕೃಷ್ಣಮೂರ್ತಿ, ಪರಮೇಶ, ಶಶಿಧರ ಕೋಟೆ, ಹುಲಿಗುಟ್ಟೆ, ಕರಡಗುರ್ಕಿ ಗ್ರಾಮದ ಜೆಡಿಎಸ್‌ ಮುಖಂಡರು ಉಪಸ್ಥಿತರಿದ್ದರು.

ಪರೋಕ್ಷ ಚಾಲೆಂಜ್

 

ವಿಧಾನಸಭೆ ಚುನಾವಣೆಗೆ ಇನ್ನೂ ಒಂದುವರೆ ವರ್ಷ ಬಾಕಿ ಇದೆ. ಆದ್ರೆ, ಜೆಡಿಎಸ್‌ (JDS) ಈಗಿಂದಲೇ ಚುನಾವಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ರಾಮನಗರದ ಕೇತಗಾನಹಳ್ಳಿಯಲ್ಲಿ 4 ದಿನಗಳ ಜೆಡಿಎಸ್ ಕಾರ್ಯಾಗಾರ ಹಮ್ಮಿಕೊಂಡಿದ್ದು, ಇಂದು (ಸೆ,27 ಎಚ್‌ಡಿ ಕುಮಾರಸ್ವಾಮಿ (HD Kumaraswamy) ಮೊದಲ ದಿನದ ಕಾರ್ಯಗಾರವನ್ನು ಉದ್ಘಾಟಿಸಿದರು. ಈ ವೇಳೆ ಸಿದ್ದರಾಮಯ್ಯ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.

ಎಲ್ಲಿದ್ದೆ, ಎಲ್ಲಿಂದ ಬಂದೆ ಎಂದು ಅವರೇ ಹೇಳಲಿ: ಎಚ್‌ಡಿಕೆ ತೀವ್ರ ಆಕ್ರೋಶ

 ಮಾತನಾಡುವವರು ಮಾತನಾಡಲಿ, 2023ರ ಚುನಾವಣೆಯಲ್ಲಿ ನಮ್ಮ ಶಕ್ತಿ ತೋರಿಸುತ್ತೇವೆ ಎಂದು ಹೇಳುವ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ ವಿರುದ್ಧ ಕಿಡಿಕಾರಿದರು.

ಜೆಡಿಎಸ್ ನಿಂದಲೇ ಬೆಳೆದು ಹೋದವರೊಬ್ಬರು ನಮ್ಮ ಪಕ್ಷದ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ನಾವೇನೆಂಬುದನ್ನು ತೋರಿಸುತ್ತೇವೆ ಎಂದು ತಿರುಗೇಟು ನೀಡಿದರು.

PREV
click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ