ಕೆ.ಆರ್.ಪೇಟೆ (ಸೆ.28): ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡರ (KC Narayanagowda) ಆಪ್ತ ಕಾರ್ಯದರ್ಶಿ ದಯಾನಂದ (Dayananda) ಜೆಡಿಎಸ್ (JDS) ಪಕ್ಷಕ್ಕೆ ಸೇರ್ಪಗೊಂಡಿದ್ದಾರೆ.
ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ಜೆಡಿಎಸ್ ವರಿಷ್ಠ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ದಯಾನಂದ ಅವರನ್ನು ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಸ್ವಾಗತಿಸಿದರು. ಪಕ್ಷಕ್ಕೆ ಮುಂದೆ ಒಳ್ಳೆಯ ದಿನಗಳು ಬರಲಿವೆ. ಕಾರ್ಯಕರ್ತರು ನಿರಾಸೆಗೆ ಒ ಳಗಾಗಬಾರದು. ಸಚಿವರಿಂದ ದೂರವಾಗಿ ನಮ್ಮ ಪಕ್ಷಕ್ಕೆ ಬಂದಿರುವ ನೀವು ಪಕ್ಷ ಕ್ಕಾಗಿ ಪ್ರಾಮಾಣಿಕವಾಗಿ ದುಡಿದರೆ ಪಕ್ಷ ನಿಮ್ಮನ್ನು ಗುರುತಿಸುತ್ತದೆ ಎಂದರು. ಕಳೆದೊಂದ ದಶಕದಿಂದ ನಾರಾಯಣಗೌಡರ ಎಲ್ಲ ಯಶಸ್ಸಿನ ಮುಖ್ಯ ಪಾತ್ರಧಾರಿಯಾಗಿದ್ದ ದಯಾನಂದ ಕಳೆದ ಮೂರ್ನಾಲ್ಕು ತಿಂಗಳಿಂದ ಸಚಿವರಿಂದ ಅಂತರ ಕಾಯ್ದುಕೊಂಡಿದ್ದರು.
ಸಚಿವರಿಂದ ಮುನಿಸಿಕೊಂಡು ದೂರವಿದ್ದ ದಯಾನಂದ ಅವರನ್ನು ಜೆಡಿಎಸ್ (JDS) ತೆಕ್ಕೆಗೆ ಕರೆತರಲು ಮನ್ಮುಲ್ ನಿರ್ದೇಶಕಎಚ್ .ಟಿ.ಮಂಜು, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ಟಿಎಪಿಸಿಎಂಎಸ್ ನಿರ್ದೇಶಕ ತೆರ್ನೇನಹಳ್ಳಿ ಬಾಲು ಸೇರಿದಂತೆ ಹಲವರು ಪ್ರಯತ್ನ ನಡೆಸಿ ಪಕ್ಷ ಸೇರ್ಪಡೆಗೆ ಅಗತ್ಯ ವೇದಿಕೆ ಸಿದ್ಧಪಡಿಸಿದರು.
2023ರ ಚುನಾವಣೆಯಲ್ಲಿ ನಮ್ಮ ಶಕ್ತಿ ತೋರಿಸುತ್ತೇವೆ: ಸಿದ್ದರಾಮಯ್ಯಗೆ ಎಚ್‌ಡಿಕೆ ಪರೋಕ್ಷ ಚಾಲೆಂಜ್
ದೂರವಾಣಿಯ ಮೂಲಕ ತಮ್ಮ ಪಕ್ಷ ಸೇರ್ಪಡೆ ಬಗ್ಗೆ ಅಭಿಪ್ರಾಯ ಹಂಚಿ ಕೊಂಡ ದಯಾನಂದ ನಾನು ಸಚಿವ ಕೆ.ಸಿ.ನಾರಾಯಣಗೌಡರು ಜೆಡಿಎಸ್ ಪಕ್ಷ ದಲ್ಲಿದ್ದಾಗ ಮತ್ತು ಆ ನಂತರ ಅವರು ಬಿಜೆಪಿ (BJP) ಸೇರ್ಪಡೆಯಾಗಿ ಮಂತ್ರಿಯಾಗುವ ವರೆಗೂ ಅವರ ನಿಷ್ಠಾವಂತನಾಗಿ ಕೆಲಸ ಮಾಡಿದ್ದೇನೆ. ಸಚಿವರ ವರ್ಚಸ್ಸಿಗೆ ಕುಂದುತರುವ ಯಾವುದೇ ಕೆಲಸ ನಾನು ಮಾಡಲಿಲ್ಲ ಎಂದರು.
ಕಳೆದ ಮೂರು ತಿಂಗಳಿನಿಂದಲೂ ನಾನು ಸಚಿವರ ನಿರ್ದೇಶನಕ್ಕಾಗಿ ಕಾಯು ತ್ತಿದೆ. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ನನ್ನ ಭವಿಷ್ಯ ದ ದೃಷ್ಟಿಯಿಂದ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದೇನೆ. ಇನ್ನು ಮುಂದೆ ನನ್ನ ಪರಿಶ್ರಮ ತಾಲೂಕಿನಲ್ಲಿ ಜೆಡಿಎಸ್ ಸಂಘಟನೆಗೆ ಮೀಸಲಿಡುತ್ತೇನೆ ಎಂದರು.
ಈ ವೇಳೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಮನ್ಮುಲ್ ಅಧ್ಯಕ್ಷ ರಾಮಚಂದ್ರು, ನಿರ್ದೇಶಕ ಎಚ್.ಟಿ.ಮಂಜು, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ಟಿಎಪಿಸಿಎಂ ಎಸ್ (TAPCMS) ನಿರ್ದೇಶಕ ತೆರ್ನೇನಹಳ್ಳಿ ಬಾಲು, ಕಿಕ್ಕೇರಿ ಕಿರಣ್ ಸೇರಿದಂತೆ ಹಲವರು ಪಕ್ಷ ಸೇರ್ಪಡೆಯ ವೇಳೆ ಉಪಸ್ಥಿತರಿದ್ದರು.
ಜೆಡಿಎಸ್‌ಗೆ ಮತ್ತಷ್ಟು ನಾಯಕರು ಸೇರ್ಪಡೆ!
ಸಚಿವರ ಆಪ್ತ ಕಾರ್ಯದರ್ಶಿ ದಯಾನಂದ ಜೆಡಿಎಸ್ ಸೇರ್ಪಡೆಯಾದ ಬೆನ್ನಲ್ಲೆ ಮತ್ತಷ್ಟು ಮುಖಂಡರು ಜೆಡಿಎಸ್ ಸೇರ್ಪಡೆಯಾಗಲು ವೇದಿಕೆ ಸಜ್ಜುಗೊಳಿಸಲಾಗುತ್ತಿದೆ. ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಬಲಗೈ ಬಂಟ ಕಾಂಗ್ರೆಸ್‌ನ ಮನ್ಮುಲ್ ನಿರ್ದೇಶಕ ಡಾಲು ರವಿ, ಸಚಿವ ಕೆ.ಸಿ.ನಾರಾಯಣಗೌಡರ ಆಪ್ತ ಬಳಗದಲ್ಲಿರುವ ಜಿಪಂ ಮಾಜಿ ಸದಸ್ಯರಾದ ಶೀಳನೆರೆ ಅಂಬರೀಶ್, ಅಘಲಯ ಮಂಜು ನಾಥ್ ಜೆಡಿಎಸ್ ಸೇರಲು ಅಣಿಯಾಗುತ್ತಿರುವ ಮಾಹಿತಿ ಹೊರಬಂದಿದೆ. ಡಾಲು ರವಿ ಅವರ ಆರೋಗ್ಯ ವಿಚಾರಿಸುವ ನೆಪದಲ್ಲಿ ಪಟ್ಟಣಕ್ಕೆ ಆಗಮಿಸಿದ ಜೆಡಿಎಸ್ ವರಿಷ್ಠ ಎಚ್.ಡಿ.ರೇವಣ್ಣ ಪುತ್ರ ಸೂರಜ್ ರೇವಣ್ಣ ಡಾಲು ರವಿ ಅವರನ್ನು ಅವರ ನಿವಾ ಸದಲ್ಲಿ ಭೇಟಿಮಾಡಿ ಮಾತುಕತೆ ನಡೆಸಿದ್ದಾರೆ. ಮಾಜಿ ಸ್ಪೀಕರ್ ದಿ.ಕೃಷ್ಣ ಅವರ ಪ್ರಭಲ ಬೆಂಬಲಿಗರಾಗಿದ್ದ ಜಿಪಂ ಮಾಜಿ ಸದಸ್ಯರಾದ ಶೀಳನೆರೆ ಅಂಬರೀಶ್, ಅಘಲಯ ಮಂಜು ನಾಥ್ ಕೃಷ್ಣ ಅವರ ಮಾರ್ಗದರ್ಶನದಲ್ಲಿ ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಯಾಗಿದ್ದರು. ಆನಂತರ ಸಚಿವ ಕೆ.ಸಿ. ನಾರಾ ಯಣಗೌಡರನ್ನು ಬೆಂಬಲಿಸಿ ಬಿಜೆಪಿ ಸೇರ್ಪ ಡೆಯಾಗಿದ್ದರು. ಇವರನ್ನು ಮತ್ತೆ ಮಾತೃ ಪಕ್ಷಕ್ಕೆ ಕರೆತರಲು ವೇದಿಕೆ ಸಜ್ಜುಗೊಳಿಸಲಾಗುತ್ತಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ