ಬೆಂಗಳೂರು ಗಲಭೆಯಲ್ಲಿ ಪಾತ್ರವಿದೆ ಎನ್ನಲಾಗುವ ಎಸ್‌ಡಿಪಿಐ ಬಗ್ಗೆ ಮಹತ್ವದ ಸಾಕ್ಷ್ಯಗಳು ನಮ್ಮ ಬಳಿ ಇವೆ. ನಿಷೇಧಿಸಲು ಬೇಕಾದ ಎಲ್ಲಾ ಸಾಕ್ಷಿ ಇದೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.
ಚಿಕ್ಕಮಗಳೂರು (ಆ.25): ಎಸ್‌ಡಿಪಿಐ ಸಮಾಜಘಾತುಕ ಕೆಲಸ ಮಾಡಿರುವ ಬಗ್ಗೆ ಸಾಕಷ್ಟುಪುರಾವೆಗಳು ಲಭ್ಯವಾಗಿವೆ.
ಹತ್ತಾರು ವರ್ಷಗಳಲ್ಲಿ ರಾಜ್ಯದಲ್ಲಿ ನಡೆದಿರುವ ಘಟನೆಗಳಲ್ಲಿ ಎಸ್‌ಡಿಪಿಐ ವರ್ತನೆ, ಗಲಭೆ ಹುಟ್ಟು ಹಾಕಲು ನಡೆಸಿರುವ ಸಂಚು, ಹತ್ಯೆಗಳ ಹಿಂದಿರುವ ಸಂಚು ಹೀಗೆ ಹಲವು ಪುರಾವೆಗಳು ಲಭ್ಯವಾಗಿವೆ.
ಅವುಗಳ ಆಧಾರದ ಮೇಲೆ ಬ್ಯಾನ್ ಮಾಡಲು ಪೊಲೀಸ್ ಇಲಾಖೆ ವರದಿ ಸಿದ್ಧಪಡಿಸುತ್ತಿದೆ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಮೊದಲು ಜಿನ್ನಾ, ಘೋರಿ, ಘಜ್ನಿ ಮನಸ್ಥಿತಿ ಬದಲಾಗಬೇಕು.
ಯಾರನ್ನು ಬಿಡುವ ಪ್ರಶ್ನೆಯೇ ಇಲ್ಲ, ನಮ್ಮದೇನಿದ್ರು ಏಕ್ ಮಾರ್ ದೋ ತುಕ್ಡ ಕ್ರಮ: ಸಿ.ಟಿ.ರವಿ..
ಒಂದು ಸಂಘಟನೆ ಬ್ಯಾನ್ ಮಾಡಿದ ಕೂಡಲೇ ಮನಸ್ಥಿತಿ ಬದಲಾಗಲ್ಲ. ಮನಸ್ಥಿತಿ ಬದಲಾಗದಿದ್ದರೆ ದೇಶಕಲ್ಲ, ಜಗತ್ತಿಗೆ ನೆಮ್ಮದಿ ಇರೋದಿಲ್ಲ ಎಂದಿದ್ದಾರೆ.
RSS ವಿರುದ್ಧದ ಸಿದ್ದರಾಮಯ್ಯ ಪತ್ರಕ್ಕೆ ಸಚಿವ ಸಿ.ಟಿ. ರವಿ ಕೆಂಡ...
ಬೆಂಗಳೂರು ಗಲಭೆಯಲ್ಲಿಯೂ ಎಸ್‌ಡಿಪಿಐ ಪಾತ್ರವಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದು, ಇದೀಗ ಈ ಸಂಬಂಧ ಮಹತ್ವದ ಸಾಕ್ಷಿಗಳು ಇವೆ ಎಂದು ಹೇಳಿದ್ದಾರೆ.