ಗೌರಿ ಗದ್ದೆಯ ಅವದೂತ ವಿನಯ್ ಗುರೂಜಿ ಅವರ ಜನ್ಮ ದಿನವನ್ನು ಭಕ್ತರು ಆಚರಣೆ ಮಾಡಿದ್ದಾರೆ. ಅವರೋರ್ವ ಅಪರೂಪದ ವ್ಯಕ್ತಿ ಎಂದು ರಂಭಾಪುರಿ ಸ್ವಾಮೀಜಿ ಹೇಳಿದ್ದಾರೆ.
ಬಾಳೆಹೊನ್ನೂರು (ಆ.25): ಅಧ್ಯಾತ್ಮ ಲೋಕದಲ್ಲಿ ಅಪರೂಪದ ವ್ಯಕ್ತಿತ್ವ ಹೊಂದಿದವರು ಅವಧೂತ ವಿನಯ್ ಗುರೂಜಿ ಆಗಿದ್ದಾರೆ ಎಂದು ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಅವರ 31ನೇ ಜನ್ಮ ದಿನೋತ್ಸವ ಅಂಗವಾಗಿ ರಂಭಾಪುರಿ ಪೀಠದಲ್ಲಿ ರಂಭಾಪುರಿ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿ ಶುಭ ಹಾರೈಸಿ ಆಶೀರ್ವಚನ ನೀಡಿ, ಹೆಸರಿಗೆ ತಕ್ಕಂತೆ ವಿನಯ ಸಂಪನ್ನರು, ಸಾತ್ವಿಕ ಸ್ವಭಾವದ ಹೃದಯ ಸಂಪನ್ನರು ಆದ ವಿನಯ್ ಗುರೂಜಿ ದೈವೀ ಉಪಾಸಕರಾಗಿದ್ದಾರೆ ಎಂದರು.
ವಿನಯ್ ಗುರೂಜಿ ಎಂಜಲು ಪ್ರಸಾದ ಟೀಕೆ : ಶರವಣ ಆಕ್ಷೇಪ..
ಆರೋಗ್ಯಪೂರ್ಣ ಸಮಾಜಕ್ಕೆ ಪೂರ್ವಾಚಾರ್ಯರ ಆದರ್ಶ ಚಿಂತನೆಗಳು ಸಕಲರ ಬಾಳಿಗೆ ದಾರಿದೀಪ ಎಂದು ನಂಬಿ ನಡೆಯುವ ಶ್ರೇಷ್ಠ ಸಾಧಕರು ಅವರಾಗಿದ್ದಾರೆ. ಭೂತ, ವರ್ತಮಾನ, ಭವಿಷ್ಯ ವಿದ್ಯಮಾನಗಳ ಬಗ್ಗೆ ಸೂಕ್ಷ್ಮವಾಗಿ ಆಶಿಸುವ ಸಂತ ಶ್ರೇಷ್ಠರು. ಕಲಿಕಾಲದ ಪ್ರಭಾವದಲ್ಲಿ ಧರ್ಮ, ಸಂಸ್ಕೃತಿ ನಾಶಗೊಳ್ಳಬಾರದು ಎಂಬ ಹೃದಯ ಹಂಬಲ ಅವರದ್ದಾಗಿದೆ ಎಂದು ತಿಳಿಸಿದರು.
ಅವಧೂತ ವಿನಯ್ ಗುರೂಜಿ ನಡೆ ಬಗ್ಗೆ ಬಹಿರಂಗ ಆಕ್ಷೇಪ...
ಜನ ಸಮುದಾಯದಲ್ಲಿ ಕರುಣೆ, ಪ್ರೀತಿ, ವಾತ್ಸಲ್ಯ, ಸೌಹಾರ್ದತೆ, ಸಹೋದರತ್ವ, ಸಾಮರಸ್ಯ ವಿಶಾಲ ಮನೋಭಾವ ಬೆಳೆದು ಬರಬೇಕೆಂಬ ಅವರ ಹೆಬ್ಬಯಕೆ ಸರ್ವಕಾಲಕ್ಕೂ, ಸರ್ವರಿಗೂ ಸಂತಸ ಮೂಡಿಸುತ್ತದೆ. ಕಿರಿಯ ವಯಸ್ಸಿನಲ್ಲಿ ಹಿರಿದಾದ ಸಾಧನೆ ಮಾಡಿದ ಭಗೀರಥರು ಅವರಾಗಿದ್ದಾರೆ. ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ, ಮಾರ್ಗದರ್ಶಕರಾಗಿ ಹಲವಾರು ಸಾಮಾಜಿಕ ಚಿಂತನಾ ಕಾರ್ಯಗಳನ್ನು ನೆರವೇರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. 31ನೇ ವಯಸ್ಸಿಗೆ ಪಾದಾರ್ಪಣೆ ಮಾಡಿದ ಶ್ರೀ ವಿನಯ್ ಗುರೂಜಿ ಅವರು ಮುಂದೊಂದು ದಿನ ಜನ್ಮ ಸುವರ್ಣ ಮಹೋತ್ಸವ, ಅಮೃತ ಮಹೋತ್ಸವ ಹಾಗೂ ಶತಮಾನೋತ್ಸವ ಆಚರಿಸಿಕೊಳ್ಳುವ ಸೌಭಾಗ್ಯ ಅವರದ್ದಾಗಲಿ ಎಂದು ಹೇಳಿದರು.
ಭಗವತ್ಪಾದ ಶ್ರೀ ಜಗದ್ಗುರು ರೇಣುಕಾಚಾರ್ಯರು, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಅವರಿಗೆ ಆಯುರಾರೋಗ್ಯ ಸುಖ- ಸಂಪದಗಳನ್ನು ನೀಡಿ ಕಾಪಾಡಲಿ ಎಂದು ರಂಭಾಪುರಿ ಜಗದ್ಗುರು ತಮ್ಮ ಶುಭ ಸಂದೇಶದಲ್ಲಿ ತಿಳಿಸಿದ್ದಾರೆ.