ಆಫ್ಘನ್‌ ವಿದ್ಯಾರ್ಥಿಗಳಿಗೆ ಮೈಸೂರು ವಿವಿ ಅಭಯ

By Kannadaprabha News  |  First Published Aug 18, 2021, 8:45 AM IST
  • ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಕ್ಕೆ ಪಡೆದಿರುವ ಹಿನ್ನೆಲೆ
  • ಆಫ್ಘನ್‌ ವಿದ್ಯಾರ್ಥಿಗಳಿಗೆ ಮೈಸೂರು ವಿವಿ ಅಭಯ 

ಮೈಸೂರು (ಆ.18): ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ ಆತಂಕಿತರಾಗಿರುವ ಆಫ್ಘನ್‌ ವಿದ್ಯಾರ್ಥಿಗಳಿಗೆ ಮೈಸೂರು ವಿವಿ ಅಭಯ ನೀಡಿದೆ. 

ಇದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳು ಧನ್ಯವಾದ ತಿಳಿಸಿದ್ದಾರೆ. ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌, ಕುಲಸಚಿವ ಪ್ರೊ.ಆರ್‌.ಶಿವಣ್ಣ ಅವರನ್ನು ಭೇಟಿ ಮಾಡಿದ ಆಫ್ಘನ್‌ ವಿದ್ಯಾರ್ಥಿಗಳು ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು. ಈ ವೇಳೆ ಅಫ್ಘನ್‌ ವಿದ್ಯಾರ್ಥಿಗಳಿಗೆ ಕುಲಪತಿ ಮತ್ತು ಕುಲಸಚಿವರು ಧೈರ್ಯ ತುಂಬಿದರು.

Latest Videos

undefined

'ಭಾರತವೇ ಸುರಕ್ಷಿತ, ಆಫ್ಘನ್‌ಗೆ ಬರಬೇಡಿ'

ಈ ವೇಳೆ ಪ್ರೊ.ಜಿ. ಹೇಮಂತಕುಮಾರ್‌ ಮಾತನಾಡಿ, ಅಷ್ಘಾನಿಸ್ತಾನದಲ್ಲಿ ಏನಾಗಿದೆಯೋ ಅದನ್ನು ನಿಯಂತ್ರಿಸಲು ನಾವ್ಯಾರು ಅಲ್ಲ. ಆದರೆ, ನಮ್ಮ ವಿದ್ಯಾರ್ಥಿಗಳ ರಕ್ಷಣೆಗೆ ಶಕ್ತಿಮೀರಿ ಪ್ರಯತ್ನ ಮಾಡುತ್ತೇವೆ. ವಿಶ್ವವಿದ್ಯಾನಿಲಯದಲ್ಲಿ ನೀವು ಇರುವವರೆಗೂ ನಾವು ನಿಮ್ಮ ಪೋಷಕರಂತೆ. ನಿಮ್ಮ ಕಷ್ಟಗಳಿಗೆ ನಾವು ಸ್ಪಂದಿಸುತ್ತೇವೆ.

ವೀಸಾ ಅವಧಿ ಮುಗಿಯುವವರೆಗೂ ವಿದ್ಯಾಭ್ಯಾಸದ ಮೇಲೆ ಗಮನಕೊಡಿ. ವೀಸಾ ವಿಸ್ತರಣೆ ಅಗತ್ಯವಿದ್ದರೆ ಸಂಬಂಧಪಟ್ಟವರೊಂದಿಗೆ ನಾವೇ ಚರ್ಚೆ ಮಾಡಿ ತಿಳಿಸುತ್ತೇವೆ ಎಂದು ಅಭಯ ನೀಡಿದರು.

click me!