ನೀರಾವರಿ ಸಲಹಾ ಸಮಿತಿ ಸಭೆ ನಡೆಸದೆ ನಿರ್ಧಾರ|ಮುಂಗಾರು ಬೆಳೆಗೆ ಆನ್ ಆ್ಯಂಡ್ ಆಫ್ ಅಳವಡಿಕೆ| ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಲಕ್ಷ್ಮಣ ಸವದಿ ಹೇಳಿಕೆ|
ಕೊಪ್ಪಳ(ಜು.22): ತುಂಗಭದ್ರಾ ಜಲಾಶಯಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದು ಬಂದಿಲ್ಲವಾದರೂ ಬರುವ ನಿರೀಕ್ಷೆಯಲ್ಲಿ ಜು. 25ರಿಂದ ಎಡದಂಡೆ ನಾಲೆ ಸೇರಿದಂತೆ ವಿವಿಧ ನಾಲೆಗಳಿಗೆ ಪ್ರಸಕ್ತ ಸಾಲಿನ ಮುಂಗಾರು ಬೆಳಗೆ ನೀರು ಬಿಡಲು ನಿರ್ಧರಿಸಲಾಗಿದೆ.
ಕೋವಿಡ್ ಇರುವುದರಿಂದ ನೀರಾವರಿ ಸಲಹಾ ಸಮಿತಿ ಸಭೆಯನ್ನು ನಡೆಸದೆ, ನೀರು ಬಿಡುವ ನಿರ್ಧಾರದ ಪ್ರಕಟಣೆಯನ್ನು ನೀರಾವರಿ ಸಲಹಾ ಸಮಿತಿ ನೀಡಿದೆ. ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಅವರು ಹೇಳಿಕೆಯನ್ನು ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಬಿಡುಗಡೆ ಮಾಡಿದ್ದಾರೆ.
undefined
ತುಂಗಭದ್ರಾ ಡ್ಯಾಂನಿಂದ ಬಲದಂಡೆ ಕೆಳಮಟ್ಟದ ಕಾಲುವೆಗೆ ಜು. 25ರಿಂದ ನ. 30ರ ವರೆಗೂ 700 ಕ್ಯುಸೆಕ್ ನಂತೆ ನೀರು ಹರಿಸಲಾಗುವುದು. ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಜು. 25ರಿಂದ ನ.30ರ ವರೆಗೂ 1280 ಕ್ಯುಸೆಕ್ ನೀರು, ರಾಯ-ಬಸವಣ್ಣ ಕಾಲುವೆಗೆ ಜೂ. 1ರಿಂದ ಡಿ. 10ರ ವರೆಗೂ 250 ಕ್ಯುಸೆಕ್ ನೀರು, ನದಿಗೆ ಪೂರಕವಾಗಿ ಜು. 25ರಿಂದ ನ. 30ರ ವರೆಗೂ 60 ಕ್ಯುಸೆಕ್ ನೀರು ಹರಿಸಲಾಗುವುದು.
ಯಲಬುರ್ಗಾ: ಶಾಸಕ ಹಾಲಪ್ಪ ಆಚಾರ್ ಕಾರ್ ಚಾಲಕನ ಪತ್ನಿಗೆ ಕೊರೋನಾ ಪಾಸಿಟಿವ್
ಇನ್ನೂ ಎಡದಂಡೆ ಮುಖ್ಯ ಕಾಲುವೆ ಮತ್ತು ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಜು. 25ರಿಂದ ನ.30ರ ವರೆಗೂ 4100 ಕ್ಯುಸೆಕ್ ನಂತೆ ನೀರು ಹರಿಸಲು ನಿರ್ಧರಿಸಲಾಗಿದೆ. ಕಾರ್ಖಾನೆಗಳಿಗೆ ಜು. 25ರಿಂದ ನ.30ರ ವರೆಗೂ 60 ಕ್ಯುಸೆಕ್, ಏತ ನೀರಾವರಿ ಯೋಜನೆಗಳಿಗೆ ಜು. 25ರಿಂದ ನ.30ರ ವರೆಗೂ 100 ಕ್ಯುಸೆಕ್‌ನಂತೆ ನೀರು ಹರಿಸಲು ನಿರ್ಧರಿಸಲಾಗಿದೆ.
ಆನ್ ಆ್ಯಂಡ್ ಆಫ್ ಪದ್ಧತಿ ಅಳವಡಿಕೆ
ತುಂಗಭದ್ರಾ ಎಡದಂಡೆ ಕಾಲುವೆಯ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗಕ್ಕೆ ನೀರು ಒದಗಿಸಲು ಕಳೆದ ವರ್ಷ 2019-20ನೇ ಸಾಲಿನಲ್ಲಿ ಆನ್ ಎಂಡ್ ಆಪ್ ಪದ್ಧತಿ ಅನುಸಾರ ಹಿಂಗಾರು ಹಂಗಾಮಿಗೆ ನೀರು ಹರಿಸಲು ನಿರ್ಧಾರ ಮಾಡಲಾಗಿತ್ತು. ಅದರಂತೆ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಆನ್ ಆ್ಯಂಡ್ ಆಫ್ ಪದ್ಧತಿ ಅನುಸಾರ ಕಾಲುವೆಗಳಿಗೆ ನೀರು ಹರಿಸಲು ನಿರ್ಧಾರ ಮಾಡಲಾಗಿದೆ.
ಆನ್ ಆ್ಯಂಡ್ ಆಫ್ ಪದ್ಧತಿಯಂತೆ, ವಿತರಣಾ ಕಾಲುವೆ ಸಂಖ್ಯೆ 1 ರಿಂದ 16, 49,51,52,55,56, ಭಾಗಶಃ ಮುಚ್ಚುವುದು. ಸೆ. 1ರ ಬೆಳಗ್ಗೆ 8ರಿಂದ ಸೆ.4 ರ ಬೆಳಗ್ಗೆ 8ರ ವರೆಗೂ ನೀರು ಹರಿಸುವುದು ಬಂದ್ ಮಾಡಲಾಗುವುದು. ಇನ್ನೂ ಅ. 1ರ ಬೆಳಗ್ಗೆ 8ರಿಂದ ಅ. 4ರ ಬೆಳಗ್ಗೆ 8 ಗಂಟೆ, ನ. 1ರ ಬೆಳಗ್ಗೆ 8ರಿಂದ ನ. 4ರ ಬೆಳಗ್ಗೆ 8 ಗಂಟೆವರೆಗೂ, ಡಿ.1ರ ಬೆಳಗ್ಗೆ 8ರಿಂದ ಡಿ. 4ರ ಬೆಳಗ್ಗೆ 8ರ ವರೆಗೂ ಈ ವಿತರಣಾ ಕಾಲುವೆಗೆ ನೀರು ಹರಿಸುವುದು ಭಾಗಶಃ ಬಂದ್ ಮಾಡಲಾಗುವುದು.
ಇನ್ನೂ ವಿತರಣಾ ಕಾಲುವೆ 17ರಿಂದ 25, 36,37, 38, 40, 41, 42, 44, 45, 46, ಮತ್ತು 48 ಕಾಲುವೆಗಳಿಗೆ ಸೆ. 4ರ ಬೆಳಗ್ಗೆ 8ರಿಂದ ಸೆ. 7ರ ಬೆಳಗ್ಗೆ 8ರ ವರೆಗೂ, ಅ. 4ರ ಬೆಳಗ್ಗೆ 8 ರಿಂದ ಅ.7ರ ಬೆಳಗ್ಗೆ 8ರ ವರೆಗೂ, ನ.4ರ ಬೆಳಗ್ಗೆ 8ರಿಂದ ನ. 7ರ ಬೆಳಗ್ಗೆ 8ರ ವರೆಗೂ, ಡಿ. 4ರ ಬೆಳಗ್ಗೆ 8ರಿಂದ ಡಿ. 7ರ ಬೆಳಗ್ಗೆ 8ರ ವರೆಗೂ ನೀರು ಈ ಕಾಲುವೆಗಳಿಗೆ ನೀರು ಹರಿಸುವುದು ಬಂದ್ ಮಾಡಲಾಗುವುದು.
ಇನ್ನು ವಿತರಣಾ ಕಾಲುವೆ 27 ರಿಂದ 34, 62,63, 65, 66, 69, 71/ಎ, 73, 74, 78, 79, 81, 82, 84ನೇ ಕಾಲುವೆಗಳಿಗೆ ಸೆ.7ರ ಬೆಳಗ್ಗೆ 8 ರಿಂದ ಸೆ.10ರ ಬೆಳಗ್ಗೆ 8 ಗಂಟೆ ವರೆಗೂ, ಅ.7ರ ಬೆಳಗ್ಗೆ 8 ರಿಂದ ಅ.10ರ ಬೆಳಗ್ಗೆ 8ರ ವರೆಗೂ, ನ.7ರ ಬೆಳಗ್ಗೆ 8 ರಿಂದ ನ.10ರ ಬೆಳಗ್ಗೆ 8ರ ವರೆಗೂ, ಡಿ.7ರ ಬೆಳಗ್ಗೆ 8 ರಿಂದ ಡಿ.10ರ ಬೆಳಗ್ಗೆ 8ರ ವರೆಗೂ ನೀರು ಹರಿಸುವುದು ಸ್ಥಗಿತ ಮಾಡಲಾಗುವುದು.
ಇನ್ನೂ ವಿತರಣಾ ಕಾಲುವೆ 76, 85,87, 89, 90,91,92ರ ವರೆಗೂ ಸೆ.10ರ ಬೆಳಗ್ಗೆ 8 ರಿಂದ ಸೆ.13ರ ಬೆಳಗ್ಗೆ 8ರ ವರೆಗೂ, ಅ.10ರ ಬೆಳಗ್ಗೆ 8 ರಿಂದ ಅ.13ರ ಬೆಳಗ್ಗೆ 8ರ ವರೆಗೂ, ನ.10ರ ಬೆಳಗ್ಗೆ 8 ರಿಂದ ನ.13ರ ಬೆಳಗ್ಗೆ 8ರ ವರೆಗೂ, ಡಿ.10ರ ಬೆಳಗ್ಗೆ 8 ರಿಂದ ಡಿ.13ರ ಬೆಳಗ್ಗೆ 8ರ ವರೆಗೂ ಕಾಲುವೆಗೆ ನೀರು ಹರಿಸುವುದು ಸ್ಥಗಿತ ಮಾಡಲು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ನಿರ್ಧರಿಸಿದ್ದಾರೆಂದು ನೀರಾವರಿ ಅಭಿಯಂತರರು ತಿಳಿಸಿದ್ದಾರೆ.