KRS ಒಳ ಹರಿವು 17,750 ಕ್ಯುಸೆಕ್‌, ನೀರಿನ ಮಟ್ಟ ಏರಿಕೆ

By Kannadaprabha NewsFirst Published Aug 7, 2019, 3:21 PM IST
Highlights

ಕಳೆದ ಕೆಲವೊಂದು ದಿನಗಳಿಂದ ಭಾರೀ ಮಲೆಯಾಗುತ್ತಿದ್ದು, ಕೆಆರ್‌ಎಸ್‌ನಲ್ಲೂ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಮಂಗಳವಾರ ಸಂಜೆ ವೇಳೆಗೆ 17, 745 ಕ್ಯುಸೆಕ್‌ ಒಳ ಹರಿವು ಇತ್ತು. ಆಣೆಕಟ್ಟೆಯ ನೀರಿನ ಮಟ್ಟ1 ಅಡಿ ಹೆಚ್ಚಾಗಿದೆ. ಈ ನಡುವೆ ಮಂಡ್ಯ ನಾಲೆಗಳಿಗೆ ಬಿಡುತ್ತಿದ್ದ ನೀರನ್ನು ನಿಲ್ಲಿಸಲಾಗಿದೆ. ತಮಿಳುನಾಡಿಗೆ ಅಂದಾಜು 6250 ಕ್ಯುಸೆಕ್‌ ನೀರನ್ನು ಕಾವೇರಿ ನದಿಯ ಮೂಲಕ ಬಿಡಲಾಗುತ್ತಿದೆ.

ಮಂಡ್ಯ(ಆ.07): ಕೃಷ್ಮ ರಾಜಸಾಗರ ಆಣೆಕಟ್ಟೆಯ ಒಳ ಹರಿವಿನ ಪ್ರಮಾಣ ನಿನ್ನೆ ರಾತ್ರಿಯಿಂದ ಹೆಚ್ಚಾಗಿದೆ. ಮಂಗಳವಾರ ಸಂಜೆ ವೇಳೆಗೆ 17, 745 ಕ್ಯುಸೆಕ್‌ ಒಳ ಹರಿವು ಇತ್ತು. ಆಣೆಕಟ್ಟೆಯ ನೀರಿನ ಮಟ್ಟ1 ಅಡಿ ಹೆಚ್ಚಾಗಿದೆ.

ಈ ನಡುವೆ ಮಂಡ್ಯ ನಾಲೆಗಳಿಗೆ ಬಿಡುತ್ತಿದ್ದ ನೀರನ್ನು ನಿಲ್ಲಿಸಲಾಗಿದೆ. ತಮಿಳುನಾಡಿಗೆ ಅಂದಾಜು 6250 ಕ್ಯುಸೆಕ್‌ ನೀರನ್ನು ಕಾವೇರಿ ನದಿಯ ಮೂಲಕ ಬಿಡಲಾಗುತ್ತಿದೆ. ಭಾಗಮಂಡಲದ ಸುತ್ತಮುತ್ತ ಸಾಕಷ್ಟುಮಳೆಯಾಗುತ್ತಿದ್ದರೂ ನಾಲೆಗಳ ಬಿಡಲಾಗುತ್ತಿದ್ದ ನೀರನ್ನು ನಿಲ್ಲಿಸಿ, ತಮಿಳುನಾಡಿಗೆ ನೀರು ಬಿಡುತ್ತಿರುವ ಸರ್ಕಾರ ನೀತಿಯನ್ನು ರೈತರ ನಾಯಕರು ವಿರೋಧಿಸಿದ್ದಾರೆ.

ಮಂಡ್ಯದಲ್ಲಿ ಮಂಗಳವಾರ ಕೇವಲ ತುಂತುರು ಮಳೆ ಬಂದಿದೆ. ದಿನವಿಡೀ ಮೋಡ ಕವಿದ ವಾತಾವರಣ ಹಾಗೂ ಶೀತ ಗಾಳಿ ಬೀಸಿತ್ತು. ಮಳೆ ನಿರೀಕ್ಷಿತ ಮಟ್ಟಿಗೆ ಬಂದಿಲ್ಲ.

ಭಾರೀ ಮಳೆ: ಘಾಟಿಯಲ್ಲಿ10ಕ್ಕೂ ಹೆಚ್ಚು ಕಡೆ ಭೂ ಕುಸಿತ

ಮಡಿಕೇರಿ, ಭಾಗಮಂಡಲದಲ್ಲಿ ಸಾಕಷ್ಟುಮಳೆಯಾಗುತ್ತಿರುವ ಬಗ್ಗೆ ವರದಿಗಳು ಬಂದಿವೆ. ಈ ನಡುವೆ ಹೇಮಾವತಿ ಆಣೆಕಟ್ಟೆಯಿಂದ 5,880 ಕ್ಯುಸೆಕ್‌ ನೀರು ಕೆಆರ್‌ಎಸ್‌ಗೆ ಬರುತ್ತಿದೆ. ಉಳಿದ 12,000 ಅಧಿತ ಕ್ಯೂಸೆಕ್‌ ನೀರು ಹಾರಂಗಿ ಜಲಾಶಯ ಮತ್ತು ಲಕ್ಷ್ಮಣತೀರ್ಥದಿಂದ ಬರುತ್ತಿದೆ ಎಂದು ಮೂಲಗಳು ಹೇಳಿವೆ.

ಪೂಜೆಗೆ ಬಂದು ಪ್ರವಾಹದಲ್ಲಿ ಸಿಲುಕಿದ ಭಕ್ತರು..!

click me!