ವಿಜಯಪುರ: 5 ರೂ.ಗೆ ಮಣ್ಣು ಮಿಶ್ರಿತ ನೀರು, ಇದು ಶುದ್ಧ ಕುಡಿಯುವ ನೀರಿನ ಘಟಕದ ಅವಾಂತರ..!

By Kannadaprabha NewsFirst Published Jul 17, 2022, 11:36 AM IST
Highlights

ಶುದ್ಧ ನೀರಿನ ಘಟಕದಲ್ಲಿ ನೀರು ತುಂಬಲು ಹಣ ಹಾಕಿದರೆ ನೀರು ಹೊರಬರುತ್ತಿಲ್ಲ. ಹಾಕಿದ ನಾಣ್ಯವೂ ಹೊರ ಬರದೇ ಡಬ್ಬಿಯೊಳಗೆ ಸೇರುತ್ತಿದೆ. 

ಯೂನಿಸ್‌ ಮೂಲಿಮನಿ

ನಾಲತವಾಡ(ಜು.17):  ಜನರ ಆರೋಗ್ಯದ ದೃಷ್ಟಿಯಿಂದ ಕಳೆದೆರಡು ತಿಂಗಳ ಹಿಂದಷ್ಟೇ ನಿರ್ಮಾಣವಾದ ಶುದ್ಧ ನೀರಿನ ಘಟಕದಲ್ಲಿ ನಾಣ್ಯ ಹಾಕಿದರೆ ಶುದ್ಧ ನೀರು ಬರದೇ ರಾಡಿ ನೀರು ಬರುತ್ತಿದೆ. ಪಟ್ಟಣದ 11ನೇ ವಾರ್ಡ್‌ನ ಹಿರೇಮಠ ದೇವಸ್ಥಾನದ ಆವರಣದಲ್ಲಿ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ರಾಡಿ ನೀರು ಸರಬರಾಜು ಆಗುತ್ತಿದ್ದು, ಶುದ್ಧ ಕುಡಿಯುವ ನೀರಿನ ಘಟಕವಿದೆ. ಆದರೆ, ಇದು ಇದ್ದೂ ಉಪಯೋಗಕ್ಕೆ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಅ​ಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿರುದ್ಧ ಜನಾಕ್ರೋಶಕ್ಕೆ ಕಾರಣವಾಗಿದೆ.

Latest Videos

11ನೇ ವಾರ್ಡ್‌ನಲ್ಲಿ ಒಟ್ಟು 1,130 ಜನಸಂಖ್ಯೆ ಇದ್ದು, ಶುದ್ಧ ನೀರಿನ ಘಟಕದ ನೀರನ್ನೇ ಬಳಕೆ ಮಾಡುತ್ತಿದ್ದರು. ಅಲ್ಲದೇ 8, 10, 11ನೇ ವಾರ್ಡ್‌ನ ಜನರು ಇಲ್ಲಿರುವ ಶುದ್ಧ ನೀರನ್ನು ಬಳಕೆ ಮಾಡುತ್ತಿದ್ದಾರೆ. ಸದ್ಯ ಘಟಕದಿಂದ ಮಣ್ಣು ಮಿಶ್ರಿತ ನೀರು ಬರುತ್ತಿರುವುದರಿಂದ ಎಪಿಎಂಸಿಯಲ್ಲಿ ಅಳವಡಿಸಿರುವ ನೀರಿನ ಘಟಕ್ಕೆ ತೆರಳಿ ನೀರು ತರಲೇ ಬೇಕಾದ ಅನಿವಾರ‍್ಯ ಉಂಟಾಗಿದೆ. ಹೀಗಾಗಿ ಶುದ್ಧ ನೀರಿನ ಘಟಕ ಅವಲಂಬಿತ ಈ ಎಲ್ಲ ವಾರ್ಡ್‌ನ ಜನರ ಕೆಂಗಣ್ಣಿಗೆ ಗುರಿಯಾದಂತಾಗಿದೆ.

ವಾಯು ವಿಹಾರ ಮಾಡ್ತಾ ಜಲಾಶಯ ವೀಕ್ಷಿಸಿದ ಸಿದ್ದರಾಮಯ್ಯ

ಹಾಕಿದ್ದ ನಾಣ್ಯವೂ ಇಲ್ಲ, ನೀರೂ ಇಲ್ಲ:

ಶುದ್ಧ ನೀರಿನ ಘಟಕದಲ್ಲಿ ನೀರು ತುಂಬಲು ಹಣ ಹಾಕಿದರೆ ನೀರು ಹೊರಬರುತ್ತಿಲ್ಲ. ಹಾಕಿದ ನಾಣ್ಯವೂ ಹೊರ ಬರದೇ ಡಬ್ಬಿಯೊಳಗೆ ಸೇರುತ್ತಿದೆ. ಮತ್ತೆ ನಾಣ್ಯ ಹಾಕಿದರೇ ಕೇವಲ ಅರ್ಧ ಲೀಟರ್‌ನಷ್ಟು ನೀರು ಬರುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಸಾರ್ವಜನಿಕರ ಉಪಯೋಗಕ್ಕಾಗಿ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಆಳವಡಿಸಿದ ಘಟಕದಲ್ಲಿ ಕಡಿಮೆ ನೀರಿಲ್ಲದೇ ರಾಡಿ ನೀರು ಪಡೆಯಲು ನಾಣ್ಯವನ್ನು ಕಳೆದುಕೊಳ್ಳಲೇ ಬೇಕಾಗಿರುವುದು ಮುಖ್ಯಾಧಿ​ಕಾರಿಗಳ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ.

ಮನವಿಗೆ ಸ್ಪಂದಿಸದ ಅಧಿಕಾರಿ:

11ನೇ ವಾರ್ಡ್‌ನ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಅಳವಡಿಸಿದ್ದ ಘಟಕ ನಿರ್ವಹಣೆ ಕೊರತೆಯಿಂದ ಒಂದಲ್ಲ ಒಂದು ಸಮಸ್ಯೆ ಘಟಕದಲ್ಲಿ ಎದ್ದು ಕಾಣಿಸುತ್ತಿದೆ. ಹಣ ಹಾಕಿದ ನಂತರವೂ ನೀರು ಬರುತ್ತಿಲ್ಲ. .5 ನಾಣ್ಯಕ್ಕೆ 20 ಲೀಟರ್‌ ನೀರು ಬರಬೇಕಿದ್ದ ಘಟಕದಲ್ಲಿ 2 ಲೀಟರ್‌ ಅಥವಾ 1 ಲೀಟರ್‌ ನೀರು ಬರುತ್ತಿದೆ. ಘಟಕದಲ್ಲಿ ತಾಂತ್ರಿಕ ತೊಂದರೆ ಇದೆ. ಇದನ್ನು ಸರಿಪಡಿಸಿ ಎಂದು ಪಪಂ ಅಧಿ​ಕಾರಿ ಹಾಗೂ ಸಿಬ್ಬಂದಿಗೆ ತಿಳಿಸಿದರೂ ಬೇಜವಾಬ್ದಾರಿ ವರ್ತನೆ ತೋರುತ್ತಿದ್ದಾರೆ. ಮಳೆಗಾಲ ಪ್ರಾರಂಭವಾಗಿದ್ದರಿಂದ ನದಿಯಲ್ಲಿ ಹೊಸ ನೀರು ಬರುತ್ತಿರುವ ಕಾರಣ ಅದನ್ನು ಕುಡಿದರೇ ಕಾಯಿಲೆ ಬರುವ ಲಕ್ಷಣವಿದ್ದು, ಕೂಡಲೇ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೊಳಿಸಬೇಕು ಎಂಬುವುದು ಸ್ಥಳೀಯರ ಆಗ್ರಹ.

ಆಲಮಟ್ಟಿ ಡ್ಯಾಂನಿಂದ 75,000 ಕ್ಯುಸೆಕ್‌ ನೀರು ಬಿಡುಗಡೆ: ನದಿಪಾತ್ರದ ಜನರಲ್ಲಿ ಮುಂಜಾಗೃತೆಗೆ ಸೂಚನೆ

ಶುದ್ಧ ನೀರಿನ ಘಟಕದಲ್ಲಿ ನೀರು ತುಂಬಲು ನಾಣ್ಯ ಹಾಕಿದರೂ ಸಹ ನೀರು ಬರುವುದಿಲ್ಲ. ನೀರು ತುಂಬಲು ಬಂದವರು .20 ಕೈಯಿಂದ ಕಳೆದುಕೊಳ್ಳಬೇಕು. ಅಷ್ಟಾದರು ಸರಿಯಾಗಿ ನೀರು ಬರುವುದಿಲ್ಲ. ನಾನು 2 ಬಾರಿ ನಾಣ್ಯ ಹಾಕಿದ ನಂತರ 1 ಲೀಟರ್‌ ನೀರು ಬಂದಿದೆ. ಅದು ಕೂಡ ರಾಡಿ ನೀರು. ಇದರ ಬಗ್ಗೆ ಮುಖ್ಯಾ​ಧಿಕಾರಿಗಳಿಗೆ ದೂರು ನೀಡಿದರು ಸಹ ಸರಿಯಾಗಿ ಸ್ಪಂದಿಸುತಿಲ್ಲ ಅಂತ ಸ್ಥಳೀಯ ನಿವಾಸಿ ಈಶ್ವರ ಡಿಗ್ಗಿ, ಹೇಳಿದ್ದಾರೆ. 

ನೀರಿನ ಘಟಕದಲ್ಲಿ ತಾಂತ್ರಿಕ ತೊಂದರಿಯಾಗಿ ಸುಮಾರು ದಿನಗಳಾಗಿವೆ. ಹಣ ಹಾಕಿದರು ನೀರು ಬರುತಿಲ್ಲ ಎಂದು ನಿವಾಸಿಗಳು ಸಾಕಷ್ಟು ಬಾರಿ ದೂರು ನೀಡಿದ್ದಾರೆ. ಇನ್ನು ಈ ರೀತಿ ವಾರ್ಡ್‌ನಲ್ಲಿ ಹತ್ತು ಹಲವಾರು ಸಮಸ್ಯಗಳಿವೆ. ನಾವು ಯಾರು ಮುಂದೇ ಹೇಳಬೇಕು ಎಂದು ತಿಳಿಯದಂತಾಗಿದೆ. ಮುಖ್ಯಾ​ಧಿಕಾರಿಗಳಿಗೆ ಹೇಳಿದರೇ ಇನ್ನು ನೀವು ಅ​ಧಿಕೃತ ಸದಸ್ಯರಾಗಿಲ್ಲ. ಸದಸ್ಯರಾದ ಮೇಲೆ ನನಗೆ ಹೇಳಿ ಎನ್ನುತಿದ್ದಾರೆ. ಇನ್ನು ಪಪಂ ಆಡಳಿತಾ​ಧಿಕಾರಿಗಳಿಗೆ ಸಭೆ ಮಾಡಿ ಎಂದು ಲಿಖಿತವಾಗಿ ಮನವಿ ನೀಡಿದರೂ ಕೂಡ ಸಭೆ ನಡೆಸುತಿಲ್ಲ. ನಾಲತವಾಡ ಪಪಂಗೆ ಯಾರೂ ದಿಕ್ಕು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಅಂತ 11ನೇ ವಾರ್ಡ್‌ ಸದಸ್ಯ ಅಂಬ್ರಪ್ಪ ಸೀರಿ ತಿಳಿಸಿದ್ದಾರೆ.  

click me!