ಕೃಷ್ಣರಾಜ ಸಾಗರ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ.
ಮಂಡ್ಯ (ಆ.17): ವಿಶ್ವವಿಖ್ಯಾತ ಕೃಷ್ಣರಾಜಸಾಗರ ಜಲಾಶಯ ಸೋಮವಾರ ಬೆಳಗ್ಗೆ ವೇಳೆಗೆ ಸಂಪೂರ್ಣ ಭರ್ತಿಯಾಗಲಿದೆ.
ಕಳೆದ ವರ್ಷಕ್ಕಿಂತ ಒಂದು ದಿನ ವಿಳಂಬವಾಗಿ ಜಲಾಶಯ ತುಂಬುತ್ತಿದೆ. ಆ.21ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಾಗಿನ ಸಮರ್ಪಿಸಲಿದ್ದಾರೆ. ಕೆಆರ್‌ಎಸ್ ಜಲಾಶಯದ ಗರಿಷ್ಠ ಮಟ್ಟ124.80 ಅಡಿ ಆಗಿದೆ. ಪ್ರಸ್ತುತ ಅಣೆಕಟ್ಟೆಯ ನೀರಿನ ಮಟ್ಟ124.70 ಅಡಿ ತಲುಪಿದೆ.
ನಾರಾಯಣಪುರ ಡ್ಯಾಂ ನೀರು ಬಿಡುಗಡೆ; ಕೃಷ್ಣಾನದಿ ತೀರದ ಜನರಿಗೆ ಪ್ರವಾಹ ಆತಂಕ...
ಅಣೆಕಟ್ಟು ಭರ್ತಿಯಾಗಲು 0.10 ಅಡಿ ಮಾತ್ರ ಬಾಕಿ ಇದೆ. ಸೋಮವಾರ ಬೆಳಗ್ಗೆ ವೇಳೆಗೆ ಗರಿಷ್ಠ ಮಟ್ಟತಲುಪಲಿದೆ. ಅಣೆಕಟ್ಟೆಗೆ 8758 ಕ್ಯು. ನೀರು ಹರಿದುಬರುತ್ತಿದ್ದರೆ ಜಲಾಶಯದಿಂದ 5318 ಕ್ಯು. ನೀರನ್ನು ಹೊರಬಿಡಲಾಗುತ್ತಿದೆ.
ಜಲಾಶಯದಲ್ಲಿ ಹಾಲಿ 49.312 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. 2019ರಲ್ಲಿ ಆ.16ರಂದು ಸಂಪೂರ್ಣ ಭರ್ತಿಯಾಗಿತ್ತು. ಈ ವರ್ಷ ಒಂದು ದಿನ ತಡವಾಗಿ ಅಣೆಕಟ್ಟು ಭರ್ತಿಯಾಗುತ್ತಿದೆ.