ಕಲಬುರಗಿಯಲ್ಲಿ ಹವಾಮಾನ ವೈಪರಿತ್ಯ: ಆಗಸದಲ್ಲೇ ಸುತ್ತಾಡಿ ವಾಪಸ್‌ ಹೋದ ಎರಡು ವಿಮಾನಗಳು..!

By Suvarna News  |  First Published Aug 16, 2020, 3:52 PM IST

ಬೆಂಗಳೂರು-ಕಲಬುರಗಿ ನಡುವಿನ ಅಲಯನ್ಸ್ ಏರ್ ವಿಮಾನ ಹೈದ್ರಾಬಾದ್‌ಗೆ ಡೈವರ್ಟ್| ಸ್ಟಾರ್ ಏರ್ ವಿಮಾನ ಮರಳಿ ಬೆಂಗಳೂರಿಗೆ ಡೈವರ್ಟ್| ಕಲಬುರಗಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗದ ಎರಡು ವಿಮಾನಗಳು| ಕಲಬುರಗಿಯಲ್ಲಿ ಮೋಡ ಕವಿದ ವಾತಾವರಣ ಮತ್ತು ಜಿಟಿಜಿಟಿ ಮಳೆ| 


ಕಲಬುರಗಿ(ಆ.16): ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಎರಡು ವಿಮಾನಗಳು ಲ್ಯಾಂಡ್‌ ಅಗದೆ ಆಗಸದಲ್ಲೇ ಸುತ್ತಾಡಿ ವಾಪಸ್‌ ಹೋದ ನಗರದಲ್ಲಿ ಇಂದು(ಭಾನುವಾರ) ನಡೆದಿದೆ. 

"

Tap to resize

Latest Videos

undefined

ಹವಾಮಾನ ವೈಪರಿತ್ಯದಿಂದ ಬೆಂಗಳೂರು-ಕಲಬುರಗಿ ನಡುವಿನ ಅಲಯನ್ಸ್ ಏರ್ ವಿಮಾನವನ್ನ ಹೈದರಾಬಾದ್‌ಗೆ  ಡೈವರ್ಟ್, ಮತ್ತೊಂದು ಸ್ಟಾರ್ ಏರ್ ವಿಮಾನವನ್ನ ಮರಳಿ ಬೆಂಗಳೂರಿಗೆ ಕಳಹಿಸಲಾಗಿದೆ ಎಂದು ತಿಳಿದು ಬಂದಿದೆ.

ಒಂದೂವರೆ ಗಂಟೆ ಆಕಾಶದಲ್ಲೇ ಸುತ್ತಾಡಿ ಲ್ಯಾಂಡ್‌ ಆದ ಅನಂತ್ ಕುಮಾರ್ ಹೆಗಡೆ ಇದ್ದ ವಿಮಾನ

ಕಲಬುರಗಿ ನಗರದಲ್ಲಿ ಇಂದು ಮೋಡ ಕವಿದ ವಾತಾವರಣ ಮತ್ತು ಜಿಟಿಜಿಟಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ  ವಿಮಾನ ಲ್ಯಾಂಡಿಂಗ್‌ಗೆ ತೊಂದರೆ ಉಂಟಾಗಿದೆ. ಸುಮಾರು ನಲವತ್ತು ನಿಮಿಷ ಕಲಬುರಗಿ ಸುತ್ತಮುತ್ತ ಹಾರಾಡಿದ ವಿಮಾನಗಳು ಒಂದು ವಿಮಾನ ಹೈದರಾಬಾದ್‌ ಹಾಗೂ ಬೆಂಗಳೂರಿಗೆ ತೆರಳಿವೆ.
 

click me!