ಕೋಲಾರ : ಉಲ್ಟಾ ಧ್ವಜಾರೋಹಣ ಮಾಡಿದ ಮುಖಂಡರು

Suvarna News   | Asianet News
Published : Aug 16, 2020, 03:39 PM IST
ಕೋಲಾರ : ಉಲ್ಟಾ ಧ್ವಜಾರೋಹಣ ಮಾಡಿದ ಮುಖಂಡರು

ಸಾರಾಂಶ

ಕೋಲಾರದ ರೇಷ್ಮೆ ವರ್ತಕರ ಸಂಘದಿಂದ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಉಲ್ಟಾ ಧ್ವಜಾರೋಹಣ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೊಟೊ ವೈರಲ್ ಆಗಿದೆ.

ಕೋಲಾರ (ಆ.16): ಕೋಲಾರದಲ್ಲಿ ರೇಷ್ಮೆ ವರ್ತಕರ ಸಂಘದಿಂದ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಉಲ್ಟಾ ಧ್ವಜಾರೋಹಣ ಮಾಡಲಾಗಿದೆ..

ಕೋಲಾರ ನಗರದ ಕುವೆಂಪು ಪಾರ್ಕಿನಲ್ಲಿ ನಡೆದ ಧ್ವಜಾರೋಹಣದ ವೇಳೆ ಧ್ವಜವನ್ನು ಉಲ್ಟಾ ಹಾರಿಸಲಾಗಿದೆ.ಇದೀಗ ಈ ಘಟನೆಯ ಫೊಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಉಲ್ಟಾ ಆಗಿಯೇ ಧ್ವಜವನ್ನು ಹಿಡಿದು ವರ್ತಕರ ಸಂಘದ ಮುಖಂಡರು ಫೊಟೊಗೂ ಫೋಸ್ ಕೊಟ್ಟಿದ್ದಾರೆ. ಇದೀಗ  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಉಡುಪಿಯಲ್ಲಿ ಗಮನ ಸೆಳೆದ ಪುಟ್ಟ ಪೊಲೀಸಮ್ಮ!...

ಶನಿವಾರ ಧ್ವಜಾರೋಹಣದ ವೇಳೆ ಉಲ್ಟಾ ಧ್ವಜ ಹಾರಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.  ಧ್ವಜಾರೋಹಣದ ವೇಳೆ ಸ್ಥಳದಲ್ಲಿ ರೇಷ್ಮೆ ವರ್ತಕರ ಸಮಘದ  ಅಧ್ಯಕ್ಷ ಶಬೀರ್ ಪಾಷಾ, ನಗರಸಭೆ ಕೌನ್ಸಿಲರ್ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಹಾಜರಿದ್ದರು.

PREV
click me!

Recommended Stories

ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ