ಕಲಬುರಗಿ: ಸೇಡಂನಲ್ಲಿ ಭಾರೀ ಮಳೆ, ಪೊಲೀಸ್‌ ಠಾಣೆಗೆ ಮಳೆ ನೀರು ದಿಗ್ಬಂಧನ..!

By Girish Goudar  |  First Published Jun 7, 2024, 7:55 PM IST

ಠಾಣೆ ಒಳಗೆ, ಹೊರಗೆ ಹೋಗಲು ಪೊಲೀಸ್ ಸಿಬ್ಬಂದಿ ಪರದಾಟ ನಡೆಸಿದ್ದಾರೆ. ಪ್ರತಿ ಬಾರಿ ಭಾರೀ ಮಳೆ ಬಂದಾಗ ಠಾಣೆಗೆ ಮಳೆ ನೀರು ನುಗ್ಗುತ್ತದೆ. ತಗ್ಗು ಪ್ರದೇಶದಲ್ಲಿರುವ ಕಾರಣ ಮಳೆ ಬಂದಾಗ ನೀರು ನುಗ್ಗಿ ಪೊಲೀಸರಿಗೆ ಸಮಸ್ಯೆ ಉಂಟು ಮಾಡುತ್ತದೆ. 

ಸೇಡಂ(ಜೂ.07): ಧಾರಾಕಾರ ಮಳೆಗೆ ಪೊಲೀಸ್‌ ಠಾಣೆಯೊಳಗೆ ನೀರು ನುಗ್ಗಿದ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಇಂದು(ಶುಕ್ರವಾರ) ನಡೆದಿದೆ. ಪಟ್ಟಣದಲ್ಲಿ ಒಂದು ಗಂಟೆಗಳ ಕಾಲ ವರುಣ ಅಬ್ಬರಿಸಿ, ಠಾಣೆಯಲ್ಲೇ ಪೊಲೀಸರಿಗೆ ಮಳೆ ನೀರು ದಿಗ್ಬಂಧನ ಹಾಕಿದೆ. 

ವರುಣಾರ್ಭಟಕ್ಕೆ ಠಾಣೆ ಆವರಣ ಮಾತ್ರವಲ್ಲದೇ ಠಾಣೆ ಒಳಗೂ ನೀರು ನುಗ್ಗಿದೆ. ಪೊಲೀಸ್ ಸಿಬ್ಬಂದಿ ನೀರು ಹೊರ ಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ. 

Tap to resize

Latest Videos

undefined

ಧಾರವಾಡದಲ್ಲಿ ವರುಣನ ಅಬ್ಬರ: ಹೊಂಡದಂತಾದ ರಸ್ತೆಗಳು, ನೀರಲ್ಲೇ ನಿಂತ ವಾಹನಗಳು

ಠಾಣೆ ಒಳಗೆ, ಹೊರಗೆ ಹೋಗಲು ಪೊಲೀಸ್ ಸಿಬ್ಬಂದಿ ಪರದಾಟ ನಡೆಸಿದ್ದಾರೆ. ಪ್ರತಿ ಬಾರಿ ಭಾರೀ ಮಳೆ ಬಂದಾಗ ಠಾಣೆಗೆ ಮಳೆ ನೀರು ನುಗ್ಗುತ್ತದೆ. ತಗ್ಗು ಪ್ರದೇಶದಲ್ಲಿರುವ ಕಾರಣ ಮಳೆ ಬಂದಾಗ ನೀರು ನುಗ್ಗಿ ಪೊಲೀಸರಿಗೆ ಸಮಸ್ಯೆ ಉಂಟು ಮಾಡುತ್ತದೆ. 

click me!