ಉತ್ತರಕನ್ನಡ: ಬರಿದಾಗುತ್ತಿರುವ ಭಟ್ಕಳದ ಕಡವಿನಕಟ್ಟೆ ಡ್ಯಾಂ

Published : May 17, 2023, 01:05 PM ISTUpdated : May 17, 2023, 01:08 PM IST
ಉತ್ತರಕನ್ನಡ: ಬರಿದಾಗುತ್ತಿರುವ ಭಟ್ಕಳದ ಕಡವಿನಕಟ್ಟೆ ಡ್ಯಾಂ

ಸಾರಾಂಶ

ಭಟ್ಕಳ ಪಟ್ಟಣದ ಕುಡಿಯುವ ನೀರು ಸರಬರಾಜಿನ ಏಕೈಕ ಮೂಲವಾಗಿರುವ ಈ ಡ್ಯಾಂನಲ್ಲಿ ಏಪ್ರಿಲ್‌ ಮೊದಲ ವಾರದಲ್ಲಿಯೇ ನೀರಿನ ಒಳಹರಿವು ಕಡಿಮೆಯಾಗಿ, ತಳದಲ್ಲಿನ ಹೂಳು ಕಾಣಿಸುತ್ತಿದೆ. ಶೀಘ್ರದಲ್ಲಿ ಮಳೆ ಬರದೇ ಇದ್ದಲ್ಲಿ ಕಷ್ಟವಾಗಲಿದೆ. ಡ್ಯಾಂನಿಂದ ಹಲವಾರು ವರ್ಷಗಳ ಕಾಲ ಸಾವಿರಾರು ಎಕರೆ ಕೃಷಿ ಜಮೀನಿಗೆ ನೀರುಣಿಸಲು ಅನುಕೂಲವಾಗಿದೆ. 

ರಾಘವೇಂದ್ರ ಹೆಬ್ಬಾರ

ಭಟ್ಕಳ(ಮೇ.17):  ಹೆಚ್ಚುತ್ತಿರುವ ಬಿಸಿಲ ತಾಪಮಾನಕ್ಕೆ ಕಡವಿನಕಟ್ಟೆ ಡ್ಯಾಂನಲ್ಲಿ ನೀರು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಇದೇ ರೀತಿಯ ತಾಪಮಾನ ಮುಂದುವರಿದರೆ ಪಟ್ಟಣ ಮತ್ತಿತರ ಭಾಗಗಳಲ್ಲಿ ಕುಡಿಯುವ ನೀರಿಗೆ ತೀರಾ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ.

ಪಟ್ಟಣದ  ಕುಡಿಯುವ ನೀರು ಸರಬರಾಜಿನ ಏಕೈಕ ಮೂಲವಾಗಿರುವ ಈ ಡ್ಯಾಂನಲ್ಲಿ ಏಪ್ರಿಲ್‌ ಮೊದಲ ವಾರದಲ್ಲಿಯೇ ನೀರಿನ ಒಳಹರಿವು ಕಡಿಮೆಯಾಗಿ, ತಳದಲ್ಲಿನ ಹೂಳು ಕಾಣಿಸುತ್ತಿದೆ. ಶೀಘ್ರದಲ್ಲಿ ಮಳೆ ಬರದೇ ಇದ್ದಲ್ಲಿ ಕಷ್ಟವಾಗಲಿದೆ. ಡ್ಯಾಂನಿಂದ ಹಲವಾರು ವರ್ಷಗಳ ಕಾಲ ಸಾವಿರಾರು ಎಕರೆ ಕೃಷಿ ಜಮೀನಿಗೆ ನೀರುಣಿಸಲು ಅನುಕೂಲವಾಗಿದೆ. ಈ ಡ್ಯಾಂ ನಿರ್ಮಿಸಿರುವ ಉದ್ದೇಶವೇ ಕೃಷಿ ಚಟುವಟಿಕೆಗೆ ನೀರು ನೀಡುವುದಾಗಿದ್ದು, ನಂತರದ ದಿನಗಳಲ್ಲಿ ಭಟ್ಕಳ ಪಟ್ಟಣ, ಶಿರಾಲಿ, ಜಾಲಿ, ಮಾವಿನಕುರ್ವೆ ಮುಂತಾದ ಕಡೆ ಕುಡಿಯಲು ಪೂರೈಸಲಾಯಿತು.

'ಕೈ' ಗೆದ್ದ ಬೆನ್ನಲ್ಲೇ ಗಲಾಟೆ ಶುರು: ಬಿಜೆಪಿ ಮುಖಂಡನ ಮನೆಗೆ ಹೊಕ್ಕು ಕಾಂಗ್ರೆಸ್ಸಿಗರಿಂದ ಹಲ್ಲೆ

ಈಗ ತುಂಬಿದ ಹೂಳಿನಿಂದಾಗಿ ಬೇಸಿಗೆಯಲ್ಲಿ ನೀರು ಸಹಜವಾಗಿ ಕಡಿಮೆಯಾಗುತ್ತದೆ. ಈ ಡ್ಯಾಂ ನಿರ್ಮಾಣವಾದಾಗಿನಿಂದ ಇಂದಿನ ತನಕವೂ ಕೂಡಾ ಕೃಷಿಕರಿಗೆ ಶಿರಾಲಿ, ಸಾರದಹೊಳೆ, ಬೇಂಗ್ರೆ ಇತ್ಯಾದಿಯಾಗಿ ಸಾವಿರಾರು ಎಕರೆ ಭೂಮಿಗೆ ನೀರುಣಿಸುತ್ತಾ ರೈತರ ಪಾಲಿಗೆ ಸಂಜೀನಿಯಾಗಿತ್ತು. ಮಳೆಗಾಲದ ನಂತರ ಕೃಷಿಕರು ಈ ನೀರನ್ನೇ ನಂಬಿ ಎರಡು ಬೆಳೆ ಬೆಳೆಯುತ್ತಿದ್ದರು. ಈಗ ನೀರಿನ ಹರಿವು ಸರಿಯಾಗಿ ಇಲ್ಲದೇ ಇರುವುದರಿಂದ ಒಂದೇ ಬೆಳೆಗೆ ಕೃಷಿಕರು ತೃಪ್ತಿಪಟ್ಟು ಕೊಳ್ಳುವಂತಾಗಿದೆ.

ಮೊದಲು ಭಟ್ಕಳ ಪಟ್ಟಣಕ್ಕೆ ಇಲ್ಲಿಂದ ನೀರು ಸರಬರಾಜು ಮಾಡಲು ರೈತರ ವಿರೋಧಿಸಿದರು. ಆದಾಗ್ಯೂ ಬೃಹತ್‌ ಪಂಪ್‌ ಹಾಕಲಾಯಿತು. ಬಳಿಕ ಶಿರಾಲಿ ಮತ್ತು ಮಾವಿನಕುರ್ವೆ ಗ್ರಾಮ ಪಂಚಾಯಿತಿ, ಜಾಲಿ ಪಟ್ಟಣ ಪಂಚಾಯಿತಿಗೂ ಕುಡಿಯುವ ನೀರು ಸರಬರಾಜು ಮಂಜೂರಿ ಮಾಡಿಸಿ ಇಲ್ಲಿಂದಲೇ ನೀರು ಸರಬರಾಜು ಮಾಡಲಾಯಿತು. ಆದರೆ, ಡ್ಯಾಂನಲ್ಲಿ ಹೂಳು ತೆಗೆಯಿಸಲು ಮತ್ತು ಹೆಚ್ಚಿನ ನೀರಿನ ಸಂಗ್ರಹಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಲು ಯಾರೂ ಮುಂದಾಗದೇ ಇರುವುದು ವಿಪರ್ಯಾಸ.

ಡ್ಯಾಂನ ಹೂಳನ್ನು ಪೂರ್ಣ ಪ್ರಮಾಣದಲ್ಲಿ ತೆಗೆಯಿಸಿದರೆ ಮಾತ್ರ ನೀರಿನ ಸಂಗ್ರಹ ಹೆಚ್ಚಿಸಬಹುದಾಗಿದೆ. ಬೇಸಿಗೆಯಲ್ಲಿ ನೀರು ಕಡಿಮೆಯಾಗುವುದರಿಂದ ಕುಡಿಯುವ ನೀರಿಗಾಗಿ ಇದನ್ನು ಅವಲಂಬಿಸಿರುವವರು ಈಗಿಂದಲೇ ಜಾಗೃತೆ ವಹಿಸುವುದು ತೀರಾ ಅಗತ್ಯವಾಗಿದೆ.

Karnataka Election Results 2023: ಉತ್ತರ ಕನ್ನಡದಲ್ಲಿ ಕೈ ಹಿಡಿದ ಮತದಾರರು, ಬಿಜೆಪಿಗೆ ಬರೀ ಇಬ್ಬರು!

ಭಟ್ಕಳ ಪುರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ಎರಡು ದಿನಕ್ಕೊಮ್ಮೆ ಕುಡಿಯುವ ನೀರು ಬಿಡಲಾಗುತ್ತದೆ. ಬಿಸಿಲತಾಪಮಾನ ಹೀಗೆ ಮುಂದುವರಿದರೆ ಡ್ಯಾಂನಲ್ಲಿ ನೀರಿನ ಹರಿವು ಕಡಿಮೆಯಾಗುವ ಸಾಧ್ಯತೆ ಇದ್ದು, ಪಟ್ಟಣದಲ್ಲಿ ವಾರಕ್ಕೊಮ್ಮೆ ನೀರು ಬಿಡುವ ಪ್ರಮೇಯ ಬಂದರೂ ಬರಬಹುದು.

ಕಡವಿನಕಟ್ಟೆ ಡ್ಯಾಂನಿಂದ ಸ್ವಲ್ಪ ಕೆಳಗಡೆಯಲ್ಲಿ ಇನ್ನೊಂದು ಡ್ಯಾಂ ನಿರ್ಮಾಣ ಮಾಡಿದರೆ ಮಳೆಗಾಲದಲ್ಲಿ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಸಂಗ್ರಹ ಮಾಡಿಕೊಂಡು ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಕುರಿತು ಸಂಬಂಧಪಟ್ಟಇಲಾಖೆ ಮತ್ತು ಸರ್ಕಾರ ಗಮನ ಹರಿಸಬೇಕಿದೆ. ಕಡವಿನಕಟ್ಟೆ ಡ್ಯಾಂ ಬಗ್ಗೆ ನಿರ್ಲಕ್ಷ್ಯ ಮುಂದುವರಿದಲ್ಲಿ ವರ್ಷದಿಂದ ವರ್ಷಕ್ಕೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚು ತಲೆದೋರಬಹುದಾಗಿದೆ.

PREV
Read more Articles on
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ