ಹಾಸನ: ನೀರು ತುಂಬಿ ಭೂಕುಸಿತ..!

By Kannadaprabha NewsFirst Published Jul 24, 2019, 2:05 PM IST
Highlights

ತಾಲೂಕಿನಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಒಂದಾಗಿರುವ ವನಗೂರು ಗ್ರಾಮದ ಸಾರ್ವಜನಿಕ ಶೌಚಾಲಯಕ್ಕೆ ನಿರ್ಮಾಣ ಮಾಡಿರುವ ಗುಂಡಿಯಲ್ಲಿ ಜಲ ಉತ್ಪತ್ತಿಯಾಗುತ್ತಿದೆ. ಪರಿಣಾಮವಾಗಿ ಈ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದೆ.

ಹಾಸನ(ಜು.24): ಸಕಲೇಶಪುರ ಸಾರ್ವಜನಿಕ ಶೌಚಾಲಯದ ಗುಂಡಿಯಲ್ಲಿ ನೀರು ತುಂಬಿದ ಪರಿಣಾಮ ಭೂ ಕುಸಿತವಾಗಿರುವ ಘಟನೆ ತಾಲೂಕಿನ ವನಗೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ತಾಲೂಕಿನಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಒಂದಾಗಿರುವ ವನಗೂರು ಗ್ರಾಮದ ಸಾರ್ವಜನಿಕ ಶೌಚಾಲಯಕ್ಕೆ ನಿರ್ಮಾಣ ಮಾಡಿರುವ ಗುಂಡಿಯಲ್ಲಿ ಜಲ ಉತ್ಪತ್ತಿಯಾಗುತ್ತಿದೆ.

ಕಳಪೆ ಕಾಮಗಾರಿ: 2 ಎಕರೆ ಗದ್ದೆಯ ಭೂ ಕುಸಿತ

ಮಣ್ಣು ಸಡಿಲಗೊಂಡು ಭೂಕುಸಿತ:

ಈ ಗುಂಡಿಯಲ್ಲಿ ಶೌಚದ ಜೊತೆಗೆ ಮಳೆ ನೀರು ಸಹ ತುಂಬುತ್ತಿರುವುದರಿಂದ ಮಣ್ಣು ಸಡಿಲಗೊಂಡು ಭೂಕುಸಿತ ಉಂಟಾಗಿ ಶೌಚಾಲಯದ ಪಕ್ಕದ ಕೆಳ ಭಾಗದಲ್ಲಿರುವ ನರೇಂದ್ರ ಎಂಬುವರ ಬಾವಿ ಹಾಗೂ ಬಾವಿಗೆ ಅಳವಡಿಸಿರುವ ಮೋಟಾರ್‌ ಸಂಪೂರ್ಣವಾಗಿ ಮಣ್ಣಿನಿಂದ ಮುಚ್ಚಿ ಹೋಗಿದ್ದು, ತೊಂದರೆ ಅನುಭವಿಸುವಂತಾಗಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಳೆದ ಬಾರಿಯ ಮಳೆಗಾಲದಲ್ಲೆ ಶೌಚಾಲಯದ ಪಕ್ಕ ತಡೆಗೋಡೆ ನಿರ್ಮಾಣ ಮಾಡುವಂತೆ ಜಿಪಂಗೆ ಮನವಿ ಮಾಡಿದರೂ ಸಹ ತಡೆಗೋಡೆ ನಿರ್ಮಾಣವಾಗದ ಕಾರಣ ಭೂಕುಸಿತ ಉಂಟಾಗಿದೆ ಎಂದು ವನಗೂರು ಗ್ರಾಪಂ ಅಧ್ಯಕ್ಷ ಆನಂದ್‌ ಹೇಳಿದ್ದಾರೆ.

click me!